Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 14:17 - ಕನ್ನಡ ಸಮಕಾಲಿಕ ಅನುವಾದ

17 ಆಗ ಸೌಲನು ತನ್ನ ಬಳಿಯಲ್ಲಿದ್ದ ಜನರಿಗೆ, “ನಮ್ಮ ಬಳಿಯಿಂದ ಹೋದವರು ಯಾರೆಂದು ಲೆಕ್ಕವನ್ನು ನೋಡಿರಿ,” ಎಂದನು. ಅವರು ಲೆಕ್ಕ ನೋಡುವಾಗ, ಯೋನಾತಾನನೂ, ಅವನ ಆಯುಧಗಳನ್ನು ಹೊರುವವನೂ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಸೌಲನು ತನ್ನ ಜೊತೆಯಲ್ಲಿದ್ದವರಿಗೆ, “ನಮ್ಮನ್ನು ಬಿಟ್ಟುಹೋದವರು ಯಾರೆಂಬುದನ್ನು ಲೆಕ್ಕಮಾಡಿ ನೋಡಿರಿ” ಎಂದು ಆಜ್ಞಾಪಿಸಿದನು. ಅವರು ಲೆಕ್ಕಮಾಡಿ ನೋಡಿದಾಗ ಯೋನಾತಾನನೂ, ಅವನ ಆಯುಧಗಳನ್ನು ಹೊರುವ ಸೇವಕನೂ ಇಲ್ಲವೆಂದು ತಿಳಿದುಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಸೌಲನು ತನ್ನ ಜೊತೆಯಲ್ಲಿದ್ದವರಿಗೆ, “ನಮ್ಮನ್ನು ಬಿಟ್ಟುಹೋದವರು ಯಾರೆಂಬುದನ್ನು ಲೆಕ್ಕಮಾಡಿ ನೋಡಿ,” ಎಂದು ಆಜ್ಞಾಪಿಸಿದನು. ಅವರು ಲೆಕ್ಕಮಾಡಿ ನೋಡುವಾಗ ಯೋನಾತಾನನೂ ಅವನ ಆಯುಧಗಳನ್ನು ಹೊರುವ ಸೇವಕನೂ ಇಲ್ಲದಿರುವುದು ತಿಳಿದುಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಸೌಲನು ತನ್ನ ಜೊತೆಯಲ್ಲಿದ್ದವರಿಗೆ - ನಮ್ಮನ್ನು ಬಿಟ್ಟುಹೋದವರು ಯಾರೆಂಬದನ್ನು ಲೆಕ್ಕಮಾಡಿ ನೋಡಿರಿ ಎಂದು ಆಜ್ಞಾಪಿಸಿದನು. ಅವರು ಲೆಕ್ಕಮಾಡಿ ನೋಡುವಲ್ಲಿ ಯೋನಾತಾನನೂ ಅವನ ಆಯುಧಗಳನ್ನು ಹೊರುವ ಸೇವಕನೂ ಇರುವದಿಲ್ಲವೆಂದು ತಿಳಿದುಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸೌಲನು ತನ್ನೊಡನೆ ಇದ್ದ ಸೈನಿಕರಿಗೆ, “ಪಾಳೆಯದಲ್ಲಿರುವ ಜನರನ್ನು ಲೆಕ್ಕಹಾಕಿ. ಯಾರು ಪಾಳೆಯದಿಂದ ಹೊರಗೆ ಹೋಗಿದ್ದಾರೆ ಎಂಬುದನ್ನು ನಾನು ತಿಳಿಯಬೇಕು” ಎಂದು ಹೇಳಿದನು. ಅವರು ಲೆಕ್ಕಹಾಕಿದಾಗ, ಯೋನಾತಾನನೂ ಅವನ ಸಹಾಯಕನೂ ಹೊರಗೆ ಹೋಗಿರುವುದು ತಿಳಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 14:17
3 ತಿಳಿವುಗಳ ಹೋಲಿಕೆ  

ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕನನ್ನು ಕರೆದು ಅವನಿಗೆ, “ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಖಡ್ಗದಿಂದ ಇರಿದು, ನನ್ನನ್ನು ಕೊಲ್ಲು,” ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು. ಅವನು ಮರಣಹೊಂದಿದನು.


ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ಕಂಡಾಗ, ಆ ಗುಂಪಿನವರು ಕರಗಿ ಹೋಗುತ್ತಾ, ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು.


ಆಗ ಸೌಲನು ಅಹೀಯನಿಗೆ, “ನೀನು ದೇವರ ಮಂಜೂಷವನ್ನು ತೆಗೆದುಕೊಂಡು ಬಾ,” ಎಂದನು. ಏಕೆಂದರೆ ದೇವರ ಮಂಜೂಷವು ಆ ಕಾಲದಲ್ಲಿ ಇಸ್ರಾಯೇಲರ ಬಳಿಯಲ್ಲಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು