Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಯೋಹಾನನು 1:2 - ಕನ್ನಡ ಸಮಕಾಲಿಕ ಅನುವಾದ

2 ಈ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು, ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆ ಜೀವ ಪ್ರತ್ಯಕ್ಷವಾಯಿತು. ಅದನ್ನು ನಾವು ನೋಡಿದ್ದೇವೆ. ಆ ಬಗ್ಗೆ ಸಾಕ್ಷಿ ಹೇಳುತ್ತೇವೆ. ಪಿತನ ಬಳಿಯಿದ್ದು ನಮಗೆ ಪ್ರತ್ಯಕ್ಷವಾದಂಥ ನಿತ್ಯಜೀವವನ್ನು ನಿಮಗೆ ಸಾರುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆ ಜೀವವು ಪ್ರತ್ಯಕ್ಷವಾಯಿತು; ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ಪ್ರಸಿದ್ಧಿಪಡಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆ ಜೀವವು ನಮಗೆ ಪ್ರತ್ಯಕ್ಷವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ಸಾಕ್ಷಿ ಹೇಳ ಬಲ್ಲೆವು. ನಾವೀಗ ನಿಮಗೆ ಆ ಜೀವದ ಬಗ್ಗೆ ಸಾಕ್ಷಿ ಹೇಳುತ್ತೇವೆ. ಅದು ತಂದೆಯಾದ ದೇವರ ಸಂಗಡವಿದ್ದ ನಿತ್ಯವಾದ ಜೀವ. ದೇವರು ಈ ಜೀವವನ್ನು ನಮಗೆ ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

2 ತೊ ಶಾಶ್ವತ್ ಜಿವ್ ಅಮ್ಕಾ ದಿಸ್ಲೊ. ದೆವ್ ಬಾಬಾಚ್ಯಾ ವಾಂಗ್ಡಾ ಹೊತ್ತ್ಯಾ ತ್ಯಾ ಜಿವಾಚ್ಯಾ ವಚನಾಕ್ ಅಮಿ ಬಗಟಲ್ಲ್ಯಾಸಾಟ್ನಿ, ತೆಚ್ಯಾ ವಿಶಯಾತ್ ಸಾಕ್ಷಿ ದಿತಾಂವ್ ಅನಿ ತುಮ್ಕಾ ಸಾಂಗ್ತಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಯೋಹಾನನು 1:2
37 ತಿಳಿವುಗಳ ಹೋಲಿಕೆ  

ದೇವರ ಪುತ್ರ ಆಗಿರುವ ಕ್ರಿಸ್ತ ಯೇಸುವು ಬಂದು, ಸತ್ಯವಾಗಿರುವ ದೇವರನ್ನು ನಾವು ಅರಿತುಕೊಳ್ಳುವ ಹಾಗೆ ಅವರು ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾರೆಂದೂ ನಾವು ಸತ್ಯವಾಗಿರುವ ದೇವರಲ್ಲಿ ಅವರ ಪುತ್ರ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವವರಾಗಿದ್ದೇವೆ ಎಂದೂ ನಮಗೆ ಗೊತ್ತಿದೆ. ಈ ಕ್ರಿಸ್ತ ಯೇಸುವೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾರೆ.


ಅವರಲ್ಲಿ ಜೀವವಿತ್ತು. ಆ ಜೀವವು ಮಾನವರಿಗೆ ಬೆಳಕಾಗಿತ್ತು.


ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”


ಏಕೈಕ ಸತ್ಯ ದೇವರಾಗಿರುವ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವ.


ಆ ಸಾಕ್ಷಿ ಯಾವುದೆಂದರೆ: ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾರೆ. ಈ ಜೀವವು ದೇವರ ಪುತ್ರ ಕ್ರಿಸ್ತ ಯೇಸುವಿನಲ್ಲಿ ಇದೆ ಎಂಬುದೇ.


ಪಾಪದಲ್ಲಿ ಮುಂದುವರೆಯುವವರು ಸೈತಾನನಿಗೆ ಸೇರಿದವರು. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ದೇವಪುತ್ರ ಯೇಸು ಸೈತಾನನ ಕೆಲಸಗಳನ್ನು ಲಯ ಮಾಡುವುದಕ್ಕೋಸ್ಕರವೇ ಪ್ರತ್ಯಕ್ಷರಾದರು.


ಸುಳ್ಳಾಡದ ದೇವರು, ಕಾಲಾರಂಭಕ್ಕೆ ಮುಂಚೆಯೇ ನಿತ್ಯಜೀವದ ನಿರೀಕ್ಷೆಯನ್ನು ವಾಗ್ದಾನಮಾಡಿದ್ದಾರೆ.


ಯೇಸು ಅವನಿಗೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರಲಾರರು.


ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾದರೆಂಬುದು ನಿಮಗೆ ಗೊತ್ತಾಗಿದೆ. ಕ್ರಿಸ್ತ ಯೇಸುವಿನಲ್ಲಿ ಪಾಪವಿಲ್ಲ.


ಆದರೆ ಈಗ ನಮಗೆ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಕೃಪೆ ಪ್ರಕಟವಾಯಿತು. ಕ್ರಿಸ್ತ ಯೇಸು ಮರಣವನ್ನು ನಾಶಮಾಡಿ, ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿಸಿದರು.


ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.


ನೀವು ಪ್ರಾರಂಭದಿಂದಲೂ ನನ್ನ ಸಂಗಡ ಇದ್ದುದರಿಂದ ನೀವು ಸಹ ನನಗೆ ಸಾಕ್ಷಿಗಳಾಗಿದ್ದೀರಿ.


ಜೀವದ ಒಡೆಯನನ್ನು ನೀವು ಕೊಂದಿರಿ. ದೇವರಾದರೋ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರು. ಇದಕ್ಕೆ ನಾವೇ ಸಾಕ್ಷಿಗಳು.


ಜೊತೆ ಹಿರಿಯನೂ ಕ್ರಿಸ್ತ ಯೇಸುವಿನ ಶ್ರಮೆಗಳ ಸಾಕ್ಷಿಯೂ ಪ್ರತ್ಯಕ್ಷವಾಗಲಿರುವ ಮಹಿಮೆಯಲ್ಲಿ ಪಾಲುಗಾರನೂ ಆಗಿರುವ ನಾನು ನಿಮ್ಮಲ್ಲಿರುವ ಹಿರಿಯರನ್ನು ಬೇಡಿಕೊಳ್ಳುವುದು.


ನಿಯಮವು ನಮ್ಮ ಮಾಂಸಭಾವದ ಬಲಹೀನತೆಯಿಂದ ಯಾವುದನ್ನು ಮಾಡಲಿಕ್ಕೆ ಸಾಧ್ಯವಾಗದೆ ಹೋಯಿತೋ ಅದನ್ನು ದೇವರೇ ಮಾಡಿದರು. ಪಾಪ ಪರಿಹಾರಕ್ಕಾಗಿ ದೇವರು ತಮ್ಮ ಸ್ವಂತ ಪುತ್ರನನ್ನು ಪಾಪಮಯವಾದ ನರಮಾಂಸದ ರೂಪದಲ್ಲಿ ಕಳುಹಿಸಿಕೊಟ್ಟರು. ಆ ನರಮಾಂಸದಲ್ಲಿಯೇ ಪಾಪಕ್ಕೆ ದಂಡನಾತೀರ್ಪು ಮಾಡಿ ಸಾಧ್ಯಗೊಳಿಸಿದರು.


ಯೇಸುವನ್ನು ಎಲ್ಲರೂ ನೋಡಲಿಲ್ಲ. ಆದರೆ ದೇವರು ಮೊದಲೇ ನೇಮಿಸಿಕೊಂಡ ಸಾಕ್ಷಿಗಳಾಗಿರುವ ನಮಗೆ ಕಾಣಿಸಿಕೊಂಡರು. ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದು ಬಂದ ತರುವಾಯ ಅವರೊಡನೆ ಊಟ, ಪಾನಮಾಡಿದ ನಮಗೆ ಕಾಣಿಸಿಕೊಂಡರು.


ಈ ಸಂಗತಿಗಳಿಗೆ ನಾವೇ ಸಾಕ್ಷಿಗಳು; ತನಗೆ ವಿಧೇಯರಾಗಿರುವವರಿಗೆ ದೇವರು ದಯಪಾಲಿಸಿದ ಪವಿತ್ರಾತ್ಮ ದೇವರು ಸಾಕ್ಷಿ,” ಎಂದರು.


ದೇವರು ಈ ಯೇಸುವನ್ನೇ ಮರಣದಿಂದ ಎಬ್ಬಿಸಿದರು. ಇದಕ್ಕೆ ನಾವೆಲ್ಲರೂ ಸಾಕ್ಷಿಗಳು.


ಅಂದರೆ, ಯೋಹಾನನಿಂದ ದೀಕ್ಷಾಸ್ನಾನ ಪಡೆದ ದಿನದಿಂದ, ಯೇಸು ಸ್ವರ್ಗಕ್ಕೆ ಏರಿಹೋದ ಕಾಲದವರೆಗೆ ನಮ್ಮ ಸಂಗಡ ಇದ್ದವನಾಗಿರಬೇಕು.” ಅವನು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಂದಿಗೆ ಸಾಕ್ಷಿಯಾಗಿರಬೇಕು.


ಯೇಸು ಸತ್ತವರೊಳಗಿಂದ ಎದ್ದ ಮೇಲೆ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.


ತಂದೆಯೇ, ಲೋಕವು ಉಂಟಾಗುವದಕ್ಕಿಂತ ಮುಂಚೆ ನಿಮ್ಮೊಡನೆ ನನಗಿದ್ದ ಮಹಿಮೆಯಿಂದ ಈಗ ನೀವು ನನ್ನನ್ನು ಮಹಿಮೆಪಡಿಸಿರಿ.


ನಾನು ತಂದೆಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ತಿರುಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತಿದ್ದೇನೆ,” ಎಂದರು.


ನಾನು ತಂದೆಯ ಬಳಿಯಲ್ಲಿ ಕಂಡದ್ದನ್ನೇ ಮಾತನಾಡುತ್ತೇನೆ. ನೀವಾದರೋ ನಿಮ್ಮ ತಂದೆಯಿಂದ ಕೇಳಿದ್ದನ್ನು ಮಾಡುತ್ತೀರಿ,” ಎಂದರು.


ನಾನಾದರೋ ಅವರನ್ನು ಅರಿತಿದ್ದೇನೆ. ಏಕೆಂದರೆ ನಾನು ಅವರ ಕಡೆಯಿಂದ ಬಂದವನು. ಅವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ,” ಎಂದು ಗಟ್ಟಿಯಾಗಿ ಕೂಗಿ ಹೇಳಿದರು.


ಪರಲೋಕದಿಂದ ಇಳಿದು ಬಂದ ಮನುಷ್ಯಪುತ್ರನಾದ ನನ್ನನ್ನು ಹೊರತು ಯಾರೂ ಪರಲೋಕಕ್ಕೆ ಏರಿ ಹೋದವರಿಲ್ಲ.


ದೇವರನ್ನು ಯಾರೂ ಎಂದೂ ಕಂಡಿಲ್ಲ; ತಂದೆ ದೇವರ ಹೃದಯಕ್ಕೆ ಹತ್ತಿರವಾಗಿರುವ ಏಕೈಕ ಪುತ್ರ ಆಗಿರುವವರೂ ಸ್ವತಃ ದೇವರೂ ಆಗಿರುವವರೂ ತಂದೆಯನ್ನು ಪ್ರಕಟಪಡಿಸಿದ್ದಾರೆ.


ಆದಿಯಿಂದ ಇರುವಂಥದ್ದೂ ಕೇಳಿದ್ದನ್ನೂ ಕಣ್ಣಾರೆ ಕಂಡು ನೋಡಿದ್ದನ್ನೂ ನಾವು ಕೈಯಿಂದ ಮುಟ್ಟಿದ್ದ ಆ ಜೀವವಾಕ್ಯವನ್ನೇ ಸಾರುತ್ತಿದ್ದೇವೆ.


ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದಿಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.


ಇದನ್ನು ಕಣ್ಣಾರೆ ಕಂಡವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವಾದದ್ದು, ನೀವು ಸಹ ನಂಬುವಂತೆ ತಾನು ಹೇಳಿರುವುದು ಸತ್ಯವೆಂದು ಅವನು ಬಲ್ಲನು.


ಇದೇ ಕ್ರಿಸ್ತ ಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವವಾಗಿರುತ್ತದೆ.


ನೀವು ದೇವರಾತ್ಮನನ್ನು ಹೀಗೆ ಗುರುತಿಸಬಹುದು: ಕ್ರಿಸ್ತ ಯೇಸು ನರಮಾಂಸರಾಗಿ ಬಂದರೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದು.


ತಂದೆಯು ಮಗನನ್ನು ಲೋಕ ರಕ್ಷಕರನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ನೋಡಿದ್ದೇವೆ ಮತ್ತು ಅದಕ್ಕೆ ನಾವು ಸಾಕ್ಷಿ ಹೇಳುತ್ತೇವೆ.


ದೇವಪುತ್ರ ಆಗಿರುವವರ ಹೆಸರಿನಲ್ಲಿ ನಂಬಿಕೆಯಿಡುವ ನಿಮಗೆ ನಿತ್ಯಜೀವವು ಉಂಟೆಂದು ನೀವು ತಿಳಿಯುವ ಹಾಗೆ ನಾನು ನಿಮಗೆ ಇವುಗಳನ್ನು ಬರೆದಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು