Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 3:22 - ಕನ್ನಡ ಸಮಕಾಲಿಕ ಅನುವಾದ

22 ಮೋವಾಬ್ಯರು ಉದಯಕಾಲದಲ್ಲಿ ಎದ್ದು, ಆ ನೀರಿನ ಮೇಲೆ ಸೂರ್ಯ ಪ್ರಕಾಶ ಮೂಡಿದ್ದರಿಂದ ಆಚೆಯಲ್ಲಿರುವ ಆ ನೀರು ರಕ್ತದ ಹಾಗೆ ಕೆಂಪಾಗಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಬೆಳಿಗ್ಗೆ ಎದ್ದು ನೋಡಲಾಗಿ, ಎದುರಿಗೆ ಇದ್ದ ನೀರು ಮೋವಾಬ್ಯರ ದೃಷ್ಟಿಗೆ ಬಿದ್ದಿತು. ಸೂರ್ಯಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಬೆಳಿಗ್ಗೆ ಎದ್ದು ನೋಡುವಾಗ ಎದುರಿಗಿದ್ದ ನೀರು ಇವರ ದೃಷ್ಟಿಗೆ ಬಿದ್ದಿತು. ಸೂರ್ಯಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಎದುರಿಗಿದ್ದ ನೀರು ಇವರ ದೃಷ್ಟಿಗೆ ಬಿದ್ದಿತು. ಸೂರ್ಯ ಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿದ್ದದರಿಂದ ಇವರು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಮೋವಾಬಿನ ಜನರು ಅಂದು ಮುಂಜಾನೆ ನಸುಕಿನಲ್ಲೇ ಮೇಲೆದ್ದರು. ಸೂರ್ಯನ ಕಿರಣಗಳು ಕಣಿವೆಯ ನೀರಿನ ಮೇಲೆ ಹೊಳೆಯುತ್ತಿದ್ದವು. ಮೋವಾಬಿನ ಜನರಿಗೆ ಅವು ರಕ್ತದಂತೆ ಕಂಡವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 3:22
3 ತಿಳಿವುಗಳ ಹೋಲಿಕೆ  

ಅರಸರು ತಮ್ಮ ಸಂಗಡ ಯುದ್ಧಮಾಡುವುದಕ್ಕೆ ಬಂದಿದ್ದಾರೆಂದು ಮೋವಾಬ್ಯರು ಕೇಳಿದಾಗ, ಅವರು ಆಯುಧ ಧರಿಸತಕ್ಕ ಪ್ರಾಯಸ್ಥರು ಮೊದಲುಗೊಂಡು, ಸಮಸ್ತರನ್ನು ಕೂಡಿಸಿಕೊಂಡು ಮೇರೆಯಲ್ಲಿ ನಿಂತರು.


ಆಗ ಅವರು, “ಇದು ರಕ್ತವೇ. ಆ ಅರಸರು ತಮ್ಮನ್ನು ತಾವೇ ನಿಜವಾಗಿ ನಾಶಮಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ. ಈಗ ಮೋವಾಬ್ಯರೇ ಕೊಳ್ಳೆಗೆ ಬನ್ನಿರಿ,” ಎಂದು ಹೇಳಿಕೊಂಡರು.


ಏಕೆಂದರೆ ಯೆಹೋವ ದೇವರು ಪಾಳೆಯದಲ್ಲಿರುವ ಅರಾಮ್ಯರಿಗೆ ರಥಗಳ, ಕುದುರೆಗಳ ಮತ್ತು ಮಹಾ ಸೈನ್ಯದ ಶಬ್ದವೂ ಕೇಳಿಸುವಂತೆ ಮಾಡಿದ್ದರಿಂದ ಅವರು ಒಬ್ಬರಿಗೊಬ್ಬರು, “ಇಸ್ರಾಯೇಲಿನ ಅರಸನು ಹಿತ್ತಿಯರ ಅರಸರನ್ನೂ, ಈಜಿಪ್ಟಿನ ಅರಸರನ್ನೂ ನಮ್ಮ ಮೇಲೆ ದಾಳಿಮಾಡಲು ಅವರನ್ನು ಕೂಲಿಗೆ ಕರೆದಿದ್ದಾನೆ,” ಎಂದುಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು