Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 14:6 - ಕನ್ನಡ ಸಮಕಾಲಿಕ ಅನುವಾದ

6 ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯುವಕನಿಗೆ, “ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿ ಹೋಗೋಣ ಬಾ; ಒಂದು ವೇಳೆ ಯೆಹೋವ ದೇವರು ನಮಗೋಸ್ಕರ ಕಾರ್ಯವನ್ನು ನಡೆಸುವರು. ಏಕೆಂದರೆ ಅನೇಕ ಜನರಿಂದಲಾದರೂ, ಸ್ವಲ್ಪ ಜನರಿಂದಲಾದರೂ ರಕ್ಷಿಸುವುದಕ್ಕೆ ಯೆಹೋವ ದೇವರಿಗೆ ಅಸಾಧ್ಯವಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ಸುನ್ನತಿಯಿಲ್ಲದ ಈ ಕಾವಲುದಂಡಿನವರಿಗೆ ವಿರೋಧವಾಗಿ ಹೋಗೋಣ ಬಾ. ಒಂದು ವೇಳೆ ಯೆಹೋವನು ತಾನೇ ನಮಗೋಸ್ಕರ ಕಾರ್ಯನಡಿಸುವನು. ಬಹು ಜನರಿದ್ದರೂ, ಸ್ವಲ್ಪ ಜನರಿದ್ದರೂ ರಕ್ಷಿಸುವುದು ಯೆಹೋವನಿಗೆ ಅಸಾಧ್ಯವಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ಸುನ್ನತಿಯಿಲ್ಲದ ಈ ಕಾವಲುದಂಡಿನವರೆಗೆ ನೇರವಾಗಿ ಹೋಗೋಣ ಬಾ; ಬಹುಶಃ ಸರ್ವೇಶ್ವರ ತಾವೇ ನಮ್ಮ ಪರವಾಗಿ ಕಾರ್ಯಸಾಧಿಸುವರು. ಬಹುಜನರಿಂದಾಗಲಿ, ಸ್ವಲ್ಪಜನರಿಂದಾಗಲಿ, ರಕ್ಷಿಸುವುದು ಸರ್ವೇಶ್ವರಸ್ವಾಮಿಗೆ ಅಸಾಧ್ಯವಲ್ಲ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ - ಸುನ್ನತಿಯಿಲ್ಲದ ಈ ಕಾವಲುದಂಡಿನವರಿಗೆ ವಿರೋಧವಾಗಿ ಹೋಗೋಣ ಬಾ; ಒಂದು ವೇಳೆ ಯೆಹೋವನು ತಾನೇ ನಮಗೋಸ್ಕರ ಕಾರ್ಯನಡಿಸುವನು. ಬಹುಜನರಿಂದಾದರೂ ಸ್ವಲ್ಪಜನರಿಂದಾದರೂ ರಕ್ಷಿಸುವದು ಯೆಹೋವನಿಗೆ ಅಸಾಧ್ಯವಲ್ಲ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯೋನಾತಾನನು ತನ್ನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಸಹಾಯಕನಿಗೆ, “ಆ ಹೊರದೇಶಿಯರ ಪಾಳೆಯಕ್ಕೆ ಹೋಗೋಣ ಬಾ. ಈ ಜನರನ್ನು ಸೋಲಿಸಲು ಯೆಹೋವನು ಬಹುಶಃ ನಮ್ಮನ್ನು ಬಳಸಬಹುದು. ಯೆಹೋವನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಮ್ಮಲ್ಲಿ ಅನೇಕ ಸೈನಿಕರಿದ್ದರೂ ಇಲ್ಲವೆ ಕೆಲವೇ ಸೈನಿಕರಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 14:6
31 ತಿಳಿವುಗಳ ಹೋಲಿಕೆ  

ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.


ಹಾಗಾದರೆ, ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಪರವಾಗಿ ಇದ್ದರೆ ನಮ್ಮನ್ನು ವಿರೋಧಿಸುವವರು ಯಾರು?


ಆಗ ಅವನು, “ಜೆರುಬ್ಬಾಬೆಲನಿಗೆ ಯೆಹೋವ ದೇವರ ವಾಕ್ಯವು ಇದೇ: ‘ಪರಾಕ್ರಮದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.


ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?


ಆಗ ಆಸನು ತನ್ನ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸಿ, “ಯೆಹೋವ ದೇವರೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯ ಕೊಡುವುದು ನಿಮಗೆ ಏನೂ ಅಲ್ಲ. ನಮ್ಮ ದೇವರಾದ ಯೆಹೋವ ದೇವರೇ, ನಮಗೆ ಸಹಾಯಮಾಡಿರಿ. ಏಕೆಂದರೆ ನಾವು ನಿಮ್ಮ ಮೇಲೆ ಆತುಕೊಂಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ. ಯೆಹೋವ ದೇವರೇ, ನೀವೇ ನಮ್ಮ ದೇವರು. ಮನುಷ್ಯನು ನಿಮ್ಮೆದುರಿನಲ್ಲಿ ಬಲಗೊಳ್ಳದಿರಲಿ,” ಎಂದನು.


ಒಂದು ವೇಳೆ ಯೆಹೋವ ದೇವರು ನನ್ನ ಕಷ್ಟವನ್ನು ಕಂಡು, ಈ ದಿನದಲ್ಲಿ ಅವನು ಮಾಡಿದ ಶಾಪಕ್ಕೆ ಪ್ರತಿಯಾಗಿ, ನನಗೆ ಒಳ್ಳೆಯದನ್ನು ಮಾಡಬಹುದು,” ಎಂದನು.


ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇ ಯೆಹೋವ ದೇವರನ್ನು ಹುಡುಕಿರಿ. ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ. ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ.


ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ಬಾಗಿಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ. ಒಂದು ವೇಳೆ ಸರ್ವಶಕ್ತರಾದ ಯೆಹೋವ ದೇವರು ಯೋಸೇಫನ ಗೋತ್ರದಲ್ಲಿ ಉಳಿದವರಿಗೆ ಕನಿಕರಿಸಬಹುದು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳ ಪಡದಿರಲಿ. ಬಲಿಷ್ಠನು ತನ್ನ ಬಲದಲ್ಲಿ ಹೆಚ್ಚಳ ಪಡದಿರಲಿ. ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳ ಪಡದಿರಲಿ.


ಜೀವಿಸುವ ದೇವರನ್ನು ನಿಂದಿಸಲು ಅಸ್ಸೀರಿಯದ ಅರಸನಿಂದ ಕಳುಹಿಸಲಾಗಿದ್ದ ಸೈನ್ಯಾಧಿಕಾರಿಯ ನಿಂದೆಯ ಮಾತುಗಳನ್ನು ನಿನ್ನ ದೇವರಾದ ಯೆಹೋವ ದೇವರು ಕೇಳಿದ್ದಾರೆ. ನಿನ್ನ ದೇವರಾದ ಯೆಹೋವ ದೇವರು ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವರು. ಆದ್ದರಿಂದ ನೀನು ಉಳಿದಿರುವ ಜನರಿಗಾಗಿ ಅವರನ್ನು ಪ್ರಾರ್ಥಿಸು,’ ” ಎಂದರು.


“ಗತ್ ಊರಿನಲ್ಲಿ ಇದನ್ನು ತಿಳಿಸಬೇಡಿರಿ. ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ. ಫಿಲಿಷ್ಟಿಯರ ಪುತ್ರಿಯರು ಸಂತೋಷಪಡಬಾರದು; ಸುನ್ನತಿ ಇಲ್ಲದವರ ಪುತ್ರಿಯರು ಉತ್ಸಾಹಪಡಬಾರದು.


ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ, ಆ ಕರಡಿಯನ್ನೂ ಕೊಂದುಬಿಟ್ಟೆನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸಿದ್ದರಿಂದ, ಅವುಗಳಲ್ಲಿ ಒಂದರ ಹಾಗೆ ಇರುವನು,” ಎಂದನು.


ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ, “ಈ ಫಿಲಿಷ್ಟಿಯನನ್ನು ಕೊಂದು, ಇಸ್ರಾಯೇಲಿನ ಮೇಲಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಸಿಕ್ಕುವುದು? ಏಕೆಂದರೆ ಸುನ್ನತಿ ಇಲ್ಲದ ಆ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸುವುದಕ್ಕೆ ಎಷ್ಟರವನು,” ಎಂದನು.


ಅವನಿಗೆ ಬಹಳ ಬಾಯಾರಿಕೆಯಾದದರಿಂದ ಅವನು ಯೆಹೋವ ದೇವರಿಗೆ ಮೊರೆಯಿಟ್ಟನು, “ನಿಮ್ಮ ಸೇವಕನಿಗೆ ನೀವು ಈ ಮಹಾ ರಕ್ಷಣೆಯನ್ನು ಕೊಟ್ಟಿದ್ದೀರಿ. ಈಗ ಬಾಯಾರಿಕೆಯಿಂದ ಬಳಲಿ, ಸುನ್ನತಿಯಾಗದ ಈ ಜನರ ಕೈಯಲ್ಲಿ ನಾನು ಬೀಳಬೇಕೋ?” ಎಂದನು.


ಏಕೆಂದರೆ ದೇವರನ್ನು ಪವಿತ್ರಾತ್ಮರಿಂದ ಆರಾಧಿಸಿ ಕ್ರಿಸ್ತ ಯೇಸುವನ್ನು ಮಹಿಮೆಪಡಿಸುತ್ತಾ ಹರ್ಷಗೊಳ್ಳುವವರೂ ಮಾಂಸದಲ್ಲಿ ಭರವಸೆಯಿಡದ ನಾವೇ ಸುನ್ನತಿಯಾಗಿದ್ದೇವೆ.


ಆ ಬಂಡೆಗಳಲ್ಲಿ ಒಂದು ಉತ್ತರಕ್ಕೆ ಮಿಕ್ಮಾಷಿಗೆ ಎದುರಾಗಿಯೂ, ಮತ್ತೊಂದು ದಕ್ಷಿಣಕ್ಕೆ ಗಿಬೆಯಕ್ಕೆ ಎದುರಾಗಿಯೂ ಇತ್ತು.


ಅದಕ್ಕೆ ಅವನ ಆಯುಧಗಳನ್ನು ಹೊರುವವನು ಅವನಿಗೆ, “ನಿನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಮಾಡು; ನಡಿ, ನಾನು ನನ್ನ ಸಂಪೂರ್ಣ ಹೃದಯದಿಂದ ನಿನ್ನ ಸಂಗಡ ಇದ್ದೇನೆ,” ಎಂದನು.


ಯೆಹೋವ ದೇವರು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವರು; ನಾನು ನಿನ್ನನ್ನು ಹೊಡೆದುಬಿಟ್ಟು, ನಿನ್ನ ತಲೆಯನ್ನು ನಿನ್ನಿಂದ ತೆಗೆದುಹಾಕಿ, ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲರಲ್ಲಿ ದೇವರು ಇದ್ದಾರೆಂದು ಭೂಲೋಕದವರೆಲ್ಲರೂ ತಿಳಿಯುವರು.


ಯೆಹೋವ ದೇವರು ಖಡ್ಗದಿಂದಲೂ, ಈಟಿಯಿಂದಲೂ ರಕ್ಷಿಸುವುದಿಲ್ಲ ಎಂಬುದು ಈ ಸಮೂಹವೆಲ್ಲಾ ತಿಳಿದುಕೊಳ್ಳುವುದು. ಏಕೆಂದರೆ ಯುದ್ಧವು ಯೆಹೋವ ದೇವರದ್ದು, ಅವರು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.


ಆದಕಾರಣ ಅವನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ ನೀನು ನಿನ್ನ ಖಡ್ಗವನ್ನು ಹಿರಿದು, ನನ್ನನ್ನು ತಿವಿ,” ಎಂದನು. ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.


ಯೆಹೋವ ದೇವರು ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಸಮುದ್ರದಲ್ಲಿಯೂ, ಎಲ್ಲಾ ಅಗಾಧಗಳಲ್ಲಿಯೂ ತಾವು ಅಪೇಕ್ಷಿಸುವುದನ್ನೆಲ್ಲಾ ಮಾಡುತ್ತಾರೆ.


“ಇಗೋ, ನಾನು ಸುನ್ನತಿ ಇಲ್ಲದವರ ಸಂಗಡ ಸುನ್ನತಿ ಉಳ್ಳವರೆಲ್ಲರನ್ನೂ, ಈಜಿಪ್ಟನ್ನೂ, ಯೆಹೂದವನ್ನೂ, ಎದೋಮನ್ನೂ, ಅಮ್ಮೋನನ ಮಕ್ಕಳನ್ನೂ, ಮೋವಾಬನ್ನೂ, ಮರುಭೂಮಿಯ ನಿವಾಸಿಗಳಾಗಿರುವ ಕಟ್ಟಕಡೆಯ ಮೂಲೆಯಲ್ಲಿ ಇರುವವರನ್ನೂ ನಾನು ಶಿಕ್ಷಿಸುವ ದಿವಸಗಳು ಬರುತ್ತವೆ. ಏಕೆಂದರೆ ಈ ಜನಾಂಗಗಳವರು ಸುನ್ನತಿಯಿಲ್ಲದವರು. ಇಸ್ರಾಯೇಲಿನ ಮನೆತನದವರೆಲ್ಲರೂ ಹೃದಯದಲ್ಲಿ ಸುನ್ನತಿ ಇಲ್ಲದವರಾಗಿದ್ದಾರೆ,” ಎಂದು ಯೆಹೋವ ದೇವರು ಅನ್ನುತ್ತಾರೆ.


ನೀನು ನಮ್ಮ ಸಂಗಡ ಬಂದರೆ ಯೆಹೋವ ದೇವರು ನಮಗೆ ಕೊಡುವುದಕ್ಕಿರುವ ಒಳ್ಳೆಯದನ್ನು ನಾವು ನಿನ್ನೊಂದಿಗೆ ಹಂಚಿಕೊಳ್ಳುವೆವು,” ಎಂದನು.


ಇಸ್ರಾಯೇಲರ ಸಮಸ್ತ ಗೋತ್ರಗಳೊಳಗೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯನ್ನು ಯುದ್ಧಕ್ಕೆ ಕಳುಹಿಸಬೇಕು,” ಎಂದನು.


ಆದ್ದರಿಂದ ಯೆಹೋವ ದೇವರು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಏಕೆಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ, ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿವಸದಲ್ಲಿ ಕೇಳಿದ್ದಿ. ಯೆಹೋವ ದೇವರು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಯೆಹೋವ ದೇವರು ನನಗೆ ಸಹಾಯ ಮಾಡುವರೆಂದು ನಂಬಿಕೊಂಡಿದ್ದೇನೆ,” ಎಂದನು.


ಆಸನು ಅವನಿಗೆದುರಾಗಿ ಹೊರಟುಹೋದನು. ಮಾರೇಷಾದ ಬಳಿಯಲ್ಲಿ ಚೆಫಾತಾದ ತಗ್ಗಿನಲ್ಲಿ ವ್ಯೂಹ ಕಟ್ಟಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು