Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 17:22 - ಕನ್ನಡ ಸಮಕಾಲಿಕ ಅನುವಾದ

22 ಇಸ್ರಾಯೇಲರು ಯಾರೊಬ್ಬಾಮನು ಮಾಡಿದ ಸಮಸ್ತ ಪಾಪಗಳಲ್ಲಿ ನಡೆದರು. ಅವುಗಳನ್ನು ತೊರೆದುಬಿಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಇಸ್ರಾಯೇಲರು ಯಾರೊಬ್ಬಾಮನ ದುರ್ಮಾರ್ಗದಲ್ಲಿ ನಡೆದು ಅವನು ಮಾಡಿದ ಪಾಪಗಳನ್ನು ತೊರೆದು ಬಿಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅವರು ಯಾರೊಬ್ಬಾಮನ ದುರ್ಮಾರ್ಗದಲ್ಲೇ ನಡೆಯುವುದನ್ನು ಬಿಡಲಿಲ್ಲವಾದುದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯೆಹೋವನ ಭಕ್ತಿಯಿಂದ ಬೀಳಿಸಿ ಮಹಾ ಪಾಪಕ್ಕೆ ಒಳಪಡಿಸಿದನು. ಅವರು ಯಾರೊಬ್ಬಾಮನ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದ್ದರಿಂದ ಇಸ್ರೇಲರು ಯಾರೊಬ್ಬಾಮನು ಮಾಡಿದ ಪಾಪಗಳನ್ನೆಲ್ಲ ಅನುಸರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 17:22
10 ತಿಳಿವುಗಳ ಹೋಲಿಕೆ  

ಅವನು ತನ್ನ ಪಿತೃಗಳು ಮಾಡಿದ ಪ್ರಕಾರ, ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.


ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಸಮಸ್ತ ಪಾಪಗಳನ್ನು ತೊರೆದುಬಿಡದೆ, ಅವುಗಳಲ್ಲಿ ಮುಂದುವರೆದನು.


ಆದರೆ ಅವರು ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಮನೆಯ ಪಾಪಗಳನ್ನು ಬಿಟ್ಟುಬಿಡದೆ ಅವುಗಳಲ್ಲಿ ಮುಂದುವರಿದರು. ಇದಲ್ಲದೆ ಸಮಾರ್ಯದಲ್ಲಿ ಅಶೇರ ಸ್ತಂಭ ಇನ್ನೂ ಉಳಿದಿತ್ತು.


ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ಬಿಟ್ಟುಬಿಡದೆ, ಅವುಗಳನ್ನು ಹಿಂಬಾಲಿಸಿದನು.


ಯೇಹುವು ತನ್ನ ಪೂರ್ಣಹೃದಯದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ನಿಯಮದಲ್ಲಿ ನಡೆಯಲು ಪ್ರಯತ್ನಿಸಲಿಲ್ಲ. ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.


ಆದರೆ ಬೇತೇಲಿನಲ್ಲಿಯೂ, ದಾನಿನಲ್ಲಿಯೂ ಇರುವ ಬಂಗಾರದ ಕರುಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ.


ಆದರೂ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಗೆ ಅವನು ಅಂಟಿಕೊಂಡು ಅವುಗಳನ್ನು ಬಿಟ್ಟು ತೊಲಗದೆ ಇದ್ದನು.


ದೇವರು ಇಸ್ರಾಯೇಲನ್ನು ದಾವೀದನ ಸಂತಾನದಿಂದ ವಿಭಾಗಿಸಿದಾಗ, ಅವರು ನೆಬಾಟನ ಮಗ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲನ್ನು ಯೆಹೋವ ದೇವರ ಮಾರ್ಗದಿಂದ ತಪ್ಪಿಸಿ, ಮಹಾ ಪಾಪಮಾಡಲು ಪ್ರೇರೇಪಿಸಿದನು.


ಯೆಹೋವ ದೇವರು ಪ್ರವಾದಿಗಳಾದ ತಮ್ಮ ಸೇವಕರ ಮುಖಾಂತರ ಎಚ್ಚರಿಸಿದ ಹಾಗೆ, ಇಸ್ರಾಯೇಲನ್ನು ದೇವರು ತಮ್ಮ ಸಮ್ಮುಖದಿಂದ ತೆಗೆದುಹಾಕಿದರು. ಹೀಗೆ ಇಸ್ರಾಯೇಲರು ಬಹು ಕಾಲದವರೆಗೂ ತಮ್ಮ ದೇಶದಿಂದ ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಇರಬೇಕಾಯಿತು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.


ಅಲ್ಲಿ ದಾನ್ಯರು ಕೆತ್ತಿದ ವಿಗ್ರಹವನ್ನು ತಮಗಾಗಿ ಸ್ಥಾಪಿಸಿಕೊಂಡರು. ಇಸ್ರಾಯೇಲರು ಸೆರೆಯಾಗಿ ಹೋಗುವವರೆಗೆ ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆದ ಯೋನಾತಾನನೂ ಅವನ ವಂಶದವರೂ ಅವನ ಮಕ್ಕಳೂ ದಾನನ ಗೋತ್ರದವರಿಗೆ ಯಾಜಕರಾಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು