Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 3:16 - ಕನ್ನಡ ಸಮಕಾಲಿಕ ಅನುವಾದ

16 ಆಗ ಏಲಿಯು ಸಮುಯೇಲನನ್ನು ಕರೆದು ಅವನಿಗೆ, “ನನ್ನ ಮಗನಾದ ಸಮುಯೇಲನೇ,” ಎಂದನು. ಅದಕ್ಕವನು, “ಇಗೋ, ಇದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆದರೆ ಏಲಿಯು, “ನನ್ನ ಮಗನೇ, ಸಮುವೇಲನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಆದರೆ, ಏಲಿ, “ಮಗನೇ, ಸಮುವೇಲನೇ”, ಎಂದು ಕರೆದಾಗ ಅವನು, “ಇಗೋ, ಇದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆದರೆ ಏಲಿಯು - ನನ್ನ ಮಗನೇ, ಸಮುವೇಲನೇ ಎಂದು ಕರೆಯಲು ಅವನು - ಇಗೋ, ಇದ್ದೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ಏಲಿಯು, “ಸಮುವೇಲನೇ, ನನ್ನ ಮಗನೇ” ಎಂದು ಕರೆದನು. ಸಮುವೇಲನು, “ಇಗೋ, ಇದ್ದೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 3:16
6 ತಿಳಿವುಗಳ ಹೋಲಿಕೆ  

ಸಮುಯೇಲನು ಉದಯದವರೆಗೂ ಮಲಗಿದ್ದು, ಯೆಹೋವ ದೇವರ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುಯೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯಪಟ್ಟನು.


ಏಲಿಯು ಅವನಿಗೆ, “ಅವರು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಅವರು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವುದನ್ನಾದರೂ ನನಗೆ ಮರೆಮಾಡಿದರೆ, ದೇವರು ನಿನ್ನನ್ನು ದಂಡಿಸಲಿ,” ಎಂದನು.


ದೇವದೂತನು ಸ್ವಪ್ನದಲ್ಲಿ ನನಗೆ, ‘ಯಾಕೋಬನೇ’ ಎಂದನು. ಅದಕ್ಕೆ ನಾನು, ‘ಇಲ್ಲಿ ಇದ್ದೇನೆ,’ ಎಂದೆನು.


ಆದ್ದರಿಂದ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಸಹೋದರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ. ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು,” ಎಂದನು. ಅದಕ್ಕೆ ಅವನು, “ಆಗಲಿ ಹೋಗುತ್ತೇನೆ,” ಎಂದನು.


ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ನನ್ನ ಮಾತನ್ನು ಕೇಳು. ನೀನು ಹಕ್ಕಲಾದುಕೊಳ್ಳಲು ಬೇರೆಯವರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಜೊತೆಯಲ್ಲಿಯೇ ಇರು.


ಈಗ ಆ ಅರಸನು ಇನ್ನು ಮುಂದೆ ನಿಮ್ಮನ್ನು ನಡಿಸುತ್ತಾನೆ. ನಾನು ವೃದ್ಧನಾಗಿ ನರೆ ಬಂದವನಾದೆನು. ನನ್ನ ಪುತ್ರರು ನಿಮ್ಮ ಸಂಗಡ ಇದ್ದಾರೆ. ನಾನು ನನ್ನ ಬಾಲ್ಯ ಮೊದಲ್ಗೊಂಡು ಈ ದಿನದವರೆಗೂ ನಿಮ್ಮ ಮುಂದೆ ನಾಯಕನಾಗಿ ನಡೆದುಕೊಂಡಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು