1 ಸಮುಯೇಲ 25:20 - ಕನ್ನಡ ಸಮಕಾಲಿಕ ಅನುವಾದ20 ಆಗ, ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಮಾರ್ಗದಲ್ಲಿ ಬೆಟ್ಟದ ಮರೆಗೆ ಬಂದಾಗ, ದಾವೀದನೂ ಅವನ ಜನರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಆಕೆ ಕತ್ತೆಯ ಮೇಲೆ ಕುಳಿತುಕೊಂಡು ಗುಡ್ಡದ ಬದಿಯಲ್ಲಿ ಹೋಗುತ್ತಿರುವಾಗ, ದಾವೀದನೂ ಅವನ ಜನರೂ ಗುಡ್ಡ ಇಳಿದು ಆ ಕಡೆಯಿಂದ ಬರಲು ಆಕೆಯು ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಆಕೆ ಕತ್ತೆಯ ಮೇಲೆ ಕೂತು ಗುಡ್ಡದ ಮರೆಯಲ್ಲಿ ಹೋಗುತ್ತಿರುವಾಗ ದಾವೀದನೂ ಅವನ ಜನರೂ ಆ ಕಡೆಯಿಂದ ಗುಡ್ಡ ಇಳಿದು ಬಂದರು. ಆಕೆ ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಆಕೆ ಕತ್ತೆಯ ಮೇಲೆ ಕೂತು ಗುಡ್ಡದ ಮರೆಯಲ್ಲಿ ಹೋಗುತ್ತಿರುವಾಗ ದಾವೀದನೂ ಅವನ ಜನರೂ ಆ ಕಡೆಯಿಂದ ಗಟ್ಟಾ ಇಳಿದುಬರಲು ಆಕೆಯು ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಅಬೀಗೈಲಳು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಬೆಟ್ಟದ ಮತ್ತೊಂದು ಕಡೆಗೆ ಬಂದು ಬೇರೊಂದು ದಿಕ್ಕಿನಿಂದ ಬರುತ್ತಿದ್ದ ದಾವೀದನನ್ನೂ ಅವನ ಜನರನ್ನೂ ಸಂಧಿಸಿದಳು. ಅಧ್ಯಾಯವನ್ನು ನೋಡಿ |