Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 23:29 - ಕನ್ನಡ ಸಮಕಾಲಿಕ ಅನುವಾದ

29 ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ಸಹಾಯಮಾಡಲು ಯೂಫ್ರೇಟೀಸ್ ನದಿಯವರೆಗೆ ಹೋದನು. ಅರಸನಾದ ಯೋಷೀಯನು ಅವನನ್ನು ಯುದ್ಧದಲ್ಲಿ ಎದುರಿಸಲು ಹೋದಾಗ, ನೆಕೋ ಅವನನ್ನು ಎದುರಿಸಿ ಮೆಗಿದ್ದೋವಿನಲ್ಲಿ ಕೊಂದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅವನ ಕಾಲದಲ್ಲಿ, ಐಗುಪ್ತದ ಅರಸನಾದ ಫರೋಹ ನೆಕೋ ಎಂಬುವವನು ಅಶ್ಶೂರದ ಅರಸನಿಗೆ ವಿರುದ್ಧವಾಗಿ ಎದ್ದು ಯುದ್ಧಮಾಡುವುದಕ್ಕಾಗಿ ಯೂಫ್ರೆಟಿಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು ಅಲ್ಲಿ ಅವನಿಂದ ಹತನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ವಿರುದ್ಧ ಯುದ್ಧಮಾಡುವುದಕ್ಕಾಗಿ ಯೂಫ್ರಟಿಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು, ಕೂಡಲೆ ಅವನಿಂದ ಹತನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಅವನ ಕಾಲದಲ್ಲಿ ಐಗುಪ್ತದ ಅರಸನಾದ ಫರೋಹ ನೆಕೋ ಎಂಬವನು ಅಶ್ಶೂರದ ಅರಸನಿಗೆ ವಿರೋಧವಾಗಿ ಯುದ್ಧಮಾಡುವದಕ್ಕೋಸ್ಕರ ಯೂಫ್ರೇಟೀಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು ಕೂಡಲೆ ಅವನಿಂದ ಹತನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಯೋಷೀಯನ ಕಾಲದಲ್ಲಿ ಈಜಿಪ್ಟಿನ ರಾಜನಾದ ಫರೋಹ-ನೆಕೋ ಎಂಬವನು ಅಶ್ಶೂರದ ರಾಜನ ವಿರುದ್ಧವಾಗಿ ಹೋರಾಡಲು ಯೂಫ್ರೇಟೀಸ್ ನದಿಯ ಬಳಿಗೆ ಹೋದನು. ರಾಜನಾದ ಯೋಷೀಯನು ಫರೋಹ ನೆಕೋವನ ವಿರುದ್ಧ ಹೋರಾಡಲು ಯೂಫ್ರೇಟೀಸ್ ನದಿಯ ಬಳಿಗೆ ಹೋದನು. ಆದರೆ ಮೆಗಿದ್ದೋವಿನಲ್ಲಿ ಫರೋಹ ನೆಕೋವನು ಯೋಷೀಯನನ್ನು ನೋಡಿ, ಅವನನ್ನು ಕೊಂದು ಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 23:29
24 ತಿಳಿವುಗಳ ಹೋಲಿಕೆ  

ಈಜಿಪ್ಟನ್ನು ಕುರಿತದ್ದು: ಯೆಹೂದದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಈಜಿಪ್ಟಿನ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೇಟೀಸ್ ನದಿಯ ಬಳಿಯಿರುವ ಕರ್ಕೆಮೀಷಿನಲ್ಲಿ ಇರುವಾಗ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಆ ಸೈನ್ಯದ ಮೇಲೆ ದಾಳಿಮಾಡಿದ್ದರ ವಿಷಯ:


ಆ ದಿವಸದಲ್ಲಿ ಯೆರೂಸಲೇಮಿನಲ್ಲಿ ದೊಡ್ಡ ಗೋಳಾಟವಿರುವುದು. ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೋನಿನ ಗೋಳಾಟದ ಹಾಗೆಯೇ.


“ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸಮೀಪವಾದ ತಾನಕದಲ್ಲಿ ಯುದ್ಧಮಾಡಿದರು. ಅವರು ಬೆಳ್ಳಿ ದ್ರವ್ಯಗಳನ್ನು ತೆಗೆದುಕೊಳ್ಳಲಿಲ್ಲ.


ಆಗ ಅವು ಅವರನ್ನು ಹೀಬ್ರೂ ಭಾಷೆಯಲ್ಲಿ ಹರ್ಮಗೆದೋನ್ ಎಂಬ ಹೆಸರಿನ ಸ್ಥಳಕ್ಕೆ ಸೇರಿಸಿದವು.


ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು! ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು! ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು!


ಭೂಮಿಯ ಮೇಲೆ ನಡೆಯುವ ಇನ್ನೊಂದು ವ್ಯರ್ಥ ಕಾರ್ಯವಿದು: ದುಷ್ಟರಿಗೆ ಆಗಬೇಕಾದ ಶಿಕ್ಷೆಯನ್ನು ನೀತಿವಂತರು ಅನುಭವಿಸುತ್ತಾರೆ. ನೀತಿವಂತರಿಗೆ ಆಗಬೇಕಾದ ಪ್ರತಿಫಲವನ್ನು ದುಷ್ಟರು ಅನುಭವಿಸುತ್ತಾರೆ. ಇದು ಸಹ ವ್ಯರ್ಥವೆಂದು ನಾನು ಹೇಳುತ್ತೇನೆ.


ಆದರೆ ಈಜಿಪ್ಟಿನ ಅರಸನು ತನ್ನ ದೇಶದಿಂದ ತಿರುಗಿ ಬರಲಿಲ್ಲ. ಏಕೆಂದರೆ ಈಜಿಪ್ಟ್ ನದಿ ಮೊದಲುಗೊಂಡು ಯೂಫ್ರೇಟೀಸ್ ನದಿಯವರೆಗೂ ಈಜಿಪ್ಟಿನ ಅರಸನಿಗೆ ಇದ್ದದ್ದನ್ನೆಲ್ಲಾ ಬಾಬಿಲೋನಿನ ಅರಸನು ಸ್ವಾಧೀನಮಾಡಿಕೊಂಡಿದ್ದನು.


ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.


ಆದರೆ ಅಮಚ್ಯನು ಕೇಳದೆ ಹೋದನು. ಆದ್ದರಿಂದ ಇಸ್ರಾಯೇಲಿನ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು. ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ ಷೆಮೆಷ್ ಊರಿನ ಬಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು.


ಆಗ ಅಮಚ್ಯನು, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು.


ಯೆಹೂದದ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು, ಬೇತ್ ಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ ರಥದಲ್ಲಿ, “ಅವನನ್ನು ಸಹ ಸಂಹರಿಸಿರಿ,” ಎಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಎಂಬ ಸ್ಥಳಕ್ಕೆ ಏರಿಹೋಗುವ ಅಹಜ್ಯನನ್ನು ಮಾರ್ಗದಲ್ಲಿ ರಥದಲ್ಲಿ ಹೊಡೆದರು. ಅವನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು.


ಅಹೀಲೂದನ ಮಗ ಬಾಣಾ ಎಂಬವನು ತಾನಕ್, ಮೆಗಿದ್ದೋ, ಬೇತ್ ಷೆಯಾನಿನ ಎಲ್ಲಾ ಕಡೆಗಳಲ್ಲಿಯೂ ಆಳಿಕೆಮಾಡುತ್ತಿದ್ದನು. ಬೇತ್ ಶಾನ್ ಚಾರೆತಾನಿನ ಪಕ್ಕದಲ್ಲಿದ್ದ ಇಜ್ರೆಯೇಲ್ ಎಂಬ ಪಟ್ಟಣದ ಕೆಳಗಿತ್ತು. ಅವನ ಪ್ರಾಂತವು ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೆ ಯೊಕ್ಮೆಯಾಮಿನಲ್ಲಿ ಅಂತ್ಯಗೊಂಡಿತ್ತು.


ಮನಸ್ಸೆಯ ಗೋತ್ರದವರು ಬೇತ್ ಷೆಯಾನರನ್ನೂ, ಅವರ ಊರುಗಳವರನ್ನೂ; ತಾನಕದವರನ್ನೂ, ಅವರ ಊರುಗಳವರನ್ನೂ; ದೋರಿನವರನ್ನೂ, ಅವರ ಊರುಗಳವರನ್ನೂ; ಇಬ್ಲೆಯಾಮಿನವರನ್ನೂ, ಅವರ ಊರುಗಳವರನ್ನೂ, ಮೆಗಿದ್ದೋನಿನವರನ್ನೂ, ಅವರ ಊರುಗಳವರನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಆ ದೇಶದಲ್ಲಿ ವಾಸಿಸಬೇಕೆಂದಿದ್ದರು.


ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದಲ್ಲಿಯೂ ಇರುವ ಸೀಮೆಗಳಾದ ಬೇತ್ ಷೆಯಾನ, ಅದರ ಗ್ರಾಮಗಳೂ ಇಬ್ಲೆಯಾಮ್ ಅದರ ಗ್ರಾಮಗಳೂ ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಗೆ ಸೇರಿದವು. ಮೂರನೆಯ ಊರು ನಾಫೋತ್ ಆಗಿರುತ್ತದೆ.


ಯೋಷೀಯನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.


“ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನರ ವಿಷಯವಾಗಿ ಈ ಪ್ರಲಾಪವನ್ನೆತ್ತಿ,


ಮರಣ ಹೊಂದಿದ ಅರಸನಿಗಾಗಿ ಅಳಬೇಡಿರಿ. ಅವನಿಗಾಗಿ ಗೋಳಾಡಬೇಡಿರಿ. ಹೊರಟು ಹೋದವನಿಗಾಗಿ ಬಹಳವಾಗಿ ಅಳಿರಿ. ಏಕೆಂದರೆ ಅವನು ತಿರುಗಿ ಬರುವುದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವುದೇ ಇಲ್ಲ.


ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ, ಈ ಸ್ಥಳದಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದೇ ಇಲ್ಲ.


ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದಲ್ಲಿಯೇ ಸಾಯುವನು. ಅವನು ಈ ದೇಶವನ್ನು ಇನ್ನು ನೋಡುವುದಿಲ್ಲ.”


“ವೇಗಶಾಲಿಗಳು ಓಡಿ ಹೋಗದಿರಲಿ; ಪರಾಕ್ರಮಶಾಲಿಯು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿಬೀಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು