Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 11:7 - ಕನ್ನಡ ಸಮಕಾಲಿಕ ಅನುವಾದ

7 ಇದಲ್ಲದೆ ಸಬ್ಬತ್ ದಿನದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಯೆಹೋವ ದೇವರ ಆಲಯದಲ್ಲಿರುವ ಅರಸನನ್ನು ಕಾಯುವವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇದಲ್ಲದೆ, ಸಬ್ಬತ್ ದಿನದಲ್ಲಿ ಅರಸನೊಂದಿಗೆ ಯೆಹೋವನ ಆಲಯವನ್ನು ಕಾಯುವುದಕ್ಕಾಗಿ ಬರುವ ಸೈನ್ಯವು ಇಬ್ಬಗೆಯಾಗಿದ್ದುಕೊಂಡು ಯೆಹೋವನ ಆಲಯವನ್ನು ಕಾಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅದೂ ಅಲ್ಲದೆ, ಸಬ್ಬತ್ ದಿನದಲ್ಲಿ ಕಾಯುವುದಕ್ಕಾಗಿ ಬರುವ ನಿಮ್ಮ ಇಮ್ಮಡಿಯಾದ ಸೈನ್ಯವು ಸರ್ವೇಶ್ವರನ ಆಲಯದಲ್ಲಿ ಅರಸನನ್ನು ಕಾಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಇದಲ್ಲದೆ ಸಬ್ಬತ್‍ದಿನದಲ್ಲಿ ಕಾಯುವದಕ್ಕಾಗಿ ಬರುವ ನಿಮ್ಮ ಇಮ್ಮಡಿಯಾದ ಸೈನ್ಯವು ಯೆಹೋವನ ಆಲಯದಲ್ಲಿರುವ ಅರಸನನ್ನು ಕಾಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಸಬ್ಬತ್‌ದಿನದಂದು ಕಾಯಲು ಬರುವ ನಿಮ್ಮೆಲ್ಲರ ಎರಡು ಪಡೆಗಳು ಯೆಹೋವನ ಆಲಯವನ್ನು ಕಾಯುತ್ತಾ ರಾಜನಾದ ಯೆಹೋವಾಷನನ್ನು ಕಾಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 11:7
5 ತಿಳಿವುಗಳ ಹೋಲಿಕೆ  

ಆದರೆ ಯಾಜಕರೂ, ಲೇವಿಯರಲ್ಲಿ ಸೇವೆ ಮಾಡುವವರೂ ಅಲ್ಲದೆ ಬೇರೆ ಯಾರೂ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಕೂಡದು. ಅವರು ಪ್ರತಿಷ್ಠಿತರಾದುದರಿಂದ ಒಳಗೆ ಪ್ರವೇಶಿಸಲಿ. ಆದರೆ ಸಮಸ್ತ ಜನರು ಯೆಹೋವ ದೇವರ ಆಜ್ಞಾನುಸಾರವಾಗಿ ಹೊರಗಿರಬೇಕು.


ಅವರಿಗೆ, “ನೀವು ಮಾಡಬೇಕಾದದ್ದೇನೆಂದರೆ, ಸಬ್ಬತ್ ದಿನದಲ್ಲಿ ಪ್ರವೇಶಿಸುವ ನಿಮ್ಮಲ್ಲಿರುವ ಮೂರನೇ ಒಂದು ಭಾಗವು ಅರಮನೆಯ ಕಾವಲುಗಾರರಾಗಿರಬೇಕು.


ಇನ್ನೊಂದು ಭಾಗವು ಸೂರ್ ಎಂಬ ಬಾಗಿಲ ಬಳಿಯಲ್ಲಿಯೂ, ಮತ್ತೊಂದು ಭಾಗವು ಕಾವಲಿನ ಹಿಂದೆ ಇರುವ ಬಾಗಿಲ ಬಳಿಯಲ್ಲಿಯೂ ಇರಿ. ಹೀಗೆಯೇ ದೇವಾಲಯ ಕಾವಲು ಮುರಿಯದ ಹಾಗೆ ಅದನ್ನು ಕಾಯಿರಿ.


ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ಇರಬೇಕು. ಯಾವನಾದರೂ ನಿಮ್ಮ ಸಾಲುಗಳಲ್ಲಿ ನುಗ್ಗುವಂಥವನನ್ನು ಸಂಹರಿಸಬೇಕು. ಆದರೆ ಅರಸನು ಹೊರಗೆ ಹೋಗುವಾಗಲೂ, ಒಳಗೆ ಬರುವಾಗಲೂ ನೀವು ಅವನ ಜೊತೆಯಲ್ಲಿಯೇ ಇರಬೇಕು,” ಎಂದು ಆಜ್ಞಾಪಿಸಿದನು.


ಗ್ರಾಮಗಳಲ್ಲಿ ಇದ್ದ ಅವರ ಸಹೋದರರು ತಮ್ಮ ಕ್ರಮದ ಪ್ರಕಾರವಾಗಿ ಏಳೇಳು ದಿವಸಗಳಲ್ಲಿ ಬರುವ ನೇಮಕವಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು