Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 3:26 - ಕನ್ನಡ ಸಮಕಾಲಿಕ ಅನುವಾದ

26 ಮೋವಾಬಿನ ಅರಸನು ಯುದ್ಧವು ತನಗೆ ಅತಿ ಕಷ್ಟವಾಯಿತೆಂದು ಕಂಡಾಗ, ಎದೋಮಿನ ಅರಸನ ಮೇಲೆ ಹೋಗಿ ಬೀಳುವ ನಿಮಿತ್ತ, ಖಡ್ಗ ಹಿಡಿಯುವ ಏಳು ನೂರು ಮಂದಿಯನ್ನು ತನ್ನ ಸಂಗಡ ತೆಗೆದುಕೊಂಡನು. ಆದರೆ ಅದು ಅವರಿಂದ ಆಗದೆ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಮೋವಾಬ್ಯರ ಅರಸನು ತಾನು ಯುದ್ಧದಲ್ಲಿ ಗೆಲ್ಲಲಾರೆನೆಂದು ತಿಳಿದು, ಏಳು ನೂರು ಮಂದಿ ಭಟರೊಡನೆ, ಸೈನ್ಯದೊಳಗೆ ನುಗ್ಗಿ ಎದೋಮ್ಯರ ಅರಸನ ಕಡೆಗೆ ಹೋಗಲು ಪ್ರಯತ್ನಿಸಿದನು. ಆದರೆ ಆಗದೆಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಮೋವಾಬ್ಯರ ಅರಸನು ತಾನು ಯುದ್ಧದಲ್ಲಿ ಗೆಲ್ಲಲಾರೆನೆಂದು ತಿಳಿದು ಏಳುನೂರು ಮಂದಿ ಯೋಧರೊಡನೆ ಸೈನ್ಯದೊಳಗೆ ನುಗ್ಗಿ ಎದೋಮ್ಯರ ಅರಸನ ಕಡೆಗೆ ಹೋಗಪ್ರಯತ್ನಿಸಿದನು; ಆದರೆ ಆಗದೆ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಮೋವಾಬ್ಯರ ಅರಸನು ತಾನು ಯುದ್ಧದಲ್ಲಿ ಗೆಲ್ಲಲಾರೆನೆಂದು ತಿಳಿದು ಏಳು ನೂರು ಮಂದಿ ಭಟರೊಡನೆ ಸೈನ್ಯದೊಳಗೆ ನುಗ್ಗಿ ಎದೋಮ್ಯರ ಅರಸನ ಕಡೆಗೆ ಹೋಗ ಪ್ರಯತ್ನಿಸಿದನು; ಆದರೆ ಆಗದೆಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆ ಯುದ್ಧವು ತನ್ನ ಶಕ್ತಿಯನ್ನು ಮೀರಿ ಹೋಯಿತೆಂದು ಮೋವಾಬಿನ ರಾಜನು ಗ್ರಹಿಸಿಕೊಂಡನು. ಆದ್ದರಿಂದ ಅವನು ಎದೋಮಿನ ರಾಜನನ್ನು ಕೊಂದುಹಾಕಲು ಖಡ್ಗಗಳನ್ನು ಹಿಡಿದ ತನ್ನ ಏಳುನೂರು ಜನರೊಂದಿಗೆ ನುಗ್ಗಿಹೋಗಲು ಪ್ರಯತ್ನಿಸಿದನು. ಆದರೆ ಅವರು ಎದೋಮಿನ ರಾಜನ ಬಳಿಗೆ ನುಗ್ಗಿ ಹೋಗಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 3:26
5 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಹೀಗೆ ಹೇಳುತ್ತಾನೆ: “ಮೋವಾಬಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ಎದೋಮಿನ ಅರಸನ ಎಲುಬುಗಳನ್ನು, ಸುಟ್ಟು ಸುಣ್ಣ ಮಾಡಿದ್ದಾನೆ.


ಹೀಗೆ ಇಸ್ರಾಯೇಲಿನ ಅರಸನು ಮತ್ತು ಯೆಹೂದದ ಅರಸನು, ಎದೋಮಿನ ಅರಸನೊಂದಿಗೆ ಹೊರಟು, ಸುತ್ತಾದ ಮಾರ್ಗದಲ್ಲಿ ಏಳು ದಿವಸ ನಡೆದರು. ಆದರೆ ಸೈನ್ಯಕ್ಕೂ, ಅವರು ತಂದಿದ್ದ ಪಶುಗಳಿಗೂ ನೀರು ಇಲ್ಲದೆ ಹೋಯಿತು.


ಇದಲ್ಲದೆ ಅವರು ಪಟ್ಟಣಗಳನ್ನು ಕೆಡವಿಹಾಕಿ, ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ, ಬಾವಿಗಳನ್ನೆಲ್ಲಾ ಮುಚ್ಚಿ, ಸಮಸ್ತ ಉತ್ತಮವಾದ ಮರಗಳನ್ನು ಕಡಿದುಹಾಕಿದರು. ಕೀರ್ ಹರೆಷೆತ್ ನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನು ಸುತ್ತಿಕೊಂಡು ಹೊಡೆದುಬಿಟ್ಟರು.


ಆಗ ಮೋವಾಬಿನ ಅರಸನು ತನಗೆ ಬದಲಾಗಿ ಆಳುವುದಕ್ಕಿರುವ ತನ್ನ ಹಿರಿಯ ಮಗನನ್ನು ತೆಗೆದುಕೊಂಡು, ಅವನನ್ನು ಗೋಡೆಯ ಮೇಲೆ ದಹನಬಲಿಯಾಗಿ ಅರ್ಪಿಸಿದನು. ಮೋವಾಬ್ಯರು ಇಸ್ರಾಯೇಲರಿಗೆ ವಿರೋಧವಾಗಿ ರೋಷವುಳ್ಳವರಾಗಿ ಅವರನ್ನು ಬಿಟ್ಟು, ತಮ್ಮ ದೇಶಕ್ಕೆ ಹಿಂದಿರುಗಿ ಹೋದರು.


ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು