1 ಸಮುಯೇಲ 21:4 - ಕನ್ನಡ ಸಮಕಾಲಿಕ ಅನುವಾದ4 ಯಾಜಕನು ದಾವೀದನಿಗೆ ಉತ್ತರವಾಗಿ, “ಪರಿಶುದ್ಧವಾಗಿಸಿದ ರೊಟ್ಟಿಯ ಹೊರತಾಗಿ, ನನ್ನ ಕೈಯಲ್ಲಿ ಸಾಧಾರಣವಾದ ಒಂದು ರೊಟ್ಟಿಯಾದರೂ ಇಲ್ಲ. ಆ ರೊಟ್ಟಿಗಳನ್ನು ಸ್ತ್ರೀಯರೊಂದಿಗೆ ಸಂಪರ್ಕ ಮಾಡದವರಿಗೆ ಕೊಡಬಹುದು,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯಾಜಕನು ದಾವೀದನಿಗೆ, “ನನ್ನ ಬಳಿಯಲ್ಲಿ ಮೀಸಲು ರೊಟ್ಟಿಗಳು ಹೊರತು ಬೇರೆ ರೊಟ್ಟಿಗಳಿಲ್ಲ. ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಆ ಯಾಜಕನು ದಾವೀದನಿಗೆ, “ನನ್ನ ಬಳಿಯಲ್ಲಿ ಪವಿತ್ರವಾದ ಮೀಸಲು ರೊಟ್ಟಿಗಳ ಹೊರತು ಬೇರೆ ರೊಟ್ಟಿಗಳಿಲ್ಲ; ನಿಮ್ಮ ಆಳುಗಳು ಸದ್ಯಕ್ಕೆ ಸಂಗಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಯಾಜಕನು ದಾವೀದನಿಗೆ - ನನ್ನ ಬಳಿಯಲ್ಲಿ ಮೀಸಲ ರೊಟ್ಟಿಗಳ ಹೊರತು ಬೇರೆ ರೊಟ್ಟಿಗಳಿಲ್ಲ; ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು ಎನ್ನಲು ದಾವೀದನು - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಯಾಜಕನು ದಾವೀದನಿಗೆ, “ನನ್ನ ಬಳಿ ಸಾಧಾರಣವಾದ ರೊಟ್ಟಿಗಳಿಲ್ಲ. ಆದರೆ ಕೆಲವು ಪವಿತ್ರ ರೊಟ್ಟಿಗಳಿವೆ. ನಿನ್ನ ಸೈನಿಕರು ಯಾವ ಹೆಂಗಸಿನೊಡನೆಯೂ ಲೈಂಗಿಕ ಸಂಬಂಧ ಮಾಡಿಲ್ಲದಿದ್ದರೆ ಅವರು ಅವುಗಳನ್ನು ತಿನ್ನಬಹುದು” ಎಂದನು. ಅಧ್ಯಾಯವನ್ನು ನೋಡಿ |