Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 21:2 - ಕನ್ನಡ ಸಮಕಾಲಿಕ ಅನುವಾದ

2 ಆದರೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಜನಾಂಗಗಳ ಅಸಹ್ಯವಾದವುಗಳನ್ನು ಅವನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವನು ಯೆಹೋವನು ಇಸ್ರಾಯೇಲರ ರಾಜ್ಯದಿಂದ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಯೆಹೋವನು ಇಸ್ರಾಯೇಲ್ಯರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆತನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಇಸ್ರೇಲರು ತಮ್ಮ ದೇಶಕ್ಕೆ ಬಂದಾಗ ಯೆಹೋವನು ಹೊರಗಟ್ಟಿದ ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಮನಸ್ಸೆಯು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 21:2
20 ತಿಳಿವುಗಳ ಹೋಲಿಕೆ  

ಸಮಾರ್ಯವೆಂಬಾಕೆಯು ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದೆ. ನೀನು ಮಾಡಿದ ಲೆಕ್ಕವಿಲ್ಲದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ.


ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯು ಯೆರೂಸಲೇಮಿನಲ್ಲಿ ನಡಿಸಿದ್ದಕ್ಕೆ ಪ್ರತಿಫಲವಾಗಿ ನಾನು ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಂತೆ ಮಾಡುವೆನು.


ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ, ಜನರೂ ಜನಾಂಗಗಳ ಅಸಹ್ಯಗಳನ್ನು ಹಿಂಬಾಲಿಸಿ ಬಹಳವಾಗಿ ಅಪನಂಬಿಗಸ್ತರಾಗಿ, ಯೆಹೋವ ದೇವರು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.


ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಹೊತ್ತಿ ಉರಿಯುತ್ತಿದೆ, ಅದು ಆರಿಹೋಗುವುದಿಲ್ಲ.’


ಇದಲ್ಲದೆ ಮನಸ್ಸೆಯು ಯೆಹೋವ ದೇವರ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಪರಾಧದ ರಕ್ತದಿಂದ ತುಂಬಿಸಿದನು.


“ಈ ಆಲಯದಲ್ಲಿಯೂ, ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿಯೂ, ನಾನು ಆಯ್ದುಕೊಂಡ ಯೆರೂಸಲೇಮಿನಲ್ಲಿಯೂ, ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನು,” ಎಂದು ಯೆಹೋವ ದೇವರು ದಾವೀದನಿಗೂ, ಅವನ ಮಗನಾದ ಸೊಲೊಮೋನನಿಗೂ ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ತಾನು ಮಾಡಿದ ಅಶೇರ ವಿಗ್ರಹಸ್ತಂಭವನ್ನು ಇಟ್ಟನು.


ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ಯೆಹೋವ ದೇವರಿಗೆ ಅಸಹ್ಯವಾದ ಅನೇಕ ಸಂಗತಿಗಳನ್ನು ಮಾಡುತ್ತಾರೆ. ಅಂದರೆ, ಅವರು ತಮ್ಮ ಗಂಡು ಮಕ್ಕಳನ್ನು, ಹೆಣ್ಣು ಮಕ್ಕಳನ್ನು ತಮ್ಮ ದೇವರುಗಳಿಗೆ ಬಲಿಯಾಗಿ ಬೆಂಕಿಯಲ್ಲಿ ಸುಡುತ್ತಾರೆ. ಆದ್ದರಿಂದ ನೀವು ನಿಮ್ಮ ಯೆಹೋವ ದೇವರನ್ನು ಆ ರೀತಿಯಲ್ಲಿ ಆರಾಧಿಸಬಾರದು.


“ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಕೆಟ್ಟವುಗಳಿಗಿಂತಲೂ ಅಸಹ್ಯವಾದವುಗಳನ್ನು ಮಾಡಿದ್ದರಿಂದಲೂ, ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಕ್ಕೆ ಪ್ರೇರೇಪಿಸಿದ್ದರಿಂದಲೂ,


ಅವನು ತನ್ನ ತಂದೆ ಮನಸ್ಸೆಯು ಮಾಡಿದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು.


ಯೆಹೋವಾಹಾಜನು ತನ್ನ ಪೂರ್ವಿಕರಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.


ಅವನು ತನ್ನ ತಂದೆಯು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು.


ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಬಹು ಶುಭವನ್ನು ಹಾಳುಮಾಡುವನು.


ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು, ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು. ಏಕೆಂದರೆ ನಾನು ಕೂಗಿದಾಗ, ಯಾರು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ, ಇವರು ಕೇಳಲಿಲ್ಲ. ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡರು.”


ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನಗೆ ಮುಂಚೆ ಇದ್ದ ಇಸ್ರಾಯೇಲಿನ ಅರಸರ ಹಾಗಿರಲಿಲ್ಲ.


ಅವನು ತನ್ನ ಪಿತೃಗಳ ದೇವರಾದ ಯೆಹೋವ ದೇವರ ಮಾರ್ಗವನ್ನು ಬಿಟ್ಟುಬಿಟ್ಟು,


ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ. ಏಕೆಂದರೆ ನೀವು ನನ್ನ ನಿಯಮಗಳಂತೆ ನಡೆಯಲಿಲ್ಲ. ನನ್ನ ನ್ಯಾಯವಿಧಿಗಳನ್ನು ಪಾಲಿಸಲಿಲ್ಲ. ಆದರೆ ನಿಮ್ಮ ಸುತ್ತಲಿರುವ ಇತರ ಜನಾಂಗಗಳ ಆಚಾರಗಳ ಪ್ರಕಾರ ಮಾಡಿದ್ದೀರಿ.”


ಆಮೇಲೆ ನೀನು ಹೇಳಬೇಕಾದದ್ದೇನೆಂದರೆ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪಟ್ಟಣವು ಅದರ ಮಧ್ಯದಲ್ಲಿ ಅದರ ದಂಡನೆಯ ಕಾಲ ಬರುವಂತೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧಮಾಡುವಂತೆ ತನ್ನಲ್ಲಿ ವಿಗ್ರಹ ಮಾಡಿಕೊಂಡಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು