1 ಸಮುಯೇಲ 17:28 - ಕನ್ನಡ ಸಮಕಾಲಿಕ ಅನುವಾದ28 ದಾವೀದನು ಆ ಮನುಷ್ಯರ ಸಂಗಡ ಮಾತನಾಡುತ್ತಿರುವುದನ್ನು ಅವನ ಹಿರಿಯ ಸಹೋದರನಾದ ಎಲೀಯಾಬನು ಕೇಳಿ, ಅವನ ಮೇಲೆ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ, ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು. ಏಕೆಂದರೆ ಯುದ್ಧವನ್ನು ನೋಡಲು ಇಳಿದು ಬಂದಿದ್ದೀ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ದಾವೀದನು ಜನರ ಸಂಗಡ ಹೀಗೆ ಮಾತನಾಡುತ್ತಿರುವುದನ್ನು ಅವನ ಹಿರಿಯ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿರುವೆ. ನಿನ್ನ ಸೊಕ್ಕು, ತುಂಟತನವು ನನಗೆ ಗೊತ್ತಿದೆ. ನೀನು ಯುದ್ಧವನ್ನು ನೋಡುವುದಕ್ಕೆ ಬಂದಿದ್ದೀ” ಎಂದು ಅವನನ್ನು ಗದರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ದಾವೀದನು ಜನರ ಸಂಗಡ ಹೀಗೆ ಮಾತಾಡುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿದನು. ದಾವೀದನ ಮೇಲೆ ಅವನು ಸಿಟ್ಟುಗೊಂಡು, “ನೀನು ಇಲ್ಲಿಗೆ ಬಂದುದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದೆ? ನಿನ್ನ ಸೊಕ್ಕು, ತುಂಟತನ ನನಗೆ ಗೊತ್ತಿದೆ. ನೀನು ಕದನ-ಕುಚೇಷ್ಟೆ ನೋಡಬಂದಿರುವೆಯಷ್ಟೇ,” ಎಂದು ಗದರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ದಾವೀದನು ಜನರ ಸಂಗಡ ಹೀಗೆ ಮಾತಾಡುತ್ತಿರುವದನ್ನು ಅವನ ಹಿರೀ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು - ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿ? ನಿನ್ನ ಸೊಕ್ಕೂ ತುಂಟತನವೂ ನನಗೆ ಗೊತ್ತದೆ; ನೀನು ಯುದ್ಧವನ್ನು ನೋಡುವದಕ್ಕೆ ಬಂದಿದ್ದೀ ಎಂದು ಅವನನ್ನು ಗದರಿಸಲು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ದಾವೀದನು ಸೈನಿಕರೊಡನೆ ಮಾತಾಡುತ್ತಿರುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿಸಿಕೊಂಡನು. ಎಲೀಯಾಬನು ದಾವೀದನ ಮೇಲೆ ಕೋಪಗೊಂಡು ಅವನಿಗೆ, “ನೀನು ಇಲ್ಲಿಗೆ ಬಂದದ್ದೇಕೆ? ಅಲ್ಲಿದ್ದ ಕೆಲವು ಕುರಿಗಳನ್ನು ಯಾರ ಬಳಿ ಬಿಟ್ಟಿರುವೆ? ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬುದು ನನಗೆ ಗೊತ್ತು. ನಿನಗೆ ಹೇಳಿದ್ದನ್ನು ನೀನು ಮಾಡುವುದಿಲ್ಲ. ನೀನು ಕೇವಲ ಯುದ್ಧವನ್ನು ನೋಡುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆ” ಎಂದು ಗದರಿಸಿದನು. ಅಧ್ಯಾಯವನ್ನು ನೋಡಿ |