2 ಅರಸುಗಳು 2:15 - ಕನ್ನಡ ಸಮಕಾಲಿಕ ಅನುವಾದ15 ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಗುಂಪು ಅವನನ್ನು ಕಂಡಾಗ, “ಎಲೀಯನ ಆತ್ಮವು ಎಲೀಷನ ಮೇಲೆ ನಿಂತಿರುವುದು,” ಎಂದು ಹೇಳಿ, ಎದುರುಗೊಳ್ಳಲು ಬಂದು, ಅವನ ಮುಂದೆ ನೆಲದವರೆಗೂ ಅಡ್ಡಬಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ದೂರದಲ್ಲಿ ನಿಂತಿದ್ದ ಯೆರಿಕೋವಿನ ಪ್ರವಾದಿ ಮಂಡಳಿಯವರು ಇದನ್ನು ಕಂಡು, “ಎಲೀಯನಿಗಿದ್ದ ಆತ್ಮವು ಎಲೀಷನ ಮೇಲೆ ಬಂದಿದೆ” ಎಂದು ತಿಳಿದುಕೊಂಡು ಅವನನ್ನು ಎದುರುಗೊಂಡು, ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ದೂರದಲ್ಲಿ ನಿಂತಿದ್ದ ಜೆರಿಕೋವಿನ ಪ್ರವಾದಿಮಂಡಲಿಯವರು ಇದನ್ನು ಕಂಡು, “ಎಲೀಯನಿಗಿದ್ದ ಆತ್ಮಶಕ್ತಿ ಎಲೀಷನ ಮೇಲೆ ಬಂದು ನೆಲಸಿದೆ,” ಎಂದು ತಿಳಿದುಕೊಂಡರು. ಅವನನ್ನು ಎದುರುಗೊಂಡು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ದೂರದಲ್ಲಿ ನಿಂತಿದ್ದ ಯೆರಿಕೋವಿನ ಪ್ರವಾದಿ ಮಂಡಲಿಯವರು ಇದನ್ನು ಕಂಡು ಎಲೀಯನಿಗಿದ್ದ ಆತ್ಮವು ಎಲೀಷನ ಮೇಲೆ ಬಂದಿತೆಂದು ತಿಳಿದುಕೊಂಡು ಅವನನ್ನು ಎದುರುಗೊಂಡು ಅವನಿಗೆ ಸಾಷ್ಟಾಂಗ ನಮಸ್ಕಾರಮಾಡಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. ಅಧ್ಯಾಯವನ್ನು ನೋಡಿ |