Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 22:7 - ಕನ್ನಡ ಸಮಕಾಲಿಕ ಅನುವಾದ

7 ಆದರೆ ಅವರು ನಂಬಿಗಸ್ತರಾಗಿ ಕೆಲಸ ಮಾಡಿದ್ದರಿಂದ, ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳುವ ಅವಶ್ಯಕತೆ ಇಲ್ಲ, ಎಂದು ಹೇಳು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವರು ನಂಬಿಗಸ್ತರಾಗಿರುವುದರಿಂದ ಅವರ ವಶಕ್ಕೆ ಕೊಡಲ್ಪಡುವ ಹಣದ ಲೆಕ್ಕವನ್ನು ಕೇಳಬಾರದು” ಎಂದು ಆಜ್ಞಾಪಿಸಿ ಅವನನ್ನು ಯೆಹೋವನ ಆಲಯಕ್ಕೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅವರು ನಂಬಿಗಸ್ತರಾಗಿರುವುದರಿಂದ ಅವರ ವಶಕ್ಕೆ ಕೊಡಲಾಗುವ ಹಣದ ಲೆಕ್ಕವನ್ನು ಕೇಳಬಾರದು,” ಎಂದು ಆಜ್ಞಾಪಿಸಿ ಅವನನ್ನು ಸರ್ವೇಶ್ವರನ ಆಲಯಕ್ಕೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅವರು ನಂಬಿಗಸ್ತರಾಗಿರುವದರಿಂದ ಅವರ ವಶಕ್ಕೆ ಕೊಡಲ್ಪಡುವ ಹಣದ ಲೆಕ್ಕವನ್ನು ಕೇಳಬಾರದು ಎಂದು ಆಜ್ಞಾಪಿಸಿ ಅವನನ್ನು ಯೆಹೋವನ ಆಲಯಕ್ಕೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನೀವು ಕೆಲಸಗಾರರಿಗೆ ಕೊಡುವ ಹಣವನ್ನು ಲೆಕ್ಕಹಾಕಬೇಡಿ. ಯಾಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದಾರೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 22:7
11 ತಿಳಿವುಗಳ ಹೋಲಿಕೆ  

ಇದಲ್ಲದೆ ಅವರು ಕೆಲಸಮಾಡುವವರಿಗೆ ಹಣ ಕೊಡುವುದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ, ಅವರಿಂದ ಹಣದ ಲೆಕ್ಕವನ್ನು ತೆಗೆದುಕೊಳ್ಳಲಿಲ್ಲ, ಏಕೆಂದರೆ ಅವರು ನಂಬಿಗಸ್ತರಾಗಿದ್ದರು.


ಹೀಗಿರುವುದರಿಂದ ನಂಬಿಗಸ್ತರಾಗಿರುವುದು ನಿರ್ವಾಹಕರಲ್ಲಿ ಅವಶ್ಯವಾಗಿ ಕಾಣತಕ್ಕ ಸದ್ಗುಣವಾಗಿದೆ.


ನಂಬಿಗಸ್ತನಾದ ಮನುಷ್ಯನು ಆಶೀರ್ವಾದಗಳಲ್ಲಿ ತುಂಬಿತುಳುಕುವನು; ಆದರೆ ಧನವಂತನಾಗಲು ಆತುರಪಡುವವನು, ನಿರ್ದೋಷಿಯಾಗಿರುವುದಿಲ್ಲ.


ಆಮೇಲೆ ನಾನು ನನ್ನ ಸಹೋದರನಾದ ಹನಾನೀ ಮತ್ತು ಅರಮನೆಯ ಅಧಿಪತಿಯಾದ ಹನನ್ಯ ಇವರಿಗೆ ಯೆರೂಸಲೇಮಿನ ಜವಾಬ್ದಾರಿಕೆಯನ್ನು ಒಪ್ಪಿಸಿದೆನು. ಏಕೆಂದರೆ ಇವನು ಸತ್ಯವಂತನಾಗಿಯೂ, ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.


ಕೆಲಸ ಮುಗಿಸಿದ ಮೇಲೆ, ಮಿಕ್ಕ ಅರಸನ ಮುಂದೆಯೂ ಯೆಹೋಯಾದಾವನ ಮುಂದೆಯೂ ತಂದರು. ಅದರಿಂದ ಯೆಹೋವ ದೇವರ ಆಲಯಕ್ಕೋಸ್ಕರ ಬಂಗಾರ ಬೆಳ್ಳಿ ಪಾತ್ರೆಗಳಾದ ಸೇವೆಯ ಪಾತ್ರೆಗಳು, ಅರ್ಪಣೆಯ ಪಾತ್ರೆಗಳು, ಸೌಟುಗಳು ಮಾಡಲಾಗಿದ್ದವು. ಯೆಹೋಯಾದಾವನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಯೆಹೋವ ದೇವರ ಆಲಯದಲ್ಲಿ ದಹನಬಲಿಗಳನ್ನು ಅರ್ಪಿಸಿದರು.


ಪ್ರಿಯ ಸ್ನೇಹಿತನೇ, ಸಹೋದರರಿಗೂ ಪರಿಚಯವಿಲ್ಲದವರಿಗೂ ನೀನು ಮಾಡುವುದನ್ನೆಲ್ಲಾ ನಂಬಿಗಸ್ತನಾಗಿ ಮಾಡುತ್ತೀ.


ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನು ಇತರರಿಗೆ ಸಹ ಬೋಧಿಸಲು ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು.


ಆಲಯ ದುರಸ್ತಿ ಮಾಡುವಂತೆ ಯೆಹೋವ ದೇವರ ಆಲಯದಲ್ಲಿ ಕೆಲಸ ಮಾಡುವವರಾದ ಬಡಗಿಯರಿಗೂ, ಶಿಲ್ಪಿಗಾರರಿಗೂ, ಕಲ್ಲುಕೆಲಸದವರಿಗೂ ಕೊಟ್ಟು, ಆಲಯವನ್ನು ದುರಸ್ತಿ ಮಾಡಲು ಮರಗಳನ್ನೂ, ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವುದಕ್ಕೆ ಕೊಡಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು