Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 1:17 - ಕನ್ನಡ ಸಮಕಾಲಿಕ ಅನುವಾದ

17 ಆಗ ಏಲಿಯು ಅವಳಿಗೆ, “ಸಮಾಧಾನದಿಂದ ಹೋಗು. ಇಸ್ರಾಯೇಲಿನ ದೇವರು, ಅವರಿಂದ ನೀನು ಬೇಡಿಕೊಂಡ ನಿನ್ನ ವಿಜ್ಞಾಪನೆಯಂತೆ ನಿನಗೆ ಕೊಡಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಗ ಏಲಿಯು ಆಕೆಗೆ, “ಸಮಾಧಾನದಿಂದ ಹೋಗು; ಇಸ್ರಾಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆಗ ಏಲಿ ಆಕೆಗೆ, “ಸಮಾಧಾನದಿಂದ ಹೋಗು. ಇಸ್ರಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ಈಡೇರಿಸಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಗ ಏಲಿಯು ಆಕೆಗೆ - ಸಮಾಧಾನದಿಂದ ಹೋಗು; ಇಸ್ರಾಯೇಲ್ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ ಎನ್ನಲು ಹನ್ನಳು ಏಲಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಏಲಿಯು, “ಸಮಾಧಾನದಿಂದ ಹೋಗು. ಇಸ್ರೇಲಿನ ದೇವರು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 1:17
14 ತಿಳಿವುಗಳ ಹೋಲಿಕೆ  

ಯೇಸು ಆ ಸ್ತ್ರೀಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು, ನಿನ್ನ ಬಾಧೆಯಿಂದ ನೀನು ಮುಕ್ತಳಾಗಿರುವೆ,” ಎಂದು ಹೇಳಿದರು.


ಆ ಯಾಜಕನು, “ಸಮಾಧಾನವಾಗಿ ಹೋಗಿರಿ. ನೀವು ಹೋಗುವ ನಿಮ್ಮ ಮಾರ್ಗಕ್ಕೆ ಯೆಹೋವ ದೇವರ ಒಪ್ಪಿಗೆ ಇದೆ,” ಎಂದನು.


ಅದಕ್ಕೆ ಎಲೀಷನು, “ಸಮಾಧಾನದಿಂದ ಹೋಗು,” ಎಂದನು. ನಾಮಾನನು ಸ್ವಲ್ಪ ದೂರ ಹೋದನು.


ಅವಳು ತನಗೆ ತಂದದ್ದನ್ನು ದಾವೀದನು ತೆಗೆದುಕೊಂಡು ಅವಳಿಗೆ, “ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ನಾನು ನಿನ್ನ ಮಾತನ್ನು ಕೇಳಿ ನಿನ್ನ ಮುಖ ದಾಕ್ಷಿಣ್ಯವನ್ನು ನೋಡಿದೆನು,” ಎಂದನು.


ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು,” ಎಂದರು.


ಆಗ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು,” ಎಂದರು.


ಆದರೆ ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀವು ನನ್ನನ್ನು ನಿಜವಾಗಿ ಆಶೀರ್ವದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿಮ್ಮ ಹಸ್ತವು ನನ್ನ ಸಂಗಡ ಇರಲಿ; ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನ್ನು ಕೇಡಿನಿಂದ ತಪ್ಪಿಸಿರಿ,” ಎಂದು ಮೊರೆಯಿಟ್ಟನು. ದೇವರು ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿದರು.


ಆದ್ದರಿಂದ ನೀನು ಫಿಲಿಷ್ಟಿಯರ ಅಧಿಪತಿಗಳ ದೃಷ್ಟಿಗೆ ಮೆಚ್ಚಿಗೆ ಇಲ್ಲದ್ದರಿಂದ ಈಗ ಸಮಾಧಾನವಾಗಿ ಹಿಂದಕ್ಕೆ ನಿನ್ನ ಸ್ಥಳಕ್ಕೆ ಹೋಗು,” ಎಂದನು.


ಆದರೆ ಆಕೆಯು ಬಂಜೆಯಾಗಿದ್ದುದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವ ದೇವರನ್ನು ಬೇಡಿಕೊಂಡನು. ಯೆಹೋವ ದೇವರು ಅವನ ಬೇಡಿಕೆಯನ್ನು ಪೂರೈಸಿದರು. ಆದ್ದರಿಂದ ಅವನ ಹೆಂಡತಿ ರೆಬೆಕ್ಕಳು ಗರ್ಭಿಣಿಯಾದಳು.


ನಿನ್ನ ದಾಸಿಯನ್ನು ದುಷ್ಟಳೆಂದು ನೆನಸಬೇಡ. ನನ್ನ ಹೆಚ್ಚಾದ ಚಿಂತೆಯಿಂದಲೂ, ದುಃಖದಿಂದಲೂ ಈವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು,” ಎಂದಳು.


ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ, “ನೀನು ನಿನಗೆ ಒಳ್ಳೆಯದಾಗಿ ತೋರುವ ಹಾಗೆ ಮಾಡು. ಅವನು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ಕಾದುಕೊಂಡಿರು. ಯೆಹೋವ ದೇವರು ತಮ್ಮ ವಾಕ್ಯವನ್ನು ಪೂರೈಸಲಿ,” ಎಂದನು. ಹಾಗೆಯೇ ಅವಳು ನಿಂತು ತನ್ನ ಮಗುವು ಎದೆಹಾಲು ಬಿಡುವವರೆಗೂ ಅವನಿಗೆ ಎದೆಹಾಲು ಕೊಡುತ್ತಿದ್ದಳು.


ಆಗ ಯೋನಾತಾನನು ದಾವೀದನಿಗೆ, “ನೀನು ಸಮಾಧಾನವಾಗಿ ಹೋಗು, ಯೆಹೋವ ದೇವರು ಎಂದೆಂದಿಗೂ ನನಗೂ, ನಿನಗೂ, ನನ್ನ ಸಂತಾನಕ್ಕೂ, ನಿನ್ನ ಸಂತಾನಕ್ಕೂ ಸಾಕ್ಷಿಯಾಗಿರಲೆಂದು ಮಧ್ಯದಲ್ಲಿ ಯೆಹೋವ ದೇವರ ಹೆಸರಿನಿಂದ ಆಣೆಯಿಟ್ಟು ನಾವಿಬ್ಬರೂ ಪ್ರಮಾಣ ಮಾಡಿಕೊಂಡೆವಲ್ಲಾ,” ಎಂದನು. ಆಗ ದಾವೀದನು ಎದ್ದು ಹೋದನು. ಯೋನಾತಾನನು ಪಟ್ಟಣಕ್ಕೆ ಹೋದನು.


ಅರಸನು ಅವನಿಗೆ, “ಸಮಾಧಾನವಾಗಿ ಹೋಗು,” ಎಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು