Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 24:21 - ಕನ್ನಡ ಸಮಕಾಲಿಕ ಅನುವಾದ

21 ಆದ್ದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ಕಡಿದುಬಿಡುವುದಿಲ್ಲವೆಂದೂ, ನನ್ನ ಗೋತ್ರದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ನನಗೆ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣಮಾಡು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದಿಲ್ಲವೆಂದೂ, ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡು” ಎಂದು ಬೇಡಿಕೊಂಡ ಹಾಗೆ ದಾವೀದನು ಪ್ರಮಾಣಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದು ಇಲ್ಲವೆಂದೂ ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದು ಹಾಕುವುದಿಲ್ಲವೆಂದೂ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡು,” ಎಂದು ಬೇಡಿಕೊಂಡನು. ಹಾಗೆಯೇ ದಾವೀದನು ಪ್ರಮಾಣ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಹೀಗಿರುವದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲ ಮಾಡುವದಿಲ್ಲವೆಂದೂ ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವದಿಲ್ಲವೆಂದೂ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡು ಎಂದು ಬೇಡಿಕೊಂಡ ಹಾಗೆ ದಾವೀದನು ಪ್ರಮಾಣಮಾಡಿದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಈಗ ನೀನು ನನಗೆ ಒಂದು ಪ್ರಮಾಣವನ್ನು ಮಾಡು. ನನ್ನ ಸಂತಾನದವರನ್ನು ನೀನು ಕೊಲ್ಲುವುದಿಲ್ಲವೆಂದು ಯೆಹೋವನ ಹೆಸರಿನಲ್ಲಿ ನನಗೆ ಪ್ರಮಾಣಮಾಡು. ನನ್ನ ತಂದೆಯ ಕುಲದಲ್ಲಿ ನನ್ನ ಹೆಸರನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡು” ಎಂದು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 24:21
9 ತಿಳಿವುಗಳ ಹೋಲಿಕೆ  

ಆದ್ದರಿಂದ ನೀನು ನನಗೂ, ನನ್ನ ಮಗನಿಗೂ, ನನ್ನ ಮೊಮ್ಮಗನಿಗೂ ವಂಚನೆ ಮಾಡುವುದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣಮಾಡು. ನಾನು ನಿನಗೆ ಒಳ್ಳೆಯದನ್ನೇ ಮಾಡಿದ ಪ್ರಕಾರ, ನೀನು ನನಗೂ, ನೀನು ವಾಸಮಾಡುತ್ತಿರುವ ಈ ದೇಶಕ್ಕೂ ಒಳ್ಳೆಯದನ್ನೇ ಮಾಡಬೇಕು,” ಎಂದನು.


ಮನುಷ್ಯರು ನಿಜವಾಗಿಯೂ ದೊಡ್ಡವರ ಮೇಲೆ ಆಣೆ ಇಡುತ್ತಾರಷ್ಟೆ. ಆಣೆಯನ್ನು ದೃಢಪಡಿಸುವುದು ಪ್ರತಿಯೊಂದು ವಿವಾದಕ್ಕೂ ಅಂತ್ಯವಾಗಿರುವುದು.


ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು. ಆಗ ಯಾಕೋಬನು ತನ್ನ ತಂದೆ ಇಸಾಕನ ಭಯದ ಮೇಲೆ ಪ್ರಮಾಣ ಮಾಡಿದನು.


ಆಗ ಲಾಬಾನನು, “ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ,” ಎಂದನು. ಆದ್ದರಿಂದ ಅದಕ್ಕೆ ಗಲೇದ್ ಎಂದೂ,


ಯೋನಾತಾನನು ಅವನಿಗೆ, “ಭಯಪಡಬೇಡ, ಏಕೆಂದರೆ ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವುದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ. ನಾನು ನಿನಗೆ ಎರಡನೆಯವನಾಗಿರುವೆನು ಮತ್ತು ಹೀಗೆ ಆಗುವುದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ,” ಎಂದನು.


“ನೀನು ದಯಮಾಡಿ ನಿನ್ನ ದಾಸಿಯ ತಪ್ಪನ್ನು ಮನ್ನಿಸಬೇಕು. ಏಕೆಂದರೆ ನನ್ನ ಒಡೆಯನು ಯೆಹೋವ ದೇವರ ಯುದ್ಧಗಳನ್ನು ನಡೆಸುತ್ತಾನೆ. ಆದ್ದರಿಂದ ನಿನ್ನ ಜೀವಮಾನದಲ್ಲೆಲ್ಲಾ ನಿನ್ನಲ್ಲಿ ಕೆಟ್ಟತನ ಕಾಣದಿರಲಿ. ಯೆಹೋವ ದೇವರು ನಿಶ್ಚಯವಾಗಿ ನನ್ನ ಒಡೆಯನಾದ ನಿನಗೆ ಶಾಶ್ವತ ರಾಜ್ಯವನ್ನು ಸ್ಥಿರಪಡಿಸುವರು.


ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಯೆಹೋವ ದೇವರು ಹೇಳಿದ ಒಳ್ಳೆಯದೆಲ್ಲವನ್ನು ನಿನಗೆ ಮಾಡಿ, ನಿನ್ನನ್ನು ಇಸ್ರಾಯೇಲರ ಮೇಲೆ ನಾಯಕನಾಗಿ ನೇಮಿಸಿದಾಗ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು