Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 28:10 - ಕನ್ನಡ ಸಮಕಾಲಿಕ ಅನುವಾದ

10 ಆಗ ಸೌಲನು, “ಯೆಹೋವ ದೇವರ ಜೀವದಾಣೆ, ಈ ಕಾರ್ಯಕ್ಕೋಸ್ಕರ ನಿನಗೆ ದಂಡನೆ ಬರುವುದಿಲ್ಲ,” ಎಂದು ಅವಳಿಗೆ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅದಕ್ಕೆ ಸೌಲನು, “ಯೆಹೋವನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವುದಿಲ್ಲ” ಎಂದು ಆಕೆಗೆ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅದಕ್ಕೆ ಸೌಲನು, ” ಸರ್ವೇಶ್ವರನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವುದಿಲ್ಲ,” ಎಂದು ಆಕೆಗೆ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅದಕ್ಕೆ ಸೌಲನು - ಯೆಹೋವನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವದಿಲ್ಲ ಎಂದು ಆಕೆಗೆ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಸೌಲನು ಯೆಹೋವನ ಹೆಸರಿನಲ್ಲಿ ಆ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಈ ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 28:10
10 ತಿಳಿವುಗಳ ಹೋಲಿಕೆ  

“ನೀನೇನು ಕೇಳಿದರೂ ಕೊಡುತ್ತೇನೆ, ನನ್ನ ರಾಜ್ಯದಲ್ಲಿ ಅರ್ಧದಷ್ಟು ಕೇಳಿಕೊಂಡರೂ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು.


ಆಗ ಅವನು ಆಣೆ ಮಾಡಿ, “ನಾನು ಆ ಮನುಷ್ಯನನ್ನು ಅರಿಯೆನು,” ಎಂದು ತಿರುಗಿ ನಿರಾಕರಿಸಿದನು.


ಆಕೆ, “ಹಾಗಾದರೆ ನನ್ನ ಮಗನು ಸಾಯದಂತೆ ನಾಶನಕ್ಕೆ ನಾಶನವನ್ನು ಕೂಡಿಸುವ ಸೇಡುತೀರಿಸುವವರನ್ನು ತಡೆಯಲು ಅರಸನು ತನ್ನ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಲಿ,” ಎಂದಳು. ಅದಕ್ಕೆ ದಾವೀದನು, “ಯೆಹೋವ ದೇವರ ಜೀವದಾಣೆ, ನಿನ್ನ ಮಗನ ತಲೆಯ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ,” ಎಂದನು.


ಆಗ ಸೌಲನು ಯೋನಾತಾನನ ಮಾತನ್ನು ಕೇಳಿ, “ಯೆಹೋವ ದೇವರಾಣೆ ಅವನು ಕೊಲೆಯಾಗುವುದಿಲ್ಲ,” ಎಂದನು.


ಏಕೆಂದರೆ ನನ್ನ ಪುತ್ರನಾದ ಯೋನಾತಾನನಿಂದಾದರೂ ಉಂಟಾಗಿದ್ದರೆ, ಅವನು ಸತ್ತೇ ಸಾಯುವನೆಂದು ಇಸ್ರಾಯೇಲರನ್ನು ರಕ್ಷಿಸುವ ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ,” ಎಂದನು. ಆದರೆ ಸಮಸ್ತ ಜನರಲ್ಲಿ ಒಬ್ಬನಾದರೂ ಅವನಿಗೆ ಉತ್ತರ ಕೊಡಲಿಲ್ಲ.


ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.


ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು.


ಆ ಸ್ತ್ರೀಯು ಅವನಿಗೆ, “ಸೌಲನು ಮಾಂತ್ರಿಕಳನ್ನೂ, ಭೂತಪ್ರೇತಗಳನ್ನು ಆರಾಧಿಸುವವರನ್ನೂ ದೇಶದಿಂದ ತೆಗೆದುಬಿಟ್ಟನೆಂದು ನೀನು ಬಲ್ಲೆ. ಈಗ ನಾನು ಸಾಯುವುದಕ್ಕೆ ಕಾರಣವಾಗುವ ಹಾಗೆ ಏಕೆ ನನ್ನ ಪ್ರಾಣಕ್ಕೆ ಉರುಳಿಡುತ್ತಿ?” ಎಂದಳು.


ಅವಳು, “ನಿನಗೆ ನಾನು ಯಾರನ್ನು ಇಲ್ಲಿ ಬರಮಾಡಬೇಕು?” ಎಂದಳು. ಅದಕ್ಕವನು, “ಸಮುಯೇಲನನ್ನು ಬರಮಾಡು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು