Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 12:19 - ಕನ್ನಡ ಸಮಕಾಲಿಕ ಅನುವಾದ

19 ಜನರೆಲ್ಲರು ಸಮುಯೇಲನಿಗೆ, “ನಾವು ಸಾಯದ ಹಾಗೆ ನಿನ್ನ ದೇವರಾದ ಯೆಹೋವ ದೇವರಿಗೆ ನಿನ್ನ ಸೇವಕರಿಗೋಸ್ಕರ ಪ್ರಾರ್ಥನೆ ಮಾಡು. ಏಕೆಂದರೆ ನಮಗೆ ಒಬ್ಬ ಅರಸನು ಬೇಕೆಂದು ಕೇಳಿ, ನಮ್ಮ ಸಮಸ್ತ ಪಾಪಗಳಿಗೆ ಕೆಟ್ಟದ್ದನ್ನು ಕೂಡಿಸಿದ್ದೇವೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಸಮುವೇಲನನ್ನು, “ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದ್ದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪ ಸೇರಿಕೊಂಡಿತು; ಆದ್ದರಿಂದ ನಿನ್ನ ಸೇವಕರಾದ ನಾವು ಸಾಯದಂತೆ ನಿನ್ನ ದೇವರಾದ ಯೆಹೋವನನ್ನು ಬೇಡಿಕೋ” ಎಂದು ವಿಜ್ಞಾಪಿಸಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಸಮುವೇಲನನ್ನು, “ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದ್ದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪ ಕೂಡಿತು; ಆದುದರಿಂದ ನಿಮ್ಮ ಸೇವಕರಾದ ನಾವು ಸಾಯದಂತೆ ನಿಮ್ಮ ದೇವರಾದ ಸರ್ವೇಶ್ವರನನ್ನು ಬೇಡಿಕೊಳ್ಳಿ,” ಎಂದು ಸಮುವೇಲನನ್ನು ವಿಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪವು ಕೂಡಿತು; ಆದದರಿಂದ ನಿನ್ನ ಸೇವಕರಾದ ನಾವು ಸಾಯದಂತೆ ನಿನ್ನ ದೇವರಾದ ಯೆಹೋವನನ್ನು ಬೇಡಿಕೋ ಎಂದು ವಿಜ್ಞಾಪಿಸಲು ಅವನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಜನರೆಲ್ಲಾ ಸಮುವೇಲನಿಗೆ, “ನಿನ್ನ ಸೇವಕರಾದ ನಮಗಾಗಿ, ನಿನ್ನ ದೇವರಾದ ಯೆಹೋವನಲ್ಲಿ ಪ್ರಾರ್ಥಿಸು. ನಮ್ಮನ್ನು ಸಾಯಲು ಬಿಡಬೇಡ. ನಾವು ಅನೇಕ ಸಲ ಪಾಪಗಳನ್ನು ಮಾಡಿದ್ದೇವೆ. ಈಗ ನಾವು ರಾಜನನ್ನು ಕೇಳಿಕೊಂಡಿದ್ದು ನಮ್ಮ ಪಾಪಗಳೊಂದಿಗೆ ಮತ್ತೊಂದು ಪಾಪವನ್ನು ಮಾಡಿದಂತಾಯಿತು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 12:19
24 ತಿಳಿವುಗಳ ಹೋಲಿಕೆ  

ಆದ್ದರಿಂದ ಈ ಬಲವಾದ ಗುಡುಗುಗಳೂ ಆಲಿಕಲ್ಲಿನ ಮಳೆಯೂ ಇನ್ನು ಸಾಕು. ಇವುಗಳು ನಿಂತುಹೋಗುವಂತೆ ಯೆಹೋವ ದೇವರನ್ನು ಬೇಡಿಕೊಳ್ಳಿರಿ, ನೀವು ಇನ್ನು ಇಲ್ಲಿ ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು,” ಎಂದನು.


ಮರಣಕರವಲ್ಲದ ಪಾಪವನ್ನು ಮಾಡುವ ಸಹೋದರ ಅಥವಾ ಸಹೋದರಿಯನ್ನು ಯಾರಾದರೂ ಕಂಡರೆ, ಆ ಸಹೋದರ ಅಥವಾ ಸಹೋದರಿಯರಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಅವರಿಗೆ ಜೀವವನ್ನು ದಯಪಾಲಿಸುವರು. ಮರಣಕರವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ ಮರಣಕರವಾದ ಪಾಪವೂ ಉಂಟು. ಈ ಮರಣಕರವಾದ ಪಾಪದ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ.


ಇದಲ್ಲದೆ ನಾನು ನಿಮಗೋಸ್ಕರ ಪ್ರಾರ್ಥನೆ ಮಾಡದೆ, ಯೆಹೋವ ದೇವರಿಗೆ ವಿರೋಧವಾಗಿ ಮಾಡುವ ಪಾಪವು ನನಗೆ ದೂರವಾಗಿರಲಿ. ಉತ್ತಮವಾದ, ಸರಿಯಾದ ಮಾರ್ಗವನ್ನು ನಿಮಗೆ ಬೋಧಿಸುವೆನು.


ಹೀಗಿರುವುದರಿಂದ ಈಗ ಒಂದೇ ಸಾರಿ ಮಾತ್ರ ನನ್ನ ಪಾಪವನ್ನು ಕ್ಷಮಿಸಬೇಕು. ಈ ಮರಣಕರವಾದ ಉಪದ್ರವವನ್ನು ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಿರಿ,” ಎಂದನು.


ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುತ್ತದೆ. ಕರ್ತ ಯೇಸು ಅವನನ್ನು ಎಬ್ಬಿಸುವರು. ಪಾಪಗಳನ್ನು ಮಾಡಿದವನಾಗಿದ್ದರೆ ಅವನು ಕ್ಷಮೆಯನ್ನು ಪಡೆಯುತ್ತಾನೆ.


ಆಗ ಸೀಮೋನನು, “ನೀವು ಹೇಳಿದ ಯಾವುದೂ ನನಗೆ ಸಂಭವಿಸದಂತೆ ನನಗೋಸ್ಕರ ಕರ್ತ ಯೇಸುವಿನಲ್ಲಿ ಪ್ರಾರ್ಥಿಸಿರಿ,” ಎಂದು ಬೇಡಿಕೊಂಡನು.


“ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ. ನಿಮ್ಮ ಕೈಗಳಿಂದ ಅಂಥ ಅರ್ಪಣೆಯನ್ನು ಅವರು ಸ್ವೀಕರಿಸುವರೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಆಗ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಮೋಶೆಯೂ ಸಮುಯೇಲನೂ ನನ್ನ ಮುಂದೆ ನಿಂತರೂ, ನನ್ನ ಮನಸ್ಸು ಈ ಜನರ ಮೇಲೆ ಇರುವುದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿಬಿಡು. ಅವರು ಹೋಗಲಿ.


ಯೆಹೋವ ದೇವರೇ, ಇಕ್ಕಟ್ಟಿನಲ್ಲಿ ಅವರು ನಿಮ್ಮನ್ನು ಹುಡುಕಿದರು. ನಿಮ್ಮ ಶಿಕ್ಷೆ ಅವರ ಮೇಲಿರುವಾಗ, ಅವರು ಪ್ರಾರ್ಥನೆಯನ್ನು ಮಾಡಿದರು.


ಆದುದರಿಂದ ಈಗ ನೀವು ಏಳು ಹೋರಿಗಳನ್ನು, ಏಳು ಟಗರುಗಳನ್ನು ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಬನ್ನಿರಿ. ನಿಮ್ಮ ದೋಷಪರಿಹಾರಕ್ಕಾಗಿ ದಹನಬಲಿಯನ್ನು ಅರ್ಪಿಸಿರಿ; ನನ್ನ ದಾಸನಾದ ಯೋಬನು ನಿಮ್ಮ ಪರವಾಗಿ ಪ್ರಾರ್ಥನೆಮಾಡುವನು. ನಾನು ನಿಮ್ಮ ಬುದ್ಧಿಹೀನತೆಯ ಪ್ರಕಾರ ದಂಡಿಸದಂತೆ, ಅವನ ಪ್ರಾರ್ಥನೆಯನ್ನು ಸ್ವೀಕರಿಸುವೆನು. ನೀವು ನನ್ನ ದಾಸನಾದ ಯೋಬನಂತೆ ನನ್ನ ವಿಷಯವಾಗಿ ಸತ್ಯವನ್ನು ಆಡಲಿಲ್ಲ,” ಎಂದು ಹೇಳಿದರು.


ಅವರು ಸಮುಯೇಲನಿಗೆ, “ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವವರೆಗೆ, ನೀನು ನಮಗೋಸ್ಕರವಾಗಿ ಪ್ರಾರ್ಥನೆಮಾಡಿ ಮೊರೆಯಿಡುವುದನ್ನು ನಿಲ್ಲಿಸಬೇಡ,” ಎಂದರು.


ಸಮುಯೇಲನು, “ನಾನು ನಿಮಗೋಸ್ಕರವಾಗಿ ಯೆಹೋವ ದೇವರನ್ನು ಪ್ರಾರ್ಥಿಸುವ ಹಾಗೆ ಇಸ್ರಾಯೇಲರನ್ನೆಲ್ಲಾ ಮಿಚ್ಪೆಯಲ್ಲಿ ಕೂಡಿಸಿಕೊಳ್ಳಿರಿ,” ಎಂದನು.


ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸಿಬಿಡು. ಏಕೆಂದರೆ ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವಂತೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ, ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ,” ಎಂದರು.


ಆದ್ದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ಯೆಹೋವ ದೇವರಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ. ಯೆಹೋವ ದೇವರು ನಮ್ಮ ಮೇಲಿಂದ ಸರ್ಪಗಳನ್ನು ದೂರಮಾಡುವ ಹಾಗೆ ಪ್ರಾರ್ಥನೆ ಮಾಡು,” ಎಂದರು. ಆಗ ಮೋಶೆಯು ಜನರಿಗೋಸ್ಕರ ಪ್ರಾರ್ಥನೆಮಾಡಿದನು.


ಈಗ ನೀವು ಆರಿಸಿಕೊಂಡು ಅಪೇಕ್ಷಿಸಿದ ಅರಸನು ಇಲ್ಲಿ ಇದ್ದಾನೆ. ಯೆಹೋವ ದೇವರು ನಿಮ್ಮ ಮೇಲೆ ಅವನನ್ನು ಅರಸನನ್ನಾಗಿ ನೇಮಿಸಿದ್ದಾರೆ.


ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದರಿಂದ, ಯೆಹೋವ ದೇವರ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತನವು ಹೆಚ್ಚಾಗಿದೆ ಎಂದು ತಿಳಿದುಕೊಂಡು ನೋಡುವ ಹಾಗೆ, ನಾನು ಯೆಹೋವ ದೇವರಿಗೆ ಮೊರೆಯಿಡುವೆನು. ಆಗ ಅವರು ಗುಡುಗನ್ನೂ, ಮಳೆಯನ್ನೂ ಕಳುಹಿಸುವರು,” ಎಂದನು.


ಆಗ ಸಮುಯೇಲನು ಜನರಿಗೆ, “ನೀವು ಭಯಪಡಬೇಡಿರಿ. ಈ ಕೆಟ್ಟತನವನ್ನೆಲ್ಲಾ ಮಾಡಿದ್ದೀರಿ. ಆದರೂ ಯೆಹೋವ ದೇವರನ್ನು ಬಿಟ್ಟು ತಿರುಗದೆ, ನಿಮ್ಮ ಪೂರ್ಣಹೃದಯದಿಂದ ಯೆಹೋವ ದೇವರನ್ನು ಸೇವಿಸಿರಿ.


ಜನರ ಶಿಕ್ಷಣಕ್ಕಾಗಿಯೂ, ಭೂಮಿಯ ಹಿತಕ್ಕಾಗಿಯೂ ದೇವರು ತಮ್ಮ ಪ್ರೀತಿಯನ್ನು ತೋರಿಸಲು, ಮೇಘಗಳನ್ನು ಬರಮಾಡುತ್ತಾರೆ.


ಅವರು ನಿಜವಾದ ಪ್ರವಾದಿಗಳಾಗಿದ್ದರೆ, ಯೆಹೋವ ದೇವರ ವಾಕ್ಯ ಅವರಲ್ಲಿ ನೆಲಸಿದ್ದರೆ, ದೇವಾಲಯದಲ್ಲೂ, ಯೆಹೂದದ ಅರಸನ ಅರಮನೆಯಲ್ಲೂ, ಯೆರೂಸಲೇಮಿನಲ್ಲೂ, ಇನ್ನು ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಸೇನಾಧೀಶ್ವರ ಯೆಹೋವ ದೇವರಿಗೆ ವಿಜ್ಞಾಪನೆಮಾಡಿ ಬೇಡಿಕೊಳ್ಳಲಿ.


ಪ್ರವಾದಿಯಾದ ಯೆರೆಮೀಯನಿಗೆ, “ನಮ್ಮ ವಿಜ್ಞಾಪನೆ ನಿಮ್ಮ ಮುಂದೆ ಬರಲಿ. ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ, ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ? ನಮಗೋಸ್ಕರವೂ ಎಂದರೆ ಈ ಸಮಸ್ತ ಶೇಷಕ್ಕೋಸ್ಕರವೂ,


ಮರುದಿನದಲ್ಲಿ, ಮೋಶೆಯು ಜನರಿಗೆ, “ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ. ಆದ್ದರಿಂದ ನಾನು ಈಗ ಬೆಟ್ಟವನ್ನು ಹತ್ತಿ ಯೆಹೋವ ದೇವರ ಬಳಿಗೆ ಹೋಗುವೆನು. ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು,” ಎಂದನು.


“ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು,” ಎಂದು ಅವರು ಹೇಳಿದ್ದು ಸಮುಯೇಲನಿಗೆ ಕೆಟ್ಟದ್ದಾಗಿ ಕಾಣಿಸಿತು. ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.


ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ, ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ, ಪ್ರವಾದಿಯಾದ ಯೆರೆಮೀಯನ ಬಳಿಗೆ ಕಳುಹಿಸಿ, “ನಮಗೋಸ್ಕರ ನಮ್ಮ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸು,” ಎಂದು ಹೇಳಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು