Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 4:20 - ಕನ್ನಡ ಸಮಕಾಲಿಕ ಅನುವಾದ

20 ಅವಳು ಸಾಯುವ ವೇಳೆಯಲ್ಲಿ, ಅವಳ ಬಳಿಯಲ್ಲಿ ನಿಂತಿರುವ ಸ್ತ್ರೀಯರು, “ಭಯಪಡಬೇಡ. ಗಂಡು ಮಗುವನ್ನು ಹೆತ್ತಿದ್ದೀ,” ಎಂದು ಅವಳಿಗೆ ಹೇಳಿದರು. ಆಕೆ ಅವರ ಮಾತಿಗೆ ಲಕ್ಷ್ಯವನ್ನೂ ಕೊಡಲಿಲ್ಲ, ಪ್ರತ್ಯುತ್ತರವನ್ನೂ ಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆಕೆಯು ಸಾಯುವ ಸಮಯದಲ್ಲಿ ಬಳಿಯಲ್ಲಿ ನಿಂತಿದ್ದ ಸ್ತ್ರೀಯರು, “ಭಯಪಡಬೇಡ, ಮಗನನ್ನು ಹಡೆದಿರುವೆ” ಎಂದು ಹೇಳಿದರು. ಆಕೆಯು ಅವರ ಮಾತಿಗೆ ಲಕ್ಷ್ಯಕೊಡಲಿಲ್ಲ, ಪ್ರತ್ಯುತ್ತರಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆಕೆ ಸಾಯುವ ಸಮಯದಲ್ಲಿ ಬಳಿಯಲ್ಲಿ ನಿಂತಿದ್ದ ಮಹಿಳೆಯರು, “ಭಯಪಡಬೇಡ, ಮಗನನ್ನು ಹೆತ್ತಿದ್ದೀ,” ಎಂದು ಹೇಳಿದರು. ಆಕೆ ಅವರ ಮಾತಿಗೆ ಲಕ್ಷ್ಯಕೊಡಲಿಲ್ಲ. ಪ್ರತ್ಯುತ್ತರವನ್ನೂ ಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆಕೆಯು ಸಾಯುವ ಸಮಯದಲ್ಲಿ ಬಳಿಯಲ್ಲಿ ನಿಂತಿದ್ದ ಸ್ತ್ರೀಯರು - ಭಯಪಡಬೇಡ, ಮಗನನ್ನು ಹೆತ್ತಿದ್ದೀ ಎಂದು ಹೇಳಿದರು. ಆಕೆಯು ಅವರ ಮಾತಿಗೆ ಲಕ್ಷ್ಯಕೊಡಲಿಲ್ಲ, ಪ್ರತ್ಯುತ್ತರ ಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಅವಳಿಗೆ ಸಹಾಯ ಮಾಡುತ್ತಿದ್ದ ಸ್ತ್ರೀಯರು, “ಚಿಂತಿಸಬೇಡ. ನೀನು ಗಂಡುಮಗುವಿಗೆ ಜನ್ಮ ನೀಡಿರುವೆ” ಎಂದು ಹೇಳಿದರು. ಆದರೆ ಏಲಿಯ ಸೊಸೆಯು ಅವರ ಮಾತಿಗೆ ಉತ್ತರಿಸಲೂ ಇಲ್ಲ, ಲಕ್ಷ್ಯ ಕೊಡಲೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 4:20
5 ತಿಳಿವುಗಳ ಹೋಲಿಕೆ  

ಒಬ್ಬ ಸ್ತ್ರೀಗೆ ಪ್ರಸವ ಗಳಿಗೆ ಬಂದಾಗ ದುಃಖವಿರುವುದು. ಆದರೆ ಆಕೆಯು ಮಗುವನ್ನು ಹೆತ್ತಾಗ ಈ ಲೋಕದೊಳಗೆ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಆಕೆಯು ಇನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.


ನನ್ನ ಇಕ್ಕಟ್ಟಿನ ದಿವಸದಲ್ಲಿ ಯೆಹೋವ ದೇವರನ್ನು ಹುಡುಕಿದೆನು. ನಾನು ರಾತ್ರಿಯೆಲ್ಲಾ ಬೇಸರವಿಲ್ಲದೆ ಕೈಚಾಚಿದೆ. ನನ್ನ ಮನಸ್ಸಿಗೆ ಶಾಂತಿ ಇರಲಿಲ್ಲ.


ಬೇತೇಲಿನಿಂದ ಅವರು ಪ್ರಯಾಣಮಾಡಿ, ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ, ರಾಹೇಲಳು ಪ್ರಸವವೇದನೆಯಿಂದ ಕಷ್ಟಪಟ್ಟಳು.


ಇದಲ್ಲದೆ ಫೀನೆಹಾಸನ ಹೆಂಡತಿಯಾದ ಅವನ ಸೊಸೆಯು ಗರ್ಭಿಣಿಯಾಗಿ ಹೆರುವ ಕಾಲದಲ್ಲಿದ್ದಳು. ಅವಳು, ದೇವರ ಮಂಜೂಷವು ಶತ್ರು ವಶವಾಯಿತೆಂಬ ವರ್ತಮಾನವನ್ನೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರೆಂಬುದನ್ನೂ ಕೇಳಿದಾಗ, ಅವಳಿಗೆ ಪ್ರಸವವೇದನೆ ಉಂಟಾಗಿ, ಅವಳು ಗಂಡು ಮಗುವನ್ನು ಹೆತ್ತಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು