1 ಸಮುಯೇಲ 9:9 - ಕನ್ನಡ ಸಮಕಾಲಿಕ ಅನುವಾದ9 ಪೂರ್ವದಲ್ಲಿ ಇಸ್ರಾಯೇಲಿನಲ್ಲಿ ಯಾವನಾದರೂ ದೇವರ ಹತ್ತಿರ ವಿಚಾರಿಸಬೇಕಾದರೆ, “ಪ್ರವಾದಿಯ ಬಳಿಗೆ ಹೋಗೋಣ ಬನ್ನಿರಿ,” ಎನ್ನುವನು. ಏಕೆಂದರೆ ಈ ಕಾಲದಲ್ಲಿ ಪ್ರವಾದಿ ಎಂದು ಕರೆಯಿಸಿಕೊಳ್ಳುವವರನ್ನು ಪೂರ್ವಕಾಲದಲ್ಲಿ ದರ್ಶಿ ಎಂದು ಕರೆಯುತ್ತಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 (ಪೂರ್ವ ಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಯಾವನಾದರೂ ದೈವೋತ್ತರ ಕೇಳಬೇಕಾದರೆ “ದೇವ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ” ಎನ್ನುವರು. ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು, ಆ ಕಾಲದಲ್ಲಿ ದೇವದರ್ಶಿಗಳೆಂದು ಕರೆಯುತ್ತಿದ್ದರು.) ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 (ಪೂರ್ವಕಾಲದಲ್ಲಿ ಇಸ್ರಯೇಲರಲ್ಲಿ ಯಾವನಾದರೂ ದೇವೋತ್ತರ ಕೇಳಬೇಕಾದರೆ ದಾರ್ಶನಿಕನ ಬಳಿಗೆ ಹೋಗೋಣ ಬನ್ನಿ ಎನ್ನುವನು; ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು ಆ ಕಾಲದಲ್ಲಿ ದಾರ್ಶನಿಕರೆಂದು ಕರೆಯುತ್ತಿದ್ದರು.) ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 (ಪೂರ್ವಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಯಾವನಾದರೂ ದೈವೋತ್ತರಕೇಳಬೇಕಾದರೆ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ ಎನ್ನುವನು; ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು ಆ ಕಾಲದಲ್ಲಿ ದರ್ಶಿಗಳೆಂದು ಕರೆಯುತ್ತಿದ್ದರು.) ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 (ಹಿಂದಿನ ಕಾಲದಲ್ಲಿ ಇಸ್ರೇಲರು ಪ್ರವಾದಿಯನ್ನು “ದರ್ಶಿ” ಎಂದು ಕರೆಯುತ್ತಿದ್ದರು. ದೇವರಿಂದ ಏನಾದರೂ ಕೇಳಬೇಕಾಗಿದ್ದರೆ, “ದರ್ಶಿಯ ಬಳಿಗೆ ಹೋಗೋಣ” ಎನ್ನುತ್ತಿದ್ದರು.) ಅಧ್ಯಾಯವನ್ನು ನೋಡಿ |
“ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ, ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ಮೋಶೆಯ ಎಲ್ಲಾ ನಿಯಮದ ಪ್ರಕಾರ ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳಿರಿ,” ಎಂದು ಯೆಹೋವ ದೇವರು ಸಮಸ್ತ ಪ್ರವಾದಿಗಳ ಮುಖಾಂತರವಾಗಿಯೂ, ಸಮಸ್ತ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ, ಯೆಹೂದಕ್ಕೂ ಎಚ್ಚರಿಕೆ ಕೊಟ್ಟಿದ್ದರು.