Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 25:37 - ಕನ್ನಡ ಸಮಕಾಲಿಕ ಅನುವಾದ

37 ಉದಯದಲ್ಲಿ ನಾಬಾಲನ ದ್ರಾಕ್ಷಾರಸದ ಅಮಲು ಇಳಿದಾಗ, ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು, ಹೃದಯಾಘಾತವಾಗಿ ಅವನು ಕಲ್ಲಿನ ಹಾಗಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಮರುದಿನ ಬೆಳಿಗ್ಗೆ ಅಮಲಿಳಿದ ನಂತರ ಈಕೆಯು ಈ ವರ್ತಮಾನವನ್ನು ಅವನಿಗೆ ತಿಳಿಸಲಾಗಿ, ಅವನ ಹೃದಯವೇ ನಿಂತಂತೆ ಆಯಿತು. ಅವನು ಸ್ತಬ್ಧನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಮರುದಿನ ಅಮಲಿಳಿದ ನಂತರ ಈಕೆ ಈ ಸಮಾಚಾರವನ್ನು ಅವನಿಗೆ ತಿಳಿಸಿದಳು. ಆಗ ಅವನ ಗುಂಡಿಗೆ ಒಡೆಯಿತು. ಅವನು ಕಲ್ಲಿನಂತಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಮರುದಿನ ಅಮಲಿಳಿದನಂತರ ಈಕೆಯು ಈ ವರ್ತಮಾನವನ್ನು ಅವನಿಗೆ ತಿಳಿಸಲಾಗಿ ಅವನ ಹೃದಯವು ನಿಂತುಹೋಯಿತು, ಅವನು ಸ್ತಬ್ಧನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಮಾರನೆಯ ದಿನ ನಾಬಾಲನ ಮತ್ತಿಳಿದಿತ್ತು. ಅವನ ಹೆಂಡತಿಯು ಅವನಿಗೆ ಎಲ್ಲವನ್ನು ತಿಳಿಸಿದಳು. ನಾಬಾಲನಿಗೆ ಹೃದಯಾಘಾತವಾಯಿತು. ಅವನು ಸ್ತಬ್ಧನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 25:37
7 ತಿಳಿವುಗಳ ಹೋಲಿಕೆ  

ಏಕೆಂದರೆ ನಿನಗೆ ಕೇಡು ಆಗದ ಹಾಗೆ ನನ್ನನ್ನು ತಡೆದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಜೀವದಾಣೆ, ನೀನು ತ್ವರೆಯಾಗಿ ನನ್ನನ್ನು ಎದುರುಗೊಳ್ಳದಿದ್ದರೆ, ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ,” ಎಂದು ಹೇಳಿದನು.


ಬೆಳಗಾಗುವಷ್ಟರಲ್ಲಿ ಅವನ ಜನರಲ್ಲಿ ನಾನು ಒಬ್ಬ ಗಂಡಸನನ್ನಾದರೂ ಉಳಿಸಿದರೆ, ದೇವರು ದಾವೀದನಾದ ನನಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ,” ಎಂದು ಹೇಳಿದ್ದನು.


ಯೆಹೋವ ದೇವರು ನಿಮ್ಮನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಕಾಡುವರು.


ಅಬೀಗೈಲಳು ನಾಬಾಲನ ಬಳಿಗೆ ಬಂದಾಗ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸಗೊಂಡಿತ್ತು. ಆದಕಾರಣ ಅವಳು ಉದಯವಾಗುವವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ, ಹೆಚ್ಚಾದದ್ದನ್ನಾಗಲಿ ತಿಳಿಸಲಿಲ್ಲ.


ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ, ಯೆಹೋವ ದೇವರ ದಂಡನೆಯ ನಿಮಿತ್ತ ನಾಬಾಲನು ಸತ್ತುಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು