Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 14:11 - ಕನ್ನಡ ಸಮಕಾಲಿಕ ಅನುವಾದ

11 ಹಾಗೆಯೇ ಅವರಿಬ್ಬರೂ ತಾವು ಫಿಲಿಷ್ಟಿಯರ ಠಾಣ್ಯದವರೆಗೂ ಕಾಣಿಸಿಕೊಂಡರು. ಆಗ ಫಿಲಿಷ್ಟಿಯರು, “ಗುಹೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಹಿಬ್ರಿಯರು ಹೊರಟು ಬರುತ್ತಾರೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇವರಿಬ್ಬರೂ ಫಿಲಿಷ್ಟಿಯರ ಕಾವಲು ದಂಡಿನವರಿಗೆ ಕಾಣಿಸಿಕೊಂಡಾಗ ಅವರು, “ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಗೆ ಬರುತ್ತಲಿದ್ದಾರೆ” ಎಂದು ತಮ್ಮೊಳಗೆ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಇವರಿಬ್ಬರೂ ಫಿಲಿಷ್ಟಿಯರ ಕಾವಲುದಂಡಿನವರಿಗೆ ಕಾಣಿಸಿಕೊಂಡಾಗ ಅವರು, “ಇಗೋ, ಹಿಬ್ರಿಯರು ತಾವು ಅಡಗಿಕೊಂಡಿದ್ದ ಕಿಂಡಿಗಳಿಂದ ಹೊರಗೆ ಬರುತ್ತಲಿದ್ದಾರೆ,” ಎಂದು ತಮ್ಮೊಳಗೆ ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇವರಿಬ್ಬರೂ ಫಿಲಿಷ್ಟಿಯರ ಕಾವಲುದಂಡಿನವರಿಗೆ ಕಾಣಿಸಿಕೊಂಡಾಗ ಅವರು - ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಗೆ ಬರುತ್ತಲಿದ್ದಾರೆ ಎಂದು ತಮ್ಮೊಳಗೆ ಮಾತಾಡಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಹೀಗೆ ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರಿಗೆ ಕಾಣಿಸಿಕೊಂಡರು. ಫಿಲಿಷ್ಟಿಯರ ಕಾವಲುಗಾರರು, “ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಬರುತ್ತಿದ್ದಾರೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 14:11
5 ತಿಳಿವುಗಳ ಹೋಲಿಕೆ  

ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದದ್ದರಿಂದ ತಾವು ಇಕ್ಕಟ್ಟಿನಲ್ಲಿ ಇರುವುದನ್ನು ಕಂಡು, ಗವಿಗಳಲ್ಲಿಯೂ, ಮುಳ್ಳಿನ ಪೊದೆಗಳಲ್ಲಿಯೂ, ಗುಡ್ಡಗಳಲ್ಲಿಯೂ, ಕುಣಿಗಳಲ್ಲಿಯೂ ಬಾವಿಗಳಲ್ಲಿಯೂ ಅಡಗಿಕೊಂಡರು.


ಫಿಲಿಷ್ಟಿಯರು ಓಡಿಹೋದರೆಂದು ಎಫ್ರಾಯೀಮ್ ಬೆಟ್ಟದಲ್ಲಿ ಅಡಗಿಕೊಂಡಿದ್ದ ಸಮಸ್ತ ಇಸ್ರಾಯೇಲರು ಕೇಳಿದಾಗ, ಅವರೂ ಹಾಗೆಯೇ ಯುದ್ಧದಲ್ಲಿ ಅವರನ್ನು ಬಿಡದೆ ಹಿಂದಟ್ಟಿದ್ದರು.


ಮಿದ್ಯಾನ್ಯರ ಕೈ ಇಸ್ರಾಯೇಲಿಗೆ ವಿರೋಧವಾಗಿ ಬಲವಾದ್ದರಿಂದ ಇಸ್ರಾಯೇಲರು ಮಿದ್ಯಾನ್ಯರ ನಿಮಿತ್ತ ತಮಗೆ ಪರ್ವತಗಳಲ್ಲಿ ಇರುವ ಬಂಡೆಯ ಬಿರುಕುಗಳನ್ನೂ, ಗವಿಗಳನ್ನೂ, ಬಲವಾದ ಸ್ಥಾನಗಳನ್ನೂ ಮಾಡಿಕೊಂಡರು.


ಅವರು ಭಯಗೊಳ್ಳುವರು; ನಡುಗುತ್ತಾ ತಮ್ಮ ಕೋಟೆಗಳಿಂದ ಹೊರಬರುವರು.


ಆಗ ಫಿಲಿಷ್ಟಿಯರ ಅಧಿಪತಿಗಳು, “ಈ ಹಿಬ್ರಿಯರು ಏಕೆ?” ಎಂದರು. ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ, “ಇಸ್ರಾಯೇಲಿನ ಅರಸನಾದ ಸೌಲನ ದಾಸನಾದ ಈ ದಾವೀದನು ಇಷ್ಟು ದಿವಸಗಳೂ, ಇಷ್ಟು ವರ್ಷಗಳೂ ನನ್ನ ಸಂಗಡ ಇದ್ದಾನೆ? ಸೌಲನನ್ನು ಬಿಟ್ಟು ನನ್ನ ಹತ್ತಿರ ಬಂದ ದಿವಸ ಮೊದಲುಗೊಂಡು ಇಂದಿನವರೆಗೂ ನಾನು ಅವನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು