Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 11:1 - ಕನ್ನಡ ಸಮಕಾಲಿಕ ಅನುವಾದ

1 ಅಮ್ಮೋನಿಯನಾದ ನಾಹಾಷನು ದಂಡೆತ್ತಿ ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ಮುತ್ತಿಗೆಹಾಕಿದನು. ಆಗ ಯಾಬೇಷಿನ ಜನರೆಲ್ಲರು ನಾಹಾಷನಿಗೆ, “ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿದರೆ, ನಾವು ನಿನಗೆ ಅಧೀನರಾಗಿರುವೆವು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅಮ್ಮೋನಿಯನಾದ ನಾಹಾಷನು ಹೊರಟು ಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಲು, ಯಾಬೇಷಿನವರು ಅವನನ್ನು, “ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿಕೋ; ನಾವು ನಿನ್ನನ್ನು ಸೇವಿಸುವೆವು” ಎಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಒಂದು ತಿಂಗಳ ನಂತರ ಅಮ್ಮೋನಿಯನಾದ ನಾಹಾಷನು ದಂಡೆತ್ತಿ ಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನವರು ಅವನನ್ನು, “ನೀನು ನಮ್ಮ ಸಂಗಡ ಸಂಧಾನ ಮಾಡಿಕೋ; ನಾವು ನಿನಗೆ ಅಧೀನರಾಗಿರುತ್ತೇವೆ,” ಎಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅಮ್ಮೋನಿಯನಾದ ನಾಹಾಷನು ಹೊರಟುಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆಹಾಕಲು ಯಾಬೇಷಿನವರು ಅವನನ್ನು - ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿಕೋ; ನಾವು ನಿನ್ನ ಸೇವಕರಾಗಿರುವೆವು ಎಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಅಮ್ಮೋನಿಯನಾದ ನಾಹಾಷನು ಒಂದು ತಿಂಗಳ ನಂತರ, ತನ್ನ ಸೈನ್ಯದೊಂದಿಗೆ ಯಾಬೇಷ್‌ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನ ಜನರೆಲ್ಲ ನಾಹಾಷನಿಗೆ, “ನೀನು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾದರೆ, ನಾವು ನಿನ್ನ ಸೇವೆಮಾಡುತ್ತೇವೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 11:1
23 ತಿಳಿವುಗಳ ಹೋಲಿಕೆ  

“ಆದರೆ ಅಮ್ಮೋನ್ಯರ ಅರಸನಾದ ನಾಹಾಷನು ನಿಮಗೆ ವಿರೋಧವಾಗಿ ಯುದ್ಧಮಾಡಲು ಬರುವುದನ್ನು ಕಂಡಾಗ, ನಿಮ್ಮ ದೇವರಾದ ಯೆಹೋವ ದೇವರೇ ನಿಮಗೆ ಅರಸರಾಗಿದ್ದರು. ಆಗ ನೀವು, ‘ನಮಗೆ ಹಾಗೆ ಬೇಡ, ಒಬ್ಬ ಅರಸನು ನಮ್ಮನ್ನು ಆಳಬೇಕು,’ ಎಂದಿರಿ.


ಅರಸನ ಸಂತಾನದವರನ್ನು ಕರೆದುಕೊಂಡು ಅವರ ಸಂಗಡ ಒಡಂಬಡಿಕೆ ಮಾಡಿ, ಅವನಿಂದ ಪ್ರಮಾಣ ಮಾಡಿಸಿ, ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.


ಆಗ ಬೆನ್ಹದದನು ಅವನಿಗೆ, “ನನ್ನ ತಂದೆಯು ನಿನ್ನ ತಂದೆಯಿಂದ ತೆಗೆದುಕೊಂಡ ಪಟ್ಟಣಗಳನ್ನು ತಿರುಗಿಕೊಡುತ್ತೇನೆ. ನನ್ನ ತಂದೆ ಸಮಾರ್ಯದಲ್ಲಿ ಮಾಡಿದ ಹಾಗೆಯೇ, ದಮಸ್ಕದಲ್ಲಿ ನೀನು ನಿನಗಾಗಿ ಬೀದಿಗಳನ್ನು ಮಾಡಿಸಬೇಕು,” ಎಂದನು. ಅದಕ್ಕೆ ಅಹಾಬನು, “ಈ ಒಡಂಬಡಿಕೆಯ ಪ್ರಕಾರವೇ ನಿನ್ನನ್ನು ಕಳುಹಿಸಿಬಿಡುತ್ತೇನೆ,” ಎಂದನು. ಹೀಗೆಯೇ ಅಹಾಬನು ಬೆನ್ಹದದನ ಸಂಗಡ ಒಡಂಬಡಿಕೆಯನ್ನು ಮಾಡಿ, ಅವನನ್ನು ಕಳುಹಿಸಿಬಿಟ್ಟನು.


ಇಸ್ರಾಯೇಲಿನ ಗೋತ್ರಗಳಲ್ಲಿ ಮಿಚ್ಪೆಗೆ ಯೆಹೋವ ದೇವರ ಬಳಿಗೆ ಬಾರದವರು ಯಾರಾದರೂ ಒಬ್ಬರಿದ್ದಾರೋ?” ಎಂದರು. ಆಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಸಭೆಯ ಬಳಿಗೆ ಪಾಳೆಯಕ್ಕೆ ಬಂದಿರಲಿಲ್ಲ.


ಅದಕ್ಕೆ ಅವರು, “ನಿಶ್ಚಯವಾಗಿ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ ಎಂದು ತಿಳಿದು, ನಮಗೂ, ನಿನಗೂ ಮಧ್ಯದಲ್ಲಿ ಒಂದು ಪ್ರಮಾಣವಿರುವ ಹಾಗೆ, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳೋಣವೆಂದು ನಾವು ತೀರ್ಮಾನಿಸಿದ್ದೇವೆ.


ನೀನು ಅದನ್ನು ಇಡೀ ಜೀವಮಾನಕ್ಕೂ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಂಡೀತೆ?


ಅವರ ಸಂಗಡ, ಅವರ ದೇವರುಗಳ ಸಂಗಡ ಯಾವ ಒಡಂಬಡಿಕೆಯನ್ನು ಮಾಡಿಕೊಳ್ಳಬಾರದು.


“ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.


ಅವರು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ಯೆಹೋವ ದೇವರು ಇಸ್ರಾಯೇಲ್ಯರ ಮೇಲೆ ಕೋಪವುಳ್ಳವರಾಗಿ ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಮಾರಿಬಿಟ್ಟರು.


ಅಮ್ಮೋನಿಯರು ಇಲ್ಲವೆ ಮೋವಾಬ್ಯರು ಯೆಹೋವ ದೇವರ ಸಭೆಗೆ ಸೇರಬಾರದು; ಹತ್ತನೆಯ ತಲಾಂತರವರೆಗೆ ಅವರು ಯೆಹೋವ ದೇವರ ಸಭೆಯಲ್ಲಿ ಸೇರಬಾರದು.


ಹೀಗೆ ಸೌಲನು ಇಸ್ರಾಯೇಲಿನ ದೊರೆತನವನ್ನು ತೆಗೆದುಕೊಂಡು, ಸುತ್ತಲಿರುವ ತನ್ನ ಸಮಸ್ತ ಶತ್ರುಗಳಾದ ಮೋವಾಬ್ಯರ ಮೇಲೆಯೂ, ಅಮ್ಮೋನ್ಯರ ಮೇಲೆಯೂ, ಎದೋಮ್ಯರ ಮೇಲೆಯೂ, ಚೋಬದ ಅರಸರ ಮೇಲೆಯೂ, ಫಿಲಿಷ್ಟಿಯರ ಮೇಲೆಯೂ ಯುದ್ಧಮಾಡಿದನು. ಯಾರ ಮೇಲೆ ತಿರುಗಿದನೋ, ಅವರನ್ನು ಪೀಡಿಸಿದನು.


ಇದರ ತರುವಾಯ, ಅಮ್ಮೋನಿಯರ ಅರಸನು ಮರಣಹೊಂದಿದನು. ಅವನಿಗೆ ಬದಲಾಗಿ ಅವನ ಮಗ ಹಾನೂನನು ಅರಸನಾದನು.


ಆಗ ದಾವೀದನು, “ಹಾನೂನನ ತಂದೆಯಾದ ನಾಹಾಷನು ನನಗೆ ದಯೆ ತೋರಿಸಿದ್ದರಿಂದ, ನಾನೂ ಅವನ ಮಗ ಹಾನೂನನಿಗೆ ದಯೆ ತೋರಿಸುವೆನು,” ಎಂದನು. ದಾವೀದನು ಅವನ ತಂದೆಯನ್ನು ಕುರಿತು ಹಾನೂನನಿಗೆ ಸಂತಾಪ ಸೂಚಿಸಲು ತನ್ನ ಸೇವಕರನ್ನು ಕಳುಹಿಸಿದನು. ಹೀಗೆಯೇ ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಬಂದರು.


ದಾವೀದನು ಮಹನಯಿಮಿಗೆ ಬಂದಾಗ, ಅಮ್ಮೋನಿಯರ ರಬ್ಬಾ ಪಟ್ಟಣದ ನಾಹಾಷನ ಮಗ ಶೋಬಿಯೂ, ಲೋದೆಬಾರು ಊರಿನವನಾಗಿರುವ ಅಮ್ಮಿಯೇಲನ ಮಗ ಮಾಕೀರನೂ, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈಯೂ


ಹಾಗೆಯೇ ಮೋವಾಬಿನಲ್ಲಿಯೂ, ಅಮ್ಮೋನನ ಮಕ್ಕಳಲ್ಲಿಯೂ, ಎದೋಮಿನಲ್ಲಿಯೂ, ಸಕಲ ದೇಶಗಳಲ್ಲಿಯೂ ಇದ್ದ ಯೆಹೂದ್ಯರೆಲ್ಲರೂ ಬಾಬಿಲೋನಿನ ಅರಸನು ಯೆಹೂದದ ಒಂದು ಶೇಷವನ್ನು ಬಿಟ್ಟಿದ್ದನೆಂದೂ, ಶಾಫಾನನ ಮೊಮ್ಮಗ ಅಹೀಕಾಮನ ಮಗ ಗೆದಲ್ಯನನ್ನು ಅವರಿಗೆ ಅಧಿಪತಿಯನ್ನಾಗಿ ನೇಮಿಸಿದ್ದಾನೆಂದು ಕೇಳಿದಾಗ


“ಅಮ್ಮೋನನ ಮಕ್ಕಳ ಅರಸನಾದ ಬಾಲೀಸನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆಂದು ನಿನಗೆ ತಿಳಿದಿದೆಯೋ?” ಎಂದನು. ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.


ಕೆಲವು ದಿವಸಗಳಾದ ಮೇಲೆ ಅಮ್ಮೋನಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಿದರು.


ದಾವೀದನು ಯಾಬೇಷ್ ಗಿಲ್ಯಾದಿನವರಿಗೆ ದೂತರನ್ನು ಕಳುಹಿಸಿ, “ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ, ಅವನನ್ನು ಸಮಾಧಿಮಾಡಿದ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ.


ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ,


ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು