1 ಸಮುಯೇಲ 17:5 - ಕನ್ನಡ ಸಮಕಾಲಿಕ ಅನುವಾದ5 ಅವನ ತಲೆಯ ಮೇಲೆ ಕಂಚಿನ ಶಿರಸ್ತ್ರಾಣ ಇತ್ತು. ಪರೆಪರೆಯಾಗಿ ಜೋಡಿಸಲಾಗಿದ್ದ ಕವಚವನ್ನು ಅವನು ತೊಟ್ಟುಕೊಂಡಿದ್ದನು. ಆ ಕವಚವು ಸುಮಾರು ಐವತ್ತೇಳು ಕಿಲೋಗ್ರಾಂ ತೂಕವಾಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅವನ ಶಿರಸ್ತ್ರಾಣವು ತಾಮ್ರದ್ದು. ತಾಮ್ರ ಲೋಹದ ಬಿಲ್ಲೆಗಳಿಂದ ಪರೆಪರೆಯಾಗಿ ಜೋಡಿಸಲ್ಪಟ್ಟ ಅವನ ಕವಚವು (ಐದು ಸಾವಿರ ಶೆಕೆಲಿನ ತಾಮ್ರದ ನಾಣ್ಯಗಳಷ್ಟು ತೂಕವಾಗಿತ್ತು.) ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಅವನು ಧರಿಸಿದ್ದು ಕಂಚಿನ ಶಿರಸ್ತ್ರಾಣ. ಅದೇ ಲೋಹದ ಬಿಲ್ಲೆಗಳಿಂದ ಪರೆಪರೆಯಾಗಿ ಜೋಡಿಸಲಾಗಿದ್ದ ಅವನ ಕವಚ ಸುಮಾರು ಐವತ್ತೇಳು ಕಿಲೋಗ್ರಾಮಿನಷ್ಟು ತೂಕವಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಅವನ ಶಿರಸ್ತ್ರಾಣವು ತಾಮ್ರದ್ದು; ಅದೇ ಲೋಹದ ಬಿಲ್ಲೆಗಳಿಂದ ಪರೆಪರೆಯಾಗಿ ಜೋಡಿಸಲ್ಪಟ್ಟ ಅವನ ಕವಚವು ಐದು ಸಾವಿರ ರೂಪಾಯಿ ತೂಕವಾಗಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಅವನು ತಾಮ್ರದ ಶಿರಸ್ತ್ರಾಣವನ್ನು ಧರಿಸಿದ್ದನು. ಮೀನಿನ ಮೇಲಿರುವ ಚಿಪ್ಪುಗಳಂತಿದ್ದ ತಾಮ್ರದ ಕವಚವನ್ನು ಅವನು ತೊಟ್ಟಿದ್ದನು. ಅದು ನೂರಿಪ್ಪತ್ತೈದು ಪೌಂಡ್‌ಗಳಷ್ಟು ಭಾರವಾಗಿತ್ತು. ಅಧ್ಯಾಯವನ್ನು ನೋಡಿ |