Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 27:8 - ಕನ್ನಡ ಸಮಕಾಲಿಕ ಅನುವಾದ

8 ದಾವೀದನೂ, ಅವನ ಜನರೂ ಶೂರಿಗೆ ಹೋಗುವ ಮೇರೆಯಿಂದ ಈಜಿಪ್ಟಿನವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆ ಕಾಲದಲ್ಲಿ ಅವನೂ, ಅವನ ಜನರೂ ತೇಲಾಮಿನಿಂದ ಶೂರಿನವರೆಗೂ, ಐಗುಪ್ತ ದೇಶದವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸುತ್ತಿರುವ ಗೆಷೂರ್ಯರು, ಗಿಜ್ರೀಯರು, ಅಮಾಲೇಕ್ಯರು ಇವರ ಮೇಲೆ ಆಕ್ರಮಣ ಮಾಡಿ ಸುಲಿದುಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಈ ಅವಧಿಯಲ್ಲಿ ಅವನು ಮತ್ತು ಅವನ ಜನರು ಗೆಷೂರ್ಯರ ಮೇಲೆ, ಗಿಜ್ರೀಯರ ಮೇಲೆ ಹಾಗು ಅಮಾಲೇಕ್ಯರ ಮೇಲೆ ದಾಳಿಮಾಡುತ್ತಿದ್ದರು. ಇವರುಗಳ ಪ್ರಾಂತ್ಯಗಳು ತೇಲಾಮಿನಿಂದ ಶೂರಿನವರೆಗೂ ಹಾಗು ಈಜಿಪ್ಟಿನವರೆಗೂ ವಿಸ್ತರಿಸಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಈ ಕಾಲದಲ್ಲಿ ಅವನೂ ಅವನ ಜನರೂ ತೇಲಾವಿುನಿಂದ ಶೂರಿನವರೆಗೂ ಐಗುಪ್ತ ದೇಶದವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತಗಳಲ್ಲಿ ವಾಸಿಸುತ್ತಿರುವ ಗೆಷೂರ್ಯರು, ಗಿಜ್ರೀಯರು, ಅಮಾಲೇಕ್ಯರು ಇವರ ಮೇಲೆ ಬಿದ್ದು ಸುಲುಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ದಾವೀದನು ಮತ್ತು ಅವನ ಜನರು ಅಮಾಲೇಕ್ಯರ ಮೇಲೆಯೂ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಯುದ್ಧಮಾಡಲು ಹೋದರು. ದಾವೀದನ ಜನರು ಅವರನ್ನು ಸೋಲಿಸಿ ಅವರ ಸಂಪತ್ತನ್ನು ವಶಪಡಿಸಿಕೊಂಡರು. ಈಜಿಪ್ಟಿನವರೆಗೆ ವಿಸ್ತರಿಸಿರುವ ಶೂರಿನ ಸಮೀಪದ ತೇಲಾಮಿನವರೆಗೂ ಆ ಜನರು ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 27:8
22 ತಿಳಿವುಗಳ ಹೋಲಿಕೆ  

“ಅವು ಯಾವುವೆಂದರೆ: “ಫಿಲಿಷ್ಟಿಯರ ಮತ್ತು ಗೆಷೂರ್ಯರ ದೇಶವೆಲ್ಲಾ ಅಂದರೆ,


ಆದಾಗ್ಯೂ ಇಸ್ರಾಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿಬಿಡಲಿಲ್ಲ. ಏಕೆಂದರೆ ಗೆಷೂರ್ಯರೂ ಮಾಕಾತೀಯರೂ ಈ ದಿನದವರೆಗೆ ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿದ್ದಾರೆ.


ಇದಲ್ಲದೆ ಎಫ್ರಾಯೀಮ್ಯರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.


ಅವರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸದೆ ಇದ್ದುದರಿಂದ, ಎಫ್ರಾಯೀಮ್ಯರ ಮಧ್ಯದಲ್ಲಿ ಕಾನಾನ್ಯರು ಈವರೆಗೂ ಅವರಲ್ಲಿ ದಾಸತ್ವದಲ್ಲಿದ್ದುಕೊಂಡು ಕೆಲಸಮಾಡುವವರಾಗಿದ್ದಾರೆ.


ಇವನಿಗೆ ಗಿಲ್ಯಾದಿನ ದೇಶದಲ್ಲಿ ಅರುವತ್ತು ಪಟ್ಟಣಗಳು ಇದ್ದವು. ಇದಲ್ಲದೆ ಅವನು ಗೆಷೂರ್ಯರನ್ನೂ, ಅರಾಮ್ಯರನ್ನೂ, ಯಾಯೀರನ ಪಟ್ಟಣಗಳನ್ನೂ, ಕೆನಾತ್ ಮತ್ತು ಅದರ ಪಟ್ಟಣಗಳನ್ನೂ, ಒಟ್ಟು ಅರವತ್ತು ಪಟ್ಟಣಗಳನ್ನು ಗೆದ್ದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ವಂಶದವರಿಗೆ ಇದ್ದವು.


ಏಕೆಂದರೆ, ‘ಯೆಹೋವ ದೇವರು ನನ್ನನ್ನು ಯೆರೂಸಲೇಮಿಗೆ ತಿರುಗಿ ನಿಜವಾಗಿಯೂ ಬರಮಾಡಿದರೆ, ನಾನು ಯೆಹೋವ ದೇವರನ್ನು ಸೇವಿಸುವೆನು,’ ಎಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಹರಕೆ ಮಾಡಿಕೊಂಡಿದ್ದನು,” ಎಂದನು.


ಅಬ್ಷಾಲೋಮನು ಯೋವಾಬನಿಗೆ, “ನಾನು ಗೆಷೂರಿನಿಂದ ಏಕೆ ಬಂದೆನೆಂದು ಅರಸನಿಗೆ ಹೇಳುವುದಕ್ಕೆ ನಿನ್ನನ್ನು ಕಳುಹಿಸುವ ಹಾಗೆ ‘ಇಲ್ಲಿಗೆ ಬಾ’ ಎಂದು ನಿನ್ನನ್ನು ಕರೆಕಳುಹಿಸಿದೆನು. ನಾನು ಇನ್ನೂ ಅಲ್ಲಿಯೇ ಇದ್ದಿದ್ದರೆ ನನಗೆ ಉತ್ತಮವಾಗಿತ್ತು. ಈಗ ನಾನು ಅರಸನ ಮುಖವನ್ನು ನೋಡಬೇಕು. ನನ್ನಲ್ಲಿ ಅಕ್ರಮ ಇದ್ದರೆ, ಅವನು ನನ್ನನ್ನು ಕೊಂದು ಹಾಕಲಿ,” ಎಂದನು.


ಹಾಗೆಯೇ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದನು.


ದಾವೀದನೂ, ಅವನ ಜನರೂ ಮೂರನೆಯ ದಿವಸದಲ್ಲಿ ಚಿಕ್ಲಗ್ ಊರಿಗೆ ಬಂದು ಸೇರಿದರು. ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ, ಚಿಕ್ಲಗಿನ ಮೇಲೆಯೂ ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟರು.


ಅಮಾಲೇಕ್ಯರು ಬಂದು ರೆಫೀದೀಮಿನಲ್ಲಿ ಇಸ್ರಾಯೇಲರ ಸಂಗಡ ಯುದ್ಧಮಾಡಿದರು.


ಆಮೇಲೆ ಮೋಶೆಯು ಇಸ್ರಾಯೇಲರನ್ನು ಕೆಂಪು ಸಮುದ್ರದಿಂದ ನಡೆಸಿದನು. ಅವರು ಶೂರಿನ ಮರುಭೂಮಿಯೊಳಗೆ ಹೋದರು. ಅವರು ಮರುಭೂಮಿಯಲ್ಲಿ ಮೂರು ದಿನಗಳು ಪ್ರಯಾಣಮಾಡಿದರೂ ನೀರನ್ನು ಕಂಡುಕೊಳ್ಳಲಿಲ್ಲ.


ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು.


ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ, “ನಿಜವಾಗಿಯೂ ಯೆಹೋವ ದೇವರಾಣೆ, ನೀನು ಯಥಾರ್ಥನು, ನೀನು ನನ್ನ ಸಂಗಡ ದಂಡಿನಲ್ಲಿ ಹೋಗುತ್ತಾ ಬರುತ್ತಾ ಇರುವುದು ನನ್ನ ದೃಷ್ಟಿಗೆ ಒಳ್ಳೆಯದು. ನೀನು ನನ್ನ ಬಳಿಗೆ ಬಂದ ದಿನದಿಂದ ಈವರೆಗೂ ನಿನ್ನಲ್ಲಿ ಕೆಟ್ಟದ್ದನ್ನು ಕಂಡಿಲ್ಲ. ಆದರೆ ಈಗ ನೀನು ಅಧಿಪತಿಗಳ ದೃಷ್ಟಿಗೆ ಒಳ್ಳೆಯವನಲ್ಲ.


ಕರ್ಮೇಲ್ಯನಾದ ನಾಬಾಲನ ವಿಧವೆ ಅಬೀಗೈಲಳಿಂದ ಹುಟ್ಟಿದ ಅವನ ಎರಡನೆಯ ಮಗ ಕಿಲಾಬನೂ; ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು;


ಆಗ ದಾವೀದನ ಸೇವಕರೂ ಯೋವಾಬನೂ ಒಂದು ಸೈನ್ಯದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಬಂದರು. ಆಗ ಅಬ್ನೇರನು ಹೆಬ್ರೋನಿನಲ್ಲಿ ದಾವೀದನ ಸಂಗಡ ಇರಲಿಲ್ಲ. ಏಕೆಂದರೆ ಅವನು ಅಬ್ನೇರನನ್ನು ಕಳುಹಿಸಿಬಿಟ್ಟದ್ದರಿಂದ, ಅವನು ಸಮಾಧಾನವಾಗಿ ಹೋದನು.


ಅಂದರೆ, ಅರಾಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಮತ್ತು ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಿಂದ ಪಡೆದ ಕೊಳ್ಳೆಯನ್ನೂ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.


ಅಮಾಲೇಕ್ಯರು ದೇಶದ ನೆಗೆವನಲ್ಲಿ ವಾಸವಾಗಿದ್ದಾರೆ. ಹಿತ್ತಿಯರೂ ಯೆಬೂಸಿಯರೂ ಅಮೋರಿಯರೂ ಪರ್ವತಗಳಲ್ಲಿಯೂ; ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸವಾಗಿದ್ದಾರೆ,” ಎಂದರು.


ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ, ಕಾನಾನ್ಯರೂ ಇಳಿದು, ಅವರನ್ನು ಹೊಡೆದು, ಹೊರ್ಮಾದವರೆಗೆ ಅಟ್ಟಿಬಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು