Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 16:16 - ಕನ್ನಡ ಸಮಕಾಲಿಕ ಅನುವಾದ

16 ಅರಸನಾದ ಆಹಾಜನು ಆಜ್ಞಾಪಿಸಿದ ಪ್ರಕಾರವೇ ಯಾಜಕನಾದ ಊರೀಯನು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯಾಜಕನಾದ ಊರೀಯನು ಅರಸನಾದ ಆಹಾಜನು ಹೇಳಿದಂತೆಯೇ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಯಾಜಕ ಊರೀಯನು ಅರಸನು ಹೇಳಿದಂತೆಯೇ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯಾಜಕನಾದ ಊರೀಯನು ಅರಸನು ಹೇಳಿದಂತೆಯೇ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ರಾಜನಾದ ಅಹಾಜನು ಆಜ್ಞಾಪಿಸಿದಂತೆಯೇ ಯಾಜಕನಾದ ಊರೀಯನು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 16:16
11 ತಿಳಿವುಗಳ ಹೋಲಿಕೆ  

ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವುದಕ್ಕಾಗಿ ಬಿಳಾಮನ ದೋಷವನ್ನು ಮಾಡುವುದಕ್ಕೆ ದುರಾಶೆಯಿಂದ ಓಡುವವರಾಗಿದ್ದಾರೆ. ಅವರು ಕೋರಹನಂತೆ ಎದುರು ಮಾತನಾಡಿ ನಾಶವಾಗುವವರಾಗಿದ್ದಾರೆ. ಆದ್ದರಿಂದ ಅವರ ಗತಿ ಏನೆಂದು ಹೇಳಲಿ!


ದೇವರು ನಮ್ಮನ್ನು ಅನುಮೋದಿಸಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿಕೊಟ್ಟಿದ್ದಾರೆ. ಹಾಗಿರುವುದರಿಂದ, ನಾವು ಮನುಷ್ಯರನ್ನು ಮೆಚ್ಚಿಸದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ.


ಪೇತ್ರ ಮತ್ತು ಇತರ ಅಪೊಸ್ತಲರು ಉತ್ತರವಾಗಿ, “ನಾವು ಮನುಷ್ಯರಿಗೆ ವಿಧೇಯರಾಗಿರುವುದಕ್ಕಿಂತ ದೇವರಿಗೆ ವಿಧೇಯರಾಗಿರಬೇಕಲ್ಲ!


ಆದರೆ ಪೇತ್ರ ಮತ್ತು ಯೋಹಾನರು, “ದೇವರಿಗಿಂತ ಹೆಚ್ಚಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ಸರಿಯಾದದ್ದೋ? ಎಂಬುದರ ಬಗ್ಗೆ ನೀವೇ ತೀರ್ಮಾನ ಮಾಡಿಕೊಳ್ಳಿರಿ.


ಯಾಜಕನಾದ ಊರೀಯನು ಅದರ ಪ್ರಕಾರ ಒಂದು ಬಲಿಪೀಠವನ್ನು ಹಾಗೆಯೇ ಅರಸನಾದ ಆಹಾಜನು ದಮಸ್ಕದಿಂದ ಬರುವ ಮೊದಲೇ ಕಟ್ಟಿ ಮುಗಿಸಿದನು.


ಆಗ ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ, “ಉದಯದಲ್ಲಿ ದಹನಬಲಿಯನ್ನೂ, ಸಾಯಂಕಾಲದ ಧಾನ್ಯ ಸಮರ್ಪಣೆಯನ್ನೂ, ಪಾನದ್ರವ್ಯವನ್ನೂ ದೊಡ್ಡ ಹೊಸ ಬಲಿಪೀಠದ ಮೇಲೆ ಅರ್ಪಿಸಿ, ದಹನಬಲಿಯ ರಕ್ತವೆಲ್ಲವನ್ನೂ ಚಿಮುಕಿಸಿದನು. ಆದರೆ ಕಂಚಿನ ಬಲಿಪೀಠವನ್ನು ನಾನು ಮಾರ್ಗದರ್ಶನಕ್ಕಾಗಿ ಉಪಯೋಗಿಸುವೆನು,” ಎಂದು ಆಜ್ಞಾಪಿಸಿದನು.


ಅರಸನಾದ ಆಹಾಜನು ಪೀಠದ ಅಂಚುಗಳನ್ನು ಕೊಯ್ದು, ಕಂಚಿನ ಕಡಲೆಂಬ ದೊಡ್ಡ ಪಾತ್ರೆಯನ್ನು ಅದರ ಮೇಲಿನಿಂದ ಇಳಿಸಿ, ಅದನ್ನು ಕಲ್ಲುಗಳ ಕಟ್ಟೆಯ ಮೇಲೆ ಇಟ್ಟನು.


ಇದಲ್ಲದೆ, “ಯೆರೂಸಲೇಮಿನಲ್ಲಿ ನನ್ನ ಹೆಸರನ್ನು ಸ್ಥಾಪಿಸುವೆನು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು.


ಇದಲ್ಲದೆ ಯೆರೂಸಲೇಮಿನಲ್ಲಿ, “ನನ್ನ ಹೆಸರು ಯುಗಯುಗಕ್ಕೂ ಇರುವುದು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಹಳ ಬಲಿಪೀಠಗಳನ್ನು ಕಟ್ಟಿಸಿದನು.


ನಾನು ಯಾಜಕನಾದ ಊರೀಯನನ್ನೂ ಯೆಬೆರೆಕ್ಯನ ಮಗನಾದ ಜೆಕರ್ಯನನ್ನೂ ನಂಬಿಗಸ್ತ ಸಾಕ್ಷಿಗಳನ್ನಾಗಿ ಇರಿಸಿಕೊಂಡೆನು.


“ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡ ತಕ್ಕದ್ದು. ದೈವ ಬೋಧನೆಯನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು, ಏಕೆಂದರೆ ಅವನು ಸೇನಾಧೀಶ್ವರ ಯೆಹೋವ ದೇವರ ದೂತನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು