ಆದ್ದರಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ನನ್ನ ಜೀವದಾಣೆ,” “ನಿಶ್ಚಯವಾಗಿ ಮೋವಾಬು ಸೊದೋಮಿನ ಅಮ್ಮೋನ್ಯರು ಗೊಮೋರದ ಹಾಗೆ ಆಗುವುದು. ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಳಿಗಳುಳ್ಳಂಥ ನಿತ್ಯವಾಗಿ ಹಾಳಾದ ಸ್ಥಳವಾಗುವರು. ನನ್ನ ಜನರಲ್ಲಿ ಉಳಿದವರು ಅವರನ್ನು ಸುಲಿದುಕೊಳ್ಳುವರು. ನನ್ನ ಜನರಲ್ಲಿ ಮಿಕ್ಕಾದವರು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.”
ಅವನು ನೀರಿನ ಬುಗ್ಗೆಯ ಬಳಿಗೆ ಹೊರಟುಹೋಗಿ, ನೀರಿನಲ್ಲಿ ಉಪ್ಪು ಹಾಕಿ, “ ‘ಆ ನೀರನ್ನು ಶುದ್ಧಮಾಡಿದೆನು. ಇನ್ನು ಮೇಲೆ ಅದರಿಂದ ಮರಣವೂ, ಬಂಜೆತನವೂ ಆಗದಿರಲಿ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.