1 ಸಮುಯೇಲ 18:27 - ಕನ್ನಡ ಸಮಕಾಲಿಕ ಅನುವಾದ27 ಆದ್ದರಿಂದ ನೇಮಿಸಿದ ದಿವಸಗಳು ಈಡೇರುವುದಕ್ಕಿಂತ ಮುಂಚೆ ದಾವೀದನು ಎದ್ದು, ತನ್ನ ಜನರನ್ನು ಕರಕೊಂಡು ಹೋಗಿ, ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಹೊಡೆದು, ಅವರ ಮುಂದೊಗಲುಗಳನ್ನು ತಂದು, ತಾನು ಅರಸನಿಗೆ ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಪುತ್ರಿಯಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ದಾವೀದನು ತನ್ನ ಸೇವಕರೊಡನೆ ಹೊರಟು, ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಜನರನ್ನು ಕೊಂದು, ಮುಂದೊಗಲುಗಳನ್ನು ತಂದು, ಅರಸನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ನೇಮಕವಾದ ದಿನಗಳು ಮುಗಿಯುವ ಮೊದಲೇ ತನ್ನ ಸೈನಿಕರೊಡನೆ ಹೊರಟು ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಮಂದಿಯನ್ನು ಕೊಂದು, ಮುಂದೊಗಲುಗಳನ್ನು ತಂದು ಅರಸನ ಅಳಿಯನಾಗಲು ಬೇಕಾಗಿದ್ದ ಲೆಕ್ಕಾಚಾರವನ್ನು ಪೂರ್ತಿ ಆಗಿ ಒಪ್ಪಿಸಿದನು. ಆಗ ಸೌಲನು ತನ್ನ ಮಗಳು ಮೀಕಲಳನ್ನು ದಾವೀದನಿಗೆ ಮದುವೆಮಾಡಿಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ತನ್ನ ಸೈನಿಕರೊಡನೆ ಹೊರಟು ಫಿಲಿಷ್ಟಿಯರ ದೇಶಕ್ಕೆ ಹೋಗಿ ಅಲ್ಲಿನ ಇನ್ನೂರು ಜನರನ್ನು ಕೊಂದು ಮುಂದೊಗಲುಗಳನ್ನು ತಂದು ಅರಸನ ಅಳಿಯನಾಗುವದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ದಾವೀದನು ಮತ್ತು ಅವನ ಜನರು ಫಿಲಿಷ್ಟಿಯರೊಂದಿಗೆ ಹೋರಾಡಲು ಹೋದರು. ಅವರು ಇನ್ನೂರು ಜನ ಫಿಲಿಷ್ಟಿಯರನ್ನು ಕೊಂದು ಅವರ ಮುಂದೊಗಲುಗಳನ್ನು ತೆಗೆದುಕೊಂಡು ಬಂದು ರಾಜನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಸಂಪೂರ್ಣವಾಗಿ ಸೌಲನಿಗೆ ಒಪ್ಪಿಸಿದರು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ದಾವೀದನಿಗೆ ಮದುವೆ ಮಾಡಿಕೊಟ್ಟನು. ಅಧ್ಯಾಯವನ್ನು ನೋಡಿ |