Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 3:15 - ಕನ್ನಡ ಸಮಕಾಲಿಕ ಅನುವಾದ

15 ಸಮುಯೇಲನು ಉದಯದವರೆಗೂ ಮಲಗಿದ್ದು, ಯೆಹೋವ ದೇವರ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುಯೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅನಂತರ ಸಮುವೇಲನು ಮಲಗಿ ಮುಂಜಾನೆಯಲ್ಲೇ ಎದ್ದು ಯೆಹೋವನ ಮಂದಿರದ ಬಾಗಿಲುಗಳನ್ನು ತೆರೆದನು. ಅವನು ತಾನು ಕಂಡದ್ದನ್ನು ಏಲಿಗೆ ತಿಳಿಸುವುದಕ್ಕೆ ಭಯಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅನಂತರ ಸಮುವೇಲನು ಮಲಗಿ, ಮುಂಜಾನೆಯಲ್ಲೇ ಎದ್ದು, ಸರ್ವೇಶ್ವರನ ಮಂದಿರದ ಬಾಗಿಲುಗಳನ್ನು ತೆರೆದನು. ತಾನು ಕಂಡದ್ದನ್ನು ಏಲಿಗೆ ತಿಳಿಸಲು ಭಯಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅನಂತರ ಸಮುವೇಲನು ಮಲಗಿ ಹೊತ್ತಾರೆಯಲ್ಲೆದ್ದು ಯೆಹೋವಮಂದಿರದ ಕದಗಳನ್ನು ತೆರೆದನು; ಅವನು ತಾನು ಕಂಡದ್ದನ್ನು ಏಲಿಗೆ ತಿಳಿಸುವದಕ್ಕೆ ಭಯಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಸಮುವೇಲನು ನಿದ್ರಿಸಿದನು. ಅವನು ಮುಂಜಾನೆ ಮೇಲೆದ್ದು ಯೆಹೋವನ ಆಲಯದ ಬಾಗಿಲುಗಳನ್ನು ತೆರೆದನು. ಸಮುವೇಲನು ತಾನು ಕಂಡ ದರ್ಶನದ ಬಗ್ಗೆ ಏಲಿಗೆ ತಿಳಿಸಲು ಭಯಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 3:15
8 ತಿಳಿವುಗಳ ಹೋಲಿಕೆ  

“ನನ್ನ ಬಲಿಪೀಠದ ಮೇಲೆ ವ್ಯರ್ಥವಾಗಿ ಬೆಂಕಿ ಹಚ್ಚುವುದಕ್ಕಿಂತ, ಬಾಗಿಲು ಮುಚ್ಚುವುದು ಒಳ್ಳೆಯದು. ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವುದಿಲ್ಲ.


ಅವರು ಶೀಲೋವಿನಲ್ಲಿ ಊಟಮಾಡಿದ ತರುವಾಯ ಹನ್ನಳು ಎದ್ದು ನಿಂತಳು. ಯಾಜಕನಾದ ಏಲಿ ಯೆಹೋವ ದೇವರ ಮಂದಿರದ ಸ್ತಂಭದ ಬಳಿ ಆಸನದ ಮೇಲೆ ಕುಳಿತಿರುವಾಗ,


ಯೆಹೋವ ದೇವರು ಅವರಿಗೆ ಹೀಗೆ ಹೇಳಿದನು, “ನನ್ನ ಮಾತುಗಳನ್ನು ಈಗ ಕೇಳಿರಿ: “ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಯೆಹೋವ ದೇವರಾದ ನಾನು ದರ್ಶನದಲ್ಲಿ ಪ್ರಕಟಿಸುವೆನು, ಇಲ್ಲವೆ ಕನಸಿನಲ್ಲಿಯೂ ನಾನು ಅವನೊಡನೆ ಮಾತನಾಡುವೆನು.


ಆಗ ಯೆಹೋವ ದೇವರು ಬಂದು ನಿಂತು ಮೊದಲಿನ ಹಾಗೆಯೇ, “ಸಮುಯೇಲನೇ, ಸಮುಯೇಲನೇ,” ಎಂದು ಕರೆದರು. ಅದಕ್ಕೆ ಸಮುಯೇಲನು, “ಯೆಹೋವ ದೇವರೇ ಮಾತನಾಡಿ; ನಿಮ್ಮ ದಾಸನು ಕೇಳುತ್ತಾನೆ,” ಎಂದನು.


ಆಗ ಏಲಿಯು ಸಮುಯೇಲನನ್ನು ಕರೆದು ಅವನಿಗೆ, “ನನ್ನ ಮಗನಾದ ಸಮುಯೇಲನೇ,” ಎಂದನು. ಅದಕ್ಕವನು, “ಇಗೋ, ಇದ್ದೇನೆ,” ಎಂದನು.


ಬೆರೆಕ್ಯ, ಎಲ್ಕಾನಾ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು