Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 17:27 - ಕನ್ನಡ ಸಮಕಾಲಿಕ ಅನುವಾದ

27 ಆಗ ಅಸ್ಸೀರಿಯದ ಅರಸನು, “ನೀವು ಅಲ್ಲಿಂದ ತೆಗೆದುಕೊಂಡು ಬಂದ ಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ. ಅವನು ಅಲ್ಲಿ ವಾಸವಾಗಿರಲಿ. ಅವನೇ ಅವರಿಗೆ ಆ ದೇಶದ ದೇವರು ಅಪೇಕ್ಷಿಸುವುದನ್ನು ಬೋಧಿಸಲಿ,” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆಗ ಅಶ್ಶೂರದ ಅರಸನು ಅವರಿಗೆ, “ಅಲ್ಲಿಂದ ಇಲ್ಲಿಗೆ ಸೆರೆಯವರಾಗಿ ಬಂದಿರುವ ಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕಳುಹಿಸಿರಿ. ಅವನು ಹೋಗಿ ಅಲ್ಲಿ ವಾಸವಾಗಿದ್ದು ಆ ದೇಶದ ದೇವರಿಗೆ ನಡೆಯತಕ್ಕ ರೀತಿಯನ್ನು ಅವರಿಗೆ ಕಲಿಸಲಿ” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಆಗ ಅವನು, “ಅಲ್ಲಿಂದ ಇಲ್ಲಿಗೆ ಸೆರೆಯವರಾಗಿ ಬಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿರಿ. ಅವನು ಹೋಗಿ ಅಲ್ಲಿ ವಾಸವಾಗಿದ್ದು ಆ ನಾಡಿನ ದೇವರಿಗೆ ಸೇವೆಮಾಡುವ ರೀತಿಯನ್ನು ಅವರಿಗೆ ಕಲಿಸಲಿ,” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆಗ ಅವನು ಅವರಿಗೆ - ಅಲ್ಲಿಂದ ಇಲ್ಲಿಗೆ ಸೆರೆಯವರಾಗಿ ಬಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿರಿ. ಅವನು ಹೋಗಿ ಅಲ್ಲಿ ವಾಸವಾಗಿದ್ದು ಆ ದೇಶದ ದೇವರಿಗೆ ನಡೆಯತಕ್ಕ ರೀತಿಯನ್ನು ಅವರಿಗೆ ಕಲಿಸಲಿ ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆದ್ದರಿಂದ ಅಶ್ಶೂರದ ರಾಜನು, “ನೀವು ಸಮಾರ್ಯದಿಂದ ಕೆಲವು ಯಾಜಕರನ್ನು ಕರೆದೊಯ್ದಿರುವಿರಿ. ನಾನು ಸಮಾರ್ಯದಿಂದ ಸೆರೆಹಿಡಿದು ತಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿ. ಆ ಯಾಜಕನು ಹೋಗಿ ಅಲ್ಲಿಯೇ ನೆಲೆಸಲಿ. ನಂತರ ಆ ಯಾಜಕನ ಆ ದೇಶದ ದೇವರ ಕಟ್ಟಳೆಗಳನ್ನು ಜನರಿಗೆ ಬೋಧಿಸಲಿ” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 17:27
7 ತಿಳಿವುಗಳ ಹೋಲಿಕೆ  

ಉನ್ನತ ಸ್ಥಳಗಳಿಗೋಸ್ಕರವೂ ದೆವ್ವಗಳಿಗೋಸ್ಕರವೂ, ಯಾರೊಬ್ಬಾಮನು ಮಾಡಿದ ಕರುಗಳ ಮೂರ್ತಿಪೂಜೆಗಾಗಿ ತಾನೇ ಯಾಜಕರನ್ನು ನೇಮಿಸಿದ್ದರಿಂದ,


ಅವನು ಯೆಹೋವ ದೇವರ ಅಪ್ಪಣೆಯಿಂದ ಆ ಪೀಠವನ್ನು ಕುರಿತು: “ಪೀಠವೇ, ಪೀಠವೇ! ದಾವೀದನ ಸಂತಾನದಲ್ಲಿ ಯೋಷೀಯ ಎಂಬ ಹೆಸರುಳ್ಳ ಒಬ್ಬ ಮಗನು ಹುಟ್ಟುವನು. ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಬಲಿಯಾಗಿ ಅರ್ಪಿಸುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವವು,” ಎಂದು ಯೆಹೋವ ದೇವರು ಹೇಳುತ್ತಾರೆ ಎಂದನು.


ಅವನು ಉನ್ನತ ಸ್ಥಳಗಳಲ್ಲಿ ಪೂಜಾಸ್ಥಳಗಳನ್ನು ಕಟ್ಟಿಸಿ, ಲೇವಿಯರಲ್ಲದ ಸಾಮಾನ್ಯ ಜನರನ್ನು ಯಾಜಕರನ್ನಾಗಿ ನೇಮಿಸಿದನು.


ಆಗ ಮೀಕನು, “ನನಗೆ ಒಬ್ಬ ಲೇವಿಯನು ಯಾಜಕನಾಗಿರುವುದರಿಂದ, ಯೆಹೋವ ದೇವರು ನನಗೆ ಒಳ್ಳೆಯದನ್ನು ಮಾಡುವರೆಂದು ಈಗ ತಿಳಿಯುತ್ತೇನೆ,” ಎಂದುಕೊಂಡನು.


ಆದಕಾರಣ ಸೇವಕರು ಅಸ್ಸೀರಿಯದ ಅರಸನಿಗೆ, “ನೀನು ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಜನರು ಆ ದೇಶದ ದೇವರು ಅಪೇಕ್ಷಿಸುವುದನ್ನು ತಿಳಿಯದೆ ಇದ್ದಾರೆ. ಆದುದರಿಂದ, ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದ್ದಾರೆ. ಅವು ಅವರನ್ನು ಕೊಂದುಹಾಕುತ್ತವೆ,” ಎಂದು ತಿಳಿಸಿದರು.


ಆಗ ಅವರು ಸಮಾರ್ಯದಿಂದ ಕರೆತಂದ ಯಾಜಕರಲ್ಲಿ, ಒಬ್ಬನು ಬಂದು ಬೇತೇಲಿನಲ್ಲಿ ವಾಸವಾಗಿದ್ದು, ಅವರು ಯೆಹೋವ ದೇವರಿಗೆ ಭಯಪಡತಕ್ಕ ವಿಧವನ್ನು ಅವರಿಗೆ ಬೋಧಿಸಿದನು.


“ಎಜ್ರನೇ, ನಿನ್ನಲ್ಲಿರುವ ನಿನ್ನ ದೇವರ ಜ್ಞಾನಕ್ಕೆ ಅನುಸಾರವಾಗಿ ನ್ಯಾಯಾಧೀಶರನ್ನೂ, ದಂಡಾಧಿಕಾರಿಯನ್ನೂ ನೇಮಿಸು. ಅವರು ನದಿಯಾಚೆಯ ಇಸ್ರಾಯೇಲರಲ್ಲಿ, ನಿನ್ನ ದೇವರ ನಿಯಮಗಳನ್ನು ಅರಿತಿರುವವರೆಲ್ಲರ ವ್ಯಾಜ್ಯಗಳನ್ನು ತೀರಿಸಲಿ. ಅರಿಯದವರಿಗೆ ನೀನು ಅದನ್ನು ಕಲಿಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು