1 ಸಮುಯೇಲ 30:13 - ಕನ್ನಡ ಸಮಕಾಲಿಕ ಅನುವಾದ13 ದಾವೀದನು ಅವನನ್ನು, “ನೀನು ಯಾರ ಕಡೆಯವನು? ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ಈಜಿಪ್ಟಿನವನು, ಒಬ್ಬ ಅಮಾಲೇಕ್ಯನ ಸೇವಕನು. ಮೂರು ದಿನಗಳಿಂದ ನಾನು ರೋಗದಲ್ಲಿ ಬಿದ್ದುದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆಗ ದಾವೀದನು ಅವನನ್ನು, “ನೀನು ಯಾರ ಕಡೆಯವನು, ಎಲ್ಲಿಯವನು?” ಎಂದು ಕೇಳಿದನು. ಅವನು “ನಾನು ಐಗುಪ್ತನು, ಒಬ್ಬ ಅಮಾಲೇಕ್ಯನ ದಾಸನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡಿದ್ದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಆಗ ದಾವೀದನು ಅವನನ್ನು, “ನೀನು ಯಾರ ಕಡೆಯವನು? ಎಲ್ಲಿಯವನು?” ಎಂದು ಕೇಳಿದನು. ಆಗ ಅವನು, “ನಾನು ಈಜಿಪ್ಟಿನವನು; ಒಬ್ಬ ಅಮಾಲೇಕ್ಯನ ಗುಲಾಮನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡದ್ದರಿಂದ ನನ್ನ ಯಜಮಾನ ನನ್ನನ್ನು ಬಿಟ್ಟುಹೋದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಆಗ ದಾವೀದನು ಅವನನ್ನು - ನೀನು ಯಾರ ಕಡೆಯವನು? ಎಲ್ಲಿಯವನು ಎಂದು ಕೇಳಲು ಅವನು - ನಾನು ಐಗುಪ್ತ್ಯನು; ಒಬ್ಬ ಅಮಾಲೇಕ್ಯನ ದಾಸನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ದಾವೀದನು ಈಜಿಪ್ಟಿನವನನ್ನು, “ನಿಮ್ಮ ಒಡೆಯನು ಯಾರು? ನೀನು ಬಂದಿರುವುದು ಎಲ್ಲಿಂದ?” ಎಂದು ಕೇಳಿದನು. ಈಜಿಪ್ಟಿನವನು, “ನಾನು ಒಬ್ಬ ಈಜಿಪ್ಟಿನವನು ನಾನು ಒಬ್ಬ ಅಮಾಲೇಕ್ಯನ ಗುಲಾಮನು. ಮೂರು ದಿನಗಳ ಹಿಂದೆ ನಾನು ಅಸ್ವಸ್ಥನಾಗಿದ್ದರಿಂದ ನಮ್ಮ ಒಡೆಯನು ನನ್ನನ್ನು ಬಿಟ್ಟುಹೋದನು. ಅಧ್ಯಾಯವನ್ನು ನೋಡಿ |