Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 5:20 - ಕನ್ನಡ ಸಮಕಾಲಿಕ ಅನುವಾದ

20 ದೇವರ ಮನುಷ್ಯನಾದ ಎಲೀಷನ ಸೇವಕನಾಗಿರುವ ಗೇಹಜಿಯು, “ನನ್ನ ಯಜಮಾನನು ಈ ಅರಾಮ್ಯನಾದ ನಾಮಾನನು ತೆಗೆದುಕೊಂಡು ಬಂದದ್ದನ್ನು ಅವನ ಕೈಯಿಂದ ತೆಗೆದುಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಯೆಹೋವ ದೇವರ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ, ಅವನ ಕೈಯಿಂದ ಏನಾದರೂ ತೆಗೆದುಕೊಳ್ಳುವೆನು,” ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ನಾಮಾನನು ಸ್ವಲ್ಪ ದೂರಕ್ಕೆ ಹೋದ ನಂತರ ದೇವರ ಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು ಮನಸ್ಸಿನಲ್ಲಿ, “ನೋಡು, ನನ್ನ ಯಜಮಾನನು ಆ ಅರಾಮ್ಯನಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟನಲ್ಲಾ, ಯೆಹೋವನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ ಅವನಿಂದ ಸ್ವಲ್ಪವನ್ನಾದರೂ ತೆಗೆದುಕೊಂಡು ಬರುವೆನು” ಅಂದುಕೊಂಡು ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ನಾಮಾನನು ಸ್ವಲ್ಪದೂರಕ್ಕೆ ಹೋದನಂತರ ದೈವಪುರುಷನಾದ ಎಲೀಷನ ಸೇವಕ ಗೇಹಜಿಯು ಮನಸ್ಸಿನಲ್ಲೇ, “ನನ್ನ ಯಜಮಾನ ಆ ಸಿರಿಯಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟರಲ್ಲಾ! ಸರ್ವೇಶ್ವರನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ, ಅವನಿಂದ ಸ್ವಲ್ಪವನ್ನಾದರೂ ಬಾಚಿಕೊಂಡು ಬರುವೆನು,” ಎಂದುಕೊಂಡು ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ನಾಮಾನನು ಸ್ವಲ್ಪದೂರಕ್ಕೆ ಹೋದನಂತರ ದೇವರ ಮನುಷ್ಯನಾದ ಎಲೀಷನ ಸೇವಕ ಗೇಹಜಿಯು ಮನಸ್ಸಿನಲ್ಲಿ - ನನ್ನ ಯಜಮಾನನು ಆ ಅರಾಮ್ಯನಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟನಲ್ಲಾ; ಯೆಹೋವನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ ಅವನಿಂದ ಸ್ವಲ್ಪವನ್ನಾದರೂ ಬಾಚಿಕೊಂಡು ಬರುವೆನು ಅಂದುಕೊಂಡು ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆದರೆ ದೇವಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು, “ನೋಡು, ಅರಾಮ್ಯನಾದ ನಾಮಾನನು ತಂದಿದ್ದ ಕಾಣಿಕೆಯನ್ನು ಸ್ವೀಕರಿಸದೆ ನನ್ನ ಒಡೆಯನಾದ ಎಲೀಷನು ಅವನನ್ನು ಕಳುಹಿಸಿಬಿಟ್ಟನು! ಯೆಹೋವನಾಣೆಯಾಗಿ, ನಾನು ನಾಮಾನನ ಹಿಂದೆ ಓಡಿಹೋಗಿ ಅವನಿಂದ ಏನನ್ನಾದರೂ ಪಡೆಯುತ್ತೇನೆ!” ಎಂದು ತನ್ನೊಳಗೆ ಅಂದುಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 5:20
33 ತಿಳಿವುಗಳ ಹೋಲಿಕೆ  

ಆಗ ಎಲೀಷನು ತನ್ನ ಸೇವಕನಾದ ಗೇಹಜಿಗೆ, “ನೀನು ಶೂನೇಮ್ಯಳನ್ನು ಕರೆ,” ಎಂದನು. ಅವನು ಅವಳನ್ನು ಕರೆದದ್ದರಿಂದ ಅವಳು ಎಲೀಷನ ಮುಂದೆ ಬಂದು ನಿಂತಳು.


ಆಗ ಅವನು, “ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ, ದೇವರು ನನಗೆ ಇದರಂತೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ,” ಎಂದನು.


ಆಗ ಅವನು ಗೇಹಜಿಯನ್ನು ಕರೆದು ಅವನಿಗೆ, “ಶೂನೇಮ್ಯಳನ್ನು ಕರೆ,” ಎಂದನು. ಗೇಹಜಿಯು ಅವಳನ್ನು ಕರೆದನು. ಅವಳು ಎಲೀಷನ ಬಳಿಗೆ ಬಂದಾಗ ಅವನು, “ನಿನ್ನ ಪುತ್ರನನ್ನು ತೆಗೆದುಕೊಂಡು ಹೋಗು,” ಎಂದನು.


ಗೇಹಜಿಯು ಅವರಿಗೆ ಮುಂದಾಗಿ ಹೋಗಿ, ಆ ಕೋಲನ್ನು ಆ ಹುಡುಗನ ಮುಖದ ಮೇಲೆ ಇಟ್ಟನು. ಆದರೆ ಶಬ್ದವಾದರೂ, ಆಲೈಸುವುದಾದರೂ ಇರಲಿಲ್ಲ. ಆದ್ದರಿಂದ ಗೇಹಜಿಯು ಎಲೀಷನನ್ನು ಎದುರುಗೊಳ್ಳಲು ತಿರುಗಿ ಹೋಗಿ ಅವನಿಗೆ, “ಹುಡುಗನು ಎಚ್ಚರವಾಗಲಿಲ್ಲ,” ಎಂದನು.


ಏಕೆಂದರೆ ಸಭಾಧ್ಯಕ್ಷನು ದೇವರ ಕಾರ್ಯಭಾರವನ್ನು ಉಳ್ಳವನಾಗಿರುವುದರಿಂದ ನಿಂದಾರಹಿತನಾಗಿರಬೇಕು; ಅವನು ಗರ್ವಿಷ್ಠನೂ ಮುಂಗೋಪಿಯೂ ಮದ್ಯಪಾನ ಮಾಡುವವನೂ ಹೊಡೆದಾಡುವವನೂ ನೀಚಲಾಭವನ್ನು ಆಶಿಸುವವನೂ ಆಗಿರಬಾರದು.


ಏಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ, ತೀತನು ದಲ್ಮಾತ್ಯಕ್ಕೂ ಹೋದನು.


ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.


ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ಆದರೆ ದೇವರ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ.


ತನ್ನ ಹೆಂಡತಿಯ ಪೂರ್ಣ ತಿಳುವಳಿಕೆಯಿಂದ, ಬಂದ ಹಣದಲ್ಲಿ ಒಂದು ಭಾಗವನ್ನು ತನಗಾಗಿ ಇಟ್ಟುಕೊಂಡು, ಉಳಿದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿಟ್ಟನು.


ಸಾಯಂಕಾಲ ಊಟದ ಸಮಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಯೋಚನೆಯನ್ನು, ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಹಾಕಿದ್ದನು.


ಅದಕ್ಕೆ ಯೇಸು ಅವರಿಗೆ, “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿಕೊಂಡೆನಲ್ಲವೇ? ಆದರೆ ನಿಮ್ಮಲ್ಲಿಯೂ ಒಬ್ಬನು ಪಿಶಾಚನಾಗಿದ್ದಾನೆ,” ಎಂದರು.


“ಆಗ ಯಜಮಾನನು ಆ ಅಪನಂಬಿಗಸ್ತ ನಿರ್ವಾಹಕನು ಕುಯುಕ್ತಿಯಿಂದ ಮಾಡಿದ್ದನ್ನು ಹೊಗಳಿದನು. ಯೇಸು ಮುಂದುವರಿಸಿ ಹೇಳಿದ್ದು: ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಯುಕ್ತಿಯುಳ್ಳವರಾಗಿದ್ದಾರೆ.


ಅನಂತರ ಯೇಸು ಜನರಿಗೆ, “ಎಚ್ಚರಿಕೆ! ನೀವು ಎಲ್ಲಾ ಲೋಭದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ; ಏಕೆಂದರೆ ಜೀವನವು ಸಮೃದ್ಧಿಯಾದ ಆಸ್ತಿಗೆ ಆಧಾರವಾದದ್ದಲ್ಲ,” ಎಂದರು.


ಕಾನಾನ್ಯನಾದ ಸೀಮೋನ ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.


ಅನ್ಯಾಯದ ಲಾಭದಿಂದ ತನ್ನ ನಿವಾಸ ಕಟ್ಟಿಕೊಳ್ಳುವವನಿಗೂ, ತನ್ನ ಗೂಡನ್ನು ಉನ್ನತದಲ್ಲಿಡುವವನಿಗೂ, ನಾಶದ ಹಿಡಿತದಿಂದ ತಪ್ಪಿಸಿಕೊಳ್ಳಬಯಸುವವನಿಗೂ ಕಷ್ಟ!


“ಆದರೆ ನಿನ್ನ ಕಣ್ಣುಗಳು, ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ ಅಪರಾಧವಿಲ್ಲದವನ ರಕ್ತ ಚೆಲ್ಲುವುದರ ಮೇಲೆ ಮತ್ತು ಪೀಡೆಯನ್ನೂ, ಬಲಾತ್ಕಾರವನ್ನೂ ಮಾಡುವುದರ ಮೇಲೆಯೇ ಹೊರತು, ಮತ್ಯಾವುದರ ಮೇಲೆಯೂ ಇರುವುದಿಲ್ಲ.”


ಜ್ಞಾನದಿಂದ ಉತ್ತರಿಸಬಲ್ಲ ಏಳು ಜನರಿಗಿಂತ, ತಾನೇ ಜ್ಞಾನಿ ಎಂದು ಸೋಮಾರಿಯು ಭಾವಿಸುತ್ತಾನೆ.


ದುಷ್ಟನು ತನ್ನ ಹೃದಯಭಿಲಾಷೆಯಲ್ಲಿ ಕೊಚ್ಚಿಕೊಳ್ಳುತ್ತಾನೆ; ಅವನು ದುರಾಶೆಯುಳ್ಳವರನ್ನು ಆಶೀರ್ವದಿಸುವವನೂ ಯೆಹೋವ ದೇವರನ್ನು ಶಪಿಸುವವನೂ ಆಗಿದ್ದಾನೆ.


ಏಕೆಂದರೆ ನನ್ನ ಪುತ್ರನಾದ ಯೋನಾತಾನನಿಂದಾದರೂ ಉಂಟಾಗಿದ್ದರೆ, ಅವನು ಸತ್ತೇ ಸಾಯುವನೆಂದು ಇಸ್ರಾಯೇಲರನ್ನು ರಕ್ಷಿಸುವ ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ,” ಎಂದನು. ಆದರೆ ಸಮಸ್ತ ಜನರಲ್ಲಿ ಒಬ್ಬನಾದರೂ ಅವನಿಗೆ ಉತ್ತರ ಕೊಡಲಿಲ್ಲ.


ನಿನ್ನ ನೆರೆಯವನ ಮನೆಯನ್ನು ಆಶಿಸಬೇಡ. ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ. ಅವನ ದಾಸನನ್ನಾಗಲಿ, ಅವನ ದಾಸಿಯನ್ನಾಗಲಿ, ಅವನ ಎತ್ತನ್ನಾಗಲಿ, ಅವನ ಕತ್ತೆಯನ್ನಾಗಲಿ, ನಿನ್ನ ನೆರೆಯವನಿಗೆ ಇರುವ ಯಾವುದನ್ನೂ ಆಶಿಸಬೇಡ.”


ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯ ಊರಿನವನಾದ ಎಲೀಯನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಮಾತಿನ ಪ್ರಕಾರ ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳವರೆಗೆ ಮಂಜಾಗಲಿ ಅಥವಾ ಮಳೆಯಾಗಲಿ ಬೀಳುವುದಿಲ್ಲ,” ಎಂದನು.


ಆದರೆ ಪ್ರವಾದಿಯು, “ನಾನು ಯಾರ ಮುಂದೆ ನಿಲ್ಲುತ್ತೇನೋ ಆ ಯೆಹೋವ ದೇವರ ಜೀವದಾಣೆ, ನಾನು ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ಅವನು ತೆಗೆದುಕೊಳ್ಳಬೇಕೆಂದು ಬಲವಂತ ಮಾಡಿದರೂ, “ಬೇಡ,” ಎಂದನು.


ಅದರಂತೆ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ಕಂಡಾಗ, ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ, “ಎಲ್ಲಾ ಕ್ಷೇಮವೋ?” ಎಂದನು.


ಅರಸನು ದೇವರ ಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡಿ, “ಎಲೀಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರಿಸು,” ಎಂದು ಅವನಿಗೆ ಹೇಳಿದನು.


ಅರಾಮಿನ ಅರಸನಾದ ಬೆನ್ಹದದನು ಅಸ್ವಸ್ಥನಾಗಿರುವಾಗ ಎಲೀಷನು ದಮಸ್ಕಕ್ಕೆ ಬಂದನು. “ದೇವರ ಮನುಷ್ಯನು ಇಲ್ಲಿಗೆ ಬಂದಿದ್ದಾನೆ,” ಎಂದು ಅವನಿಗೆ ತಿಳಿಸಲಾಯಿತು.


ಆದರೆ ದೇವರ ಮನುಷ್ಯನು ಅವನ ಮೇಲೆ ಕೋಪಗೊಂಡು, “ನೀನು ಐದಾರು ಸಾರಿ ಹೊಡೆಯಬೇಕಾಗಿತ್ತು. ಆಗ ಅರಾಮ್ಯರನ್ನು ನಾಶಮಾಡುವವರೆಗೂ ಹೊಡೆಯುತ್ತಿದ್ದೆ. ಆದರೆ ಈಗ ಅರಾಮ್ಯರನ್ನು ಮೂರು ಸಾರಿ ಮಾತ್ರ ಹೊಡೆಯುವೆ,” ಎಂದನು.


ಕರ್ಮೆಲ್ ಬೆಟ್ಟದಲ್ಲಿರುವ ದೇವರ ಮನುಷ್ಯನ ಬಳಿಗೆ ಬಂದಳು. ಆಗ ದೇವರ ಮನುಷ್ಯನು ದೂರದಿಂದ ಅವಳು ಬರುವುದನ್ನು ಕಂಡನು. ಅವನು ತನ್ನ ಸೇವಕನಾದ ಗೇಹಜಿಗೆ, “ಇಗೋ, ಆ ಶೂನೇಮ್ಯಳು ಬರುತ್ತಿದ್ದಾಳೆ.


“ಇಸ್ರಾಯೇಲ್ ಎಂಬ ಹೆಸರಿನವರೂ, ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ: ಯೆಹೋವ ದೇವರ ಹೆಸರಿನ ಮೇಲೆ ಆಣೆ ಇಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.


ಈ ತೈಲವನ್ನು ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು