1 ಸಮುಯೇಲ 17:39 - ಕನ್ನಡ ಸಮಕಾಲಿಕ ಅನುವಾದ39 ದಾವೀದನು ಅವನ ಖಡ್ಗವನ್ನು ತನ್ನ ಕವಚಗಳ ಮೇಲೆ ಕಟ್ಟಿಕೊಂಡು ನಡೆದು ಪರೀಕ್ಷಿಸಿದನು. ಆದರೆ ಅವನಿಗೆ ಅದರ ಅಭ್ಯಾಸವಿರಲಿಲ್ಲ. ಆಗ ದಾವೀದನು ಸೌಲನಿಗೆ, “ನನಗೆ ಅವುಗಳ ಅಭ್ಯಾಸವಿಲ್ಲದ್ದರಿಂದ ಇವುಗಳ ಸಂಗಡ ಹೋಗಲಾರೆನು,” ಎಂದು ಹೇಳಿ, ಅವುಗಳನ್ನು ಬಿಚ್ಚಿಹಾಕಿ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201939 ದಾವೀದನು ಯುದ್ಧ ವಸ್ತ್ರದ ಮೇಲೆ ಕತ್ತಿಯನ್ನೂ ಬಿಗಿದುಕೊಂಡ ನಂತರ ನಡೆಯಲು ಸಾಧ್ಯವಾಗುತ್ತದೆಯೇ ಎಂದು ಪರೀಕ್ಷಿಸಿದ ಮೇಲೆ ಸೌಲನಿಗೆ, “ನನಗೆ ಅಭ್ಯಾಸವಿಲ್ಲದೆ ಇರುವುದರಿಂದ ಇವುಗಳನ್ನು ಧರಿಸಿಕೊಂಡು ನಡೆಯಲಾರೆ” ಎಂದು ಹೇಳಿ ಅವುಗಳನ್ನು ತೆಗೆದಿಟ್ಟು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)39 ದಾವೀದನು ಯುದ್ಧವಸ್ತ್ರವನ್ನು ಧರಿಸಿಕೊಂಡು, ಅದರ ಮೇಲೆ ಕತ್ತಿಯನ್ನು ಬಿಗಿದುಕೊಂಡು, ನಡೆದು ನೋಡಲಾರಂಭಿಸಿದನು. ರೂಢಿಯಿಲ್ಲದ ಕಾರಣ ಅವನು ಸೌಲನಿಗೆ, “ನನಗೆ ಅಭ್ಯಾಸವಿಲ್ಲ. ಇವುಗಳನ್ನು ಧರಿಸಿಕೊಂಡು ನಡೆಯಲಾರೆ,” ಎಂದು ಹೇಳಿ ಅವುಗಳನ್ನು ತೆಗೆದಿಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)39 ದಾವೀದನು ಯುದ್ಧವಸ್ತ್ರದ ಮೇಲೆ ಕತ್ತಿಯನ್ನು ಬಿಗಿದುಕೊಂಡನಂತರ ನಡೆಯಬಹುದೋ ಎಂದು ಪರೀಕ್ಷಿಸಿದ ಮೇಲೆ ಸೌಲನಿಗೆ - ನನಗೆ ಅಭ್ಯಾಸವಿಲ್ಲದರಿಂದ ಇವುಗಳನ್ನು ಧರಿಸಿಕೊಂಡು ನಡೆಯಲಾರೆ ಎಂದು ಹೇಳಿ ಅವುಗಳನ್ನು ತೆಗೆದಿಟ್ಟು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್39 ದಾವೀದನು ಕತ್ತಿಯನ್ನು ಸಿಕ್ಕಿಸಿಕೊಂಡು, ಆ ಕಡೆ ಈ ಕಡೆ ಸುತ್ತಾಡಿದನು. ಸೌಲನ ಯುದ್ಧ ವಸ್ತ್ರಗಳನ್ನು ದಾವೀದನು ಧರಿಸಲು ಪ್ರಯತ್ನಿಸಿದನು. ಆದರೆ ದಾವೀದನಿಗೆ ಅಂತಹ ಭಾರದ ವಸ್ತ್ರಗಳನ್ನು ಧರಿಸಿ ಅಭ್ಯಾಸವಿರಲಿಲ್ಲ. ದಾವೀದನು ಸೌಲನಿಗೆ, “ನಾನು ಇವುಗಳನ್ನು ಧರಿಸಿಕೊಂಡು ಹೋರಾಡಲಾಗುವುದಿಲ್ಲ; ನನಗೆ ಇವುಗಳನ್ನು ಧರಿಸಿಕೊಂಡು ಅಭ್ಯಾಸವಿಲ್ಲ” ಎಂದು ಹೇಳಿ ಅವುಗಳನ್ನೆಲ್ಲ ತೆಗೆದು ಹಾಕಿದನು. ಅಧ್ಯಾಯವನ್ನು ನೋಡಿ |