Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 29:9 - ಕನ್ನಡ ಸಮಕಾಲಿಕ ಅನುವಾದ

9 ಆಕೀಷನು ದಾವೀದನಿಗೆ ಉತ್ತರವಾಗಿ, “ನೀನು ನನ್ನ ದೃಷ್ಟಿಯಲ್ಲಿ ಒಬ್ಬ ದೇವದೂತನ ಹಾಗೆಯೇ ಉತ್ತಮನಾಗಿದ್ದೀ ಎಂದು ನಾನು ಬಲ್ಲೆನು. ಆದರೆ, ‘ಯುದ್ಧಕ್ಕೆ ಇವನು ನಮ್ಮ ಸಂಗಡ ಬರಬಾರದು,’ ಎಂದು ಫಿಲಿಷ್ಟಿಯರ ಅಧಿಪತಿಗಳು ಹೇಳಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆಗ ಆಕೀಷನು ದಾವೀದನಿಗೆ, “ನೀನು ಒಳ್ಳೆಯವನೆಂದು ನನಗೆ ಗೊತ್ತದೆ, ನನ್ನ ದೃಷ್ಟಿಯಲ್ಲಿ ನೀನು ದೇವದೂತನಂತಿರುತ್ತೀ. ಆದರೆ ಫಿಲಿಷ್ಟಿಯ ಪ್ರಭುಗಳು, ‘ಇವನು ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಹೊರಡಬಾರದು’ ಎಂದು ಹೇಳುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಆಗ ಆಕೀಷನು ದಾವೀದನಿಗೆ, “ನೀನು ಒಳ್ಳೆಯವನೆಂದು ನನಗೆ ಗೊತ್ತಿದೆ; ನನ್ನ ದೃಷ್ಟಿಯಲ್ಲಿ ನೀನು ದೇವದೂತನಂತಿರುವೆ; ಆದರೆ ಫಿಲಿಷ್ಟಿಯದ ರಾಜರುಗಳು, ‘ಇವನು ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಹೊರಡಬಾರದು’ ಎಂದು ಹೇಳುತ್ತಾರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆಗ ಆಕೀಷನು ದಾವೀದನಿಗೆ - ನೀನು ಒಳ್ಳೆಯವನೆಂದು ನನಗೆ ಗೊತ್ತದೆ; ನನ್ನ ದೃಷ್ಟಿಯಲ್ಲಿ ನೀನು ದೇವದೂತನಂತಿರುತ್ತೀ; ಆದರೆ ಫಿಲಿಷ್ಟಿಯಪ್ರಭುಗಳು - ಇವನು ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಹೊರಡಬಾರದೆಂದು ಹೇಳುತ್ತಾರಲ್ಲಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆಕೀಷನು, “ನೀನು ಒಳ್ಳೆಯವನೆಂದು ನಾನು ನಂಬುತ್ತೇನೆ. ನೀನು ದೇವದೂತನಂತಿರುವೆ. ಆದರೆ ಫಿಲಿಷ್ಟಿಯ ಸೇನಾಧಿಪತಿಗಳು, ‘ದಾವೀದನು ನಮ್ಮ ಜೊತೆ ಯುದ್ಧಕ್ಕೆ ಬರುವಂತಿಲ್ಲ’ ಎಂದು ಈಗಲೂ ಹೇಳುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 29:9
5 ತಿಳಿವುಗಳ ಹೋಲಿಕೆ  

ಅವನು ಅರಸನಾದ ನನ್ನ ಒಡೆಯನಿಗೆ ನಿನ್ನ ಸೇವಕನ ಮೇಲೆ ಚಾಡಿಯನ್ನು ಹೇಳಿದನು. ಆದರೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆಯೇ ಇದ್ದಾನೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಮಾಡು.


ಈ ಮಾತನ್ನು ರೂಪಕವಾಗಿ ತಿರುಗಿಸುವುದಕ್ಕೆ ನಿನ್ನ ಸೇವಕನಾದ ಯೋವಾಬನು ಇದನ್ನು ಮಾಡಿದ್ದಾನೆ. ಆದರೆ ಭೂಮಿಯಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ದೇವದೂತನ ಜ್ಞಾನದ ಹಾಗೆಯೇ ನನ್ನ ಒಡೆಯನು ಜ್ಞಾನವುಳ್ಳವನಾಗಿದ್ದಾನೆ,” ಎಂದಳು.


“ನಿನ್ನ ದಾಸಿಯು, ‘ಅರಸನಾದ ನನ್ನ ಒಡೆಯನ ಮಾತು ಆದರಣೆಯಾಗಿರಲಿ. ಏಕೆಂದರೆ ಒಳ್ಳೆಯದನ್ನೂ, ಕೆಟ್ಟದ್ದನ್ನೂ ಕೇಳುವುದಕ್ಕೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆ ಇದ್ದಾನೆ ಮತ್ತು ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರಲಿ,’ ಎಂದಳು.”


ನನ್ನ ದೇಹಸ್ಥಿತಿ ನಿಮಗೆ ಬೇಸರಗೊಳಿಸುವುದಾಗಿದ್ದರೂ ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ದೇವದೂತನಂತೆಯೂ ಕ್ರಿಸ್ತ ಯೇಸುವಿನಂತೆಯೂ ಸೇರಿಸಿಕೊಂಡಿರಿ.


ಆದರೆ ಫಿಲಿಷ್ಟಿಯರ ಅಧಿಪತಿಗಳು ಆಕೀಷನ ಮೇಲೆ ಕೋಪಗೊಂಡು ಅವನಿಗೆ, “ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದಂತೆ, ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ, ನೀನು ಅವನಿಗೆ ನೇಮಿಸಿದ ಸ್ಥಳಕ್ಕೆ ತಿರುಗಿ ಹೋಗುವಹಾಗೆ ಅವನನ್ನು ಕಳುಹಿಸಿಬಿಡು. ಏಕೆಂದರೆ ಇವನು ಯಾವುದರಿಂದ ತನ್ನ ಯಜಮಾನನ ಮೆಚ್ಚಿಗೆ ಪಡೆದುಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು