Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 10:21 - ಕನ್ನಡ ಸಮಕಾಲಿಕ ಅನುವಾದ

21 ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ, ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಾಳನ ದೇವಸ್ಥಾನ ಪೂರ್ಣವಾಗಿ ತುಂಬಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಯೇಹುವು ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ, ಬಾಳ್ ದೇವತೆಯನ್ನು ಸೇವಿಸುವ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಸೇರಿ ಬರಬೇಕೆಂದು ಪ್ರಕಟಿಸಿದನು. ಅವನು ಎಲ್ಲಾ ಕಡೆಗಳಿಗೂ ದೂತರನ್ನು ಕಳುಹಿಸಿದ್ದರಿಂದ ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಎಲ್ಲರೂ ಸೇರಿ ಬಂದಿದ್ದರು. ಬಾಳ್ ದೇವತೆಯ ದೇವಸ್ಥಾನವು ಪೂರ್ಣವಾಗಿ ಅವನ ಪೂಜಾರಿಗಳಿಂದ, ಭಕ್ತರಿಂದ ತುಂಬಿಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಆಗ ಬಾಳ್ ದೇವತೆಯ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಕೂಡಿಬಂದುದರಿಂದ ಬಾಳನ ದೇವಸ್ಥಾನ ಸಂಪೂರ್ಣವಾಗಿ ತುಂಬಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆಗ ಬಾಳನ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಕೂಡಿ ಬಂದದರಿಂದ ಬಾಳನ ದೇವಸ್ಥಾನವೂ ಪೂರ್ಣವಾಗಿ ತುಂಬಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಬಳಿಕ ಅವನು ಇಸ್ರೇಲಿನ ಪ್ರದೇಶದಲ್ಲೆಲ್ಲಾ ಒಂದು ಸಂದೇಶವನ್ನು ಕಳುಹಿಸಿದನು. ಬಾಳನ ಆರಾಧಕರೆಲ್ಲರೂ ಬಂದರು. ಮನೆಯಲ್ಲಿ ಯಾರೂ ಉಳಿಯಲಿಲ್ಲ. ಬಾಳನ ಆರಾಧಕರೆಲ್ಲ ಬಾಳನ ಆಲಯಕ್ಕೆ ಬಂದರು. ಜನರಿಂದ ಆಲಯವು ತುಂಬಿಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 10:21
7 ತಿಳಿವುಗಳ ಹೋಲಿಕೆ  

ಇದಲ್ಲದೆ ತಾನು ಸಮಾರ್ಯದಲ್ಲಿ ಕಟ್ಟಿಸಿದ ಬಾಳನ ಮನೆಯಲ್ಲಿ ಬಾಳನಿಗೆ ಬಲಿಪೀಠವನ್ನು ಕಟ್ಟಿಸಿದನು.


ಆಗ ಅವು ಅವರನ್ನು ಹೀಬ್ರೂ ಭಾಷೆಯಲ್ಲಿ ಹರ್ಮಗೆದೋನ್ ಎಂಬ ಹೆಸರಿನ ಸ್ಥಳಕ್ಕೆ ಸೇರಿಸಿದವು.


ನಾನು ಎಲ್ಲಾ ಜನಾಂಗಗಳನ್ನು ಕೂಡಿಸುವೆನು. ಯೆಹೋಷಾಫಾಟನ ತಗ್ಗಿಗೆ ಅವರನ್ನು ತರುವೆನು. ಅಲ್ಲಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯವಾಗಿ ಅವರ ಸಂಗಡ ವ್ಯಾಜ್ಯವಾಡುವೆನು. ಅವರು ಅವರನ್ನು ಜನಾಂಗಗಳಲ್ಲಿ ಚದುರಿಸಿ, ನನ್ನ ದೇಶವನ್ನು ಹಂಚಿಕೊಂಡರು.


ದೇಶದ ಜನರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು. ಆಗ ಯಾಜಕನಾದ ಯೆಹೋಯಾದಾವನು ಯೆಹೋವ ದೇವರ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು.


ಆ ಮನೆಯು ಸ್ತ್ರೀಪುರುಷರಿಂದ ತುಂಬಿತ್ತು. ಅಲ್ಲಿ ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಇದ್ದರು. ಇದಲ್ಲದೆ ಸಂಸೋನನು ವಿನೋದ ಮಾಡುವುದನ್ನು ಕಾಣುವುದಕ್ಕೆ ಮಾಳಿಗೆಯ ಮೇಲೆ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಸ್ತ್ರೀ ಪುರುಷರಿದ್ದರು.


ಆಗ ಅವನು ವಸ್ತ್ರಗಳ ಮನೆಯ ಮೇಲಧಿಕಾರಿಗೆ, “ಬಾಳನನ್ನು ಸೇವಿಸುವ ಸಮಸ್ತರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಾ,” ಎಂದು ಹೇಳಿದ್ದರಿಂದ, ಅವನು ಅವರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು