2 ಅರಸುಗಳು 1:13 - ಕನ್ನಡ ಸಮಕಾಲಿಕ ಅನುವಾದ13 ತಿರುಗಿ ಅರಸನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವನನ್ನೂ, ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯವನು ಬಂದು ಎಲೀಯನ ಮುಂದೆ ತನ್ನ ಮೊಣಕಾಲೂರಿಕೊಂಡು ಅವನಿಗೆ, “ದೇವರ ಮನುಷ್ಯನೇ, ನೀನು ದಯಮಾಡು, ನನ್ನ ಪ್ರಾಣವೂ, ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆಗ ಅರಸನು ಇನ್ನೊಬ್ಬ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳನ್ನೂ ಕಳುಹಿಸಿದನು. ಇವನು ಬಂದು ಎಲೀಯನ ಮುಂದೆ ಮೊಣಕಾಲೂರಿ ಬೇಡಿಕೊಂಡು ಅವನಿಗೆ, “ದೇವರ ಮನುಷ್ಯನೇ, ನನ್ನ ಮತ್ತು ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಅರಸನು ಮತ್ತೊಬ್ಬ ಪಚಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು, ಎಲೀಯನ ಮುಂದೆ ಮೊಣಕಾಲೂರಿ, “ದೈವಪುರುಷರೇ, ನನ್ನ ಮತ್ತು ನನ್ನ ಸೇವಕರಾದ ಈ ಐವತ್ತುಮಂದಿಯ ಪ್ರಾಣ ನಿಮ್ಮ ದೃಷ್ಟಿಯಲ್ಲಿ ಮೌಲ್ಯವುಳ್ಳದ್ದಾಗಿರಲಿ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಅರಸನು ಮತ್ತೊಬ್ಬ ಪಂಚದಶಾಧಿಪತಿಯನ್ನು ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು ಎಲೀಯನ ಮುಂದೆ ಮೊಣಕಾಲೂರಿ ಅವನನ್ನು - ದೇವರ ಮನುಷ್ಯನೇ, ನನ್ನ ಮತ್ತು ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಅಹಜ್ಯನು ಮೂರನೆಯ ಸೇನಾಧಿಪತಿಯನ್ನು ಐವತ್ತು ಜನರೊಂದಿಗೆ ಕಳುಹಿಸಿದನು. ಐವತ್ತು ಮಂದಿಯ ಮೂರನೆಯ ಸೇನಾಧಿಪತಿಯು ಎಲೀಯನ ಬಳಿಗೆ ಬಂದನು. ಸೇನಾಧಿಪತಿಯು ತನ್ನ ಮೊಣಕಾಲುಗಳ ಮೇಲೆ ಬಿದ್ದು ನಮಸ್ಕರಿಸಿದನು. ಸೇನಾಧಿಪತಿಯು ಎಲೀಯನನ್ನು ಬೇಡಿಕೊಳ್ಳುತ್ತಾ ಅವನಿಗೆ, “ದೇವ ಮನುಷ್ಯನೇ, ನನ್ನ ಮತ್ತು ಈ ಐವತ್ತು ಜನರ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ! ಅಧ್ಯಾಯವನ್ನು ನೋಡಿ |