1 ಸಮುಯೇಲ 20:27 - ಕನ್ನಡ ಸಮಕಾಲಿಕ ಅನುವಾದ27 ಅಮಾವಾಸ್ಯೆಯ ಮಾರನೆಯ ದಿವಸದಲ್ಲಿ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿ ದಾವೀದನು ಕೂಡುವ ಸ್ಥಳವು ಹಾಗೆಯೇ ಬರಿದಾಗಿತ್ತು. ಆದ್ದರಿಂದ ಸೌಲನು, “ಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಏಕೆ ಬರಲಿಲ್ಲ?” ಎಂದು ತನ್ನ ಪುತ್ರನಾದ ಯೋನಾತಾನನನ್ನು ಕೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಮರುದಿನದಲ್ಲಿಯೂ, ಅಂದರೆ ತಿಂಗಳಿನ ಎರಡನೆಯ ದಿನದಲ್ಲಿಯೂ ದಾವೀದನ ಸ್ಥಾನ ಬರಿದಾಗಿದ್ದರಿಂದ ಸೌಲನು, “ಇಷಯನ ಮಗನು ನಿನ್ನೆಯೂ, ಈ ಹೊತ್ತೂ ಭೋಜನಕ್ಕೆ ಯಾಕೆ ಬರಲಿಲ್ಲ?” ಎಂದು ತನ್ನ ಮಗನಾದ ಯೋನಾತಾನನನ್ನು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಮರುದಿವಸದಲ್ಲಿಯೂ, ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿಯೂ, ದಾವೀದನ ಸ್ಥಾನ ಬರಿದಾಗಿದ್ದುದರಿಂದ ಸೌಲನು, “ಜೆಸ್ಸೆಯನ ಮಗ ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಏಕೆ ಬರಲಿಲ್ಲ?” ಎಂದು ತನ್ನ ಮಗ ಯೋನಾತಾನನನ್ನು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಮರುದಿವಸದಲ್ಲಿಯೂ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿಯೂ ದಾವೀದನ ಸ್ಥಾನವು ಬರಿದಾಗಿದ್ದದರಿಂದ ಸೌಲನು - ಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಯಾಕೆ ಬರಲಿಲ್ಲ ಎಂದು ತನ್ನ ಮಗನಾದ ಯೋನಾತಾನನನ್ನು ಕೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಮಾರನೆಯ ದಿನದಲ್ಲಿ, ಅಂದರೆ ಆ ತಿಂಗಳ ಎರಡನೆಯ ದಿನದಲ್ಲಿ ದಾವೀದನ ಸ್ಥಳವು ಮತ್ತೆ ಖಾಲಿಯಾಗಿತ್ತು. ಆಗ ಸೌಲನು ತನ್ನ ಮಗನಾದ ಯೋನಾತಾನನಿಗೆ, “ನಿನ್ನೆ ಮತ್ತು ಇಂದು ಅಮಾವಾಸ್ಯೆ ಔತಣಕ್ಕೆ ಇಷಯನ ಮಗನಾದ ದಾವೀದನು ಏಕೆ ಬರಲಿಲ್ಲ?” ಎಂದು ಕೇಳಿದನು. ಅಧ್ಯಾಯವನ್ನು ನೋಡಿ |