Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 15:10 - ಕನ್ನಡ ಸಮಕಾಲಿಕ ಅನುವಾದ

10 ಯಾಬೇಷನ ಮಗ ಶಲ್ಲೂಮನು ಜೆಕರ್ಯನ ಮೇಲೆ ಒಳಸಂಚುಮಾಡಿ, ಜನರ ಮುಂದೆ ಅವನನ್ನು ಹೊಡೆದು, ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಯಾಬೇಷನ ಮಗನಾದ ಶಲ್ಲೂಮನು ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಯಾಬೇಷನ ಮಗ ಶಲ್ಲೂಮನು ಅವರಿಗೆ ವಿರುದ್ಧ ಒಳಸಂಚುಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನೇ ಅರಸನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಯಾಬೇಷನ ಮಗನಾದ ಶಲ್ಲೂಮನು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯಾಬೇಷನ ಮಗನಾದ ಶಲ್ಲೂಮನು ಜೆಕರ್ಯನ ವಿರುದ್ಧವಾಗಿ ಸಂಚುಗಳನ್ನು ಮಾಡಿದನು. ಶಲ್ಲೂಮನು ಜೆಕರ್ಯನನ್ನು ಜನರ ಮುಂದೆ ಕೊಂದುಹಾಕಿ ಹೊಸ ರಾಜನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 15:10
16 ತಿಳಿವುಗಳ ಹೋಲಿಕೆ  

“ಇಸಾಕನ ಉನ್ನತ ಪೂಜಾಸ್ಥಳಗಳು ನಾಶವಾಗುವುವು. ಇಸ್ರಾಯೇಲಿನ ಪರಿಶುದ್ಧ ಸ್ಥಳಗಳು ಹಾಳಾಗುವುವು. ನಾನು ಖಡ್ಗದೊಂದಿಗೆ ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು.”


ಇದಲ್ಲದೆ ಏಲನ ಮಗ ಹೋಶೇಯನು ರೆಮಲ್ಯನ ಮಗ ಪೆಕಹನ ವಿರುದ್ಧ ಒಳಸಂಚುಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಸಂಹರಿಸಿ, ಅವನಿಗೆ ಬದಲಾಗಿ ಅರಸನಾದನು.


ಆದರೆ ಅವನ ಅಧಿಪತಿಯಾದಂಥ ರೆಮಲ್ಯನ ಮಗ ಪೆಕಹನು ಗಿಲ್ಯಾದಿನ ಐವತ್ತು ಮಂದಿಯನ್ನು ತನ್ನ ಸಂಗಡ ಕೂಡಿಸಿಕೊಂಡು ಪೆಕಹ್ಯನ ವಿರುದ್ಧ ಒಳಸಂಚುಮಾಡಿ, ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಪೆಕಹ್ಯನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದುಹಾಕಿದನು. ಅನಂತರ, ಪೆಕಹ್ಯನಿಗೆ ಬದಲಾಗಿ ಪೆಕಹನು ಅರಸನಾದನು.


ಗಾದಿಯ ಮಗ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದು, ಸಮಾರ್ಯದಲ್ಲಿ ಯಾಬೇಷನ ಮಗ ಶಲ್ಲೂಮನನ್ನು ಹೊಡೆದು, ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.


ಯೇಹುವು ಬಾಗಿಲಲ್ಲಿ ಪ್ರವೇಶಿಸಿದಾಗ ಅವಳು, “ತನ್ನ ಯಜಮಾನನನ್ನು ಕೊಂದ ಜಿಮ್ರಿಗೆ ಸಮಾನನೇ, ಕ್ಷೇಮವೋ?” ಎಂದಳು.


ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು. ಅವನು ರಥದಲ್ಲಿ ಕೆಳಗೆ ಮುದುರಿಕೊಂಡು ಬಿದ್ದನು.


ಯೆಹೂದದ ಅರಸನಾದ ಆಸನ ಮೂರನೆಯ ವರುಷದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.


ಅವನು ತನ್ನ ಪಿತೃಗಳು ಮಾಡಿದ ಪ್ರಕಾರ, ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.


ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.


ಅವನ ಸೇವಕರಾದ ಶಿಮೆಯಾತನ ಮಗ ಯೋಜಾಬಾದ್ ಮತ್ತು ಶೋಮೇರನ ಮಗ ಯೆಹೋಜಾಬಾದ್ ಎಂಬವರು ಅರಸನನ್ನು ಕೊಂದರು. ಯೋವಾಷನ ಜನರು ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.


ಯೆರೂಸಲೇಮಿನವರು ಅಮಚ್ಯನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು.


ಮೆನಹೇಮನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಪೆಕಹ್ಯನು ಅವನಿಗೆ ಬದಲಾಗಿ ಅರಸನಾದನು.


ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ. ಅವರು ತಮ್ಮ ನ್ಯಾಯಾಧಿಪತಿಗಳನ್ನು ನುಂಗಿಬಿಡುತ್ತಾರೆ. ಅವರ ಅರಸರೆಲ್ಲರು ಬಿದ್ದು ಹೋಗಿದ್ದಾರೆ. ಅವರಲ್ಲಿ ಒಬ್ಬನಾದರೂ ನನ್ನನ್ನು ಕರೆಯುವುದಿಲ್ಲ.


ಅವರು ಅರಸರನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ. ಅವರು ನನ್ನ ಅನುಮತಿಯಿಲ್ಲದೆ ರಾಜಕುಮಾರರನ್ನು ಆಯ್ಕೆ ಮಾಡಿದ್ದಾರೆ. ಅವರು ತಾವು ನಾಶವಾಗುವಂತೆ ತಮ್ಮ ಬೆಳ್ಳಿಯಿಂದಲೂ, ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು