1 ಸಮುಯೇಲ 4:19 - ಕನ್ನಡ ಸಮಕಾಲಿಕ ಅನುವಾದ19 ಇದಲ್ಲದೆ ಫೀನೆಹಾಸನ ಹೆಂಡತಿಯಾದ ಅವನ ಸೊಸೆಯು ಗರ್ಭಿಣಿಯಾಗಿ ಹೆರುವ ಕಾಲದಲ್ಲಿದ್ದಳು. ಅವಳು, ದೇವರ ಮಂಜೂಷವು ಶತ್ರು ವಶವಾಯಿತೆಂಬ ವರ್ತಮಾನವನ್ನೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರೆಂಬುದನ್ನೂ ಕೇಳಿದಾಗ, ಅವಳಿಗೆ ಪ್ರಸವವೇದನೆ ಉಂಟಾಗಿ, ಅವಳು ಗಂಡು ಮಗುವನ್ನು ಹೆತ್ತಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಅವನ ಸೊಸೆಯಾದ ಫೀನೆಹಾಸನ ಹೆಂಡತಿ ದಿನತುಂಬಿದ ಗರ್ಭಿಣಿಯಾಗಿದ್ದಳು. ಅವಳು ದೇವರ ಮಂಜೂಷವು ಶತ್ರು ವಶವಾಯಿತೆಂಬ ವರ್ತಮಾನವನ್ನೂ, ತನ್ನ ಮಾವನೂ, ತನ್ನ ಗಂಡನೂ ಹತರಾದದ್ದನ್ನೂ ಕೇಳಿದೊಡನೆ ಪ್ರಸವವೇದನೆಯುಂಟಾಗಿ ಮಗುವನ್ನು ಹೆತ್ತಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಫೀನೆಹಾಸನ ಹೆಂಡತಿಯಾದ ಏಲಿಯ ಸೊಸೆ ದಿನತುಂಬಿದ ಗರ್ಭಿಣಿ. ದೇವರ ಮಂಜೂಷ ಶತ್ರುವಶವಾದದ್ದನ್ನು ಕೇಳಿದೊಡನೆ ಪ್ರಸವವೇದನೆಯುಂಟಾಗಿ ಮಗುವನ್ನು ಹೆತ್ತಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಫೀನೆಹಾಸನ ಹೆಂಡತಿಯಾದ ಅವನ ಸೊಸೆಯು ದಿನತುಂಬಿದ ಗರ್ಭಿಣಿಯಾಗಿದ್ದು ದೇವರ ಮಂಜೂಷವು ಶತ್ರುವಶವಾದದ್ದನ್ನೂ ಮಾವನೂ ಗಂಡನೂ ಹತರಾದದ್ದನ್ನೂ ಕೇಳಿದೊಡನೆ ಪ್ರಸವವೇದನೆಯುಂಟಾಗಿ ಮಗುವನ್ನು ಹೆತ್ತಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಏಲಿಯ ಸೊಸೆ ಅಂದರೆ ಫೀನೆಹಾಸನ ಹೆಂಡತಿಯು ಗರ್ಭಿಣಿಯಾಗಿದ್ದಳು. ಹೆರಿಗೆಯ ಸಮಯ ಸಮೀಪಿಸಿತ್ತು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುಗಳ ವಶವಾದದ್ದನ್ನೂ ತನ್ನ ಮಾವನಾದ ಏಲಿಯು ಸತ್ತದ್ದನ್ನೂ ಗಂಡನಾದ ಫೀನೆಹಾಸನು ಸತ್ತ ಸುದ್ದಿಯನ್ನೂ ಅವಳು ಕೇಳಿದಳು. ಈ ಸುದ್ದಿಯನ್ನು ಕೇಳಿದ ತಕ್ಷಣ ಪ್ರಸವವೇದನೆಯಾಗಿ ಮಗುವನ್ನು ಹೆತ್ತಳು. ಅಧ್ಯಾಯವನ್ನು ನೋಡಿ |