2 ಅರಸುಗಳು 10:26 - ಕನ್ನಡ ಸಮಕಾಲಿಕ ಅನುವಾದ26 ಬಾಳನ ದೇವಸ್ಥಾನದಿಂದ ವಿಗ್ರಹಗಳನ್ನು ತಂದು ಅವುಗಳನ್ನು ಸುಟ್ಟುಬಿಟ್ಟರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಅವರು ಅಲ್ಲಿನ ಬಾಳ್ ದೇವತೆಯ ವಿಗ್ರಹ ಸ್ತಂಭಗಳನ್ನು ತೆಗೆದುಕೊಂಡು ಬಂದು ಸುಟ್ಟುಹಾಕಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಬಾಳ್ ದೇವತೆಯ ದೇವಸ್ಥಾನಕ್ಕೆ ಸೇರಿದ ಕೇರಿಯನ್ನು ಪ್ರವೇಶಿಸಿ ಅಲ್ಲಿನ ವಿಗ್ರಹಸ್ತಂಭಗಳನ್ನು ತೆಗೆದುಕೊಂಡು ಬಂದು ಸುಟ್ಟುಬಿಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಅಲ್ಲಿನ ವಿಗ್ರಹ ಸ್ತಂಭಗಳನ್ನು ತೆಗೆದುಕೊಂಡು ಬಂದು ಸುಟ್ಟುಬಿಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಅವರು ಬಾಳನ ಆಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ಹೊರತಂದು, ಆಲಯವನ್ನು ಸುಟ್ಟುಹಾಕಿದರು. ನಂತರ ಅವರು ಬಾಳನ ಸ್ಮಾರಕಸ್ತಂಭಗಳನ್ನು ಚೂರುಚೂರು ಮಾಡಿದರು. ಅಧ್ಯಾಯವನ್ನು ನೋಡಿ |
ಅರಸನಾದ ಯೋಷೀಯನು ಬಾಳನಿಗೋಸ್ಕರವೂ, ಅಶೇರನಿಗೋಸ್ಕರವೂ, ಆಕಾಶದ ಸೈನ್ಯಕ್ಕೋಸ್ಕರವೂ ಉಪಯೋಗಿಸುತ್ತಿದ್ದ ಸಮಸ್ತ ಸಲಕರಣೆಗಳನ್ನು ಯೆಹೋವ ದೇವರ ಆಲಯದಿಂದ ಹೊರಗೆ ತೆಗೆದುಕೊಂಡು ಬರಬೇಕೆಂದು ಮಹಾಯಾಜಕನಾದ ಹಿಲ್ಕೀಯನಿಗೂ, ಮುಖ್ಯಯಾಜಕರಿಗೂ, ದ್ವಾರಪಾಲಕರಿಗೂ ಆಜ್ಞಾಪಿಸಿದನು. ಅರಸನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಕಣಿವೆಯ ಬಯಲಿನಲ್ಲಿ ಸುಡಿಸಿ, ಅವುಗಳ ಬೂದಿಯನ್ನು ಬೇತೇಲಿಗೆ ತರುವಂತೆ ಮಾಡಿದನು.