Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 2:8 - ಕನ್ನಡ ಸಮಕಾಲಿಕ ಅನುವಾದ

8 ಮತ್ತು, “ಜನರು ಎಡವಲು ಕಾರಣವಾಗುವ ಕಲ್ಲೂ ಅವರು ಬಿದ್ದುಹೋಗುವಂತೆ ಮಾಡುವ ಬಂಡೆಯೂ ಆಗಿರುತ್ತದೆ,” ಅವರು ವಾಕ್ಯಕ್ಕೆ ಅವಿಧೇಯರಾದ್ದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ, “ಅದು ಜನರು ಎಡವುವ ಕಲ್ಲು ಮುಗ್ಗರಿಸುವ ಬಂಡೆ.” ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 “ಜನರು ಎಡವಿಬೀಳುವ ಕಲ್ಲಿದು; ಅವರು ಮುಗ್ಗರಿಸಿ ಬೀಳುವ ಬಂಡೆಯಿದು.” ವಿಶ್ವಾಸವಿಡದವರಿಗಾದರೋ ಮೇಲಿನ ವಾಕ್ಯಗಳು ಅನ್ವಯಿಸುತ್ತವೆ. ಜನರು ದೇವರ ವಾಕ್ಯದಲ್ಲಿ ವಿಶ್ವಾಸವಿಡದಿರುವುದರಿಂದಲೇ ಎಡವಿಬೀಳುತ್ತಾರೆ. ಅವರ ಬಗ್ಗೆ ದೈವಸಂಕಲ್ಪವೂ ಇದೇ ಆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅದು ಎಡವುವ ಕಲ್ಲು ಮುಗ್ಗರಿಸುವ ಬಂಡೆ ಎಂತಲೂ ಬರೆದಿರುವ ಮಾತು ಸರಿಬೀಳುತ್ತದೆ. ಅವರು ದೇವರ ವಾಕ್ಯವನ್ನು ನಂಬಲೊಲ್ಲದೆ ಇರುವದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ; ಅದಕ್ಕಾಗಿಯೇ ಅವರು ನೇಮಕವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಂಬದಿರುವ ಜನರಿಗೆ ಆತನು: “ಜನರನ್ನು ಮುಗ್ಗರಿಸುವ ಕಲ್ಲೂ ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.” ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

8 ಅನಿ ಎಕ್ ಕಡೆ ಪವಿತ್ರ್ ಪುಸ್ತಕ್ ಮನ್ತಾ; ಲೊಕಾಕ್ನಿ ಆಡ್ಕಳ್ತಲೊ ಗುಂಡೊ ಹ್ಯೊ ಲೊಕಾ ಆದ್ಳುನ್ ಪಡಿಸಾರ್ಕೆ ಕರ್ತಾ ತೆನಿ ದೆವಾಚಿ ಇಚ್ಚ್ಯಾ ಕಾಯ್ ಮನ್ತಲ್ಲ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಕರಿನಾತ್ ತಸೆ ಮನುನ್ ತೆನಿ ಅದಳ್ತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 2:8
16 ತಿಳಿವುಗಳ ಹೋಲಿಕೆ  

ಅವರೇ ನಿಮಗೆ ಪರಿಶುದ್ಧ ಸ್ಥಳವಾಗಿರುವರು. ಆದರೆ ಇಸ್ರಾಯೇಲ್ ಮತ್ತು ಯಹೂದ ಎರಡು ಮನೆಗಳಿಗೆ ಎಡವುವ ಕಲ್ಲೂ, ಮುಗ್ಗರಿಸುವ ಬಂಡೆಯೂ, ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಬೋನೂ ಆಗಿರುವರು.


ನಾವಾದರೋ ಶಿಲುಬೆಗೆ ಹಾಕಲಾದ ಕ್ರಿಸ್ತ ಯೇಸುವನ್ನೇ ಪ್ರಸಂಗಿಸುತ್ತಿದ್ದೇವೆ. ಇದು ಯೆಹೂದ್ಯರಿಗೆ ವಿಘ್ನವೂ ಯೆಹೂದ್ಯರಲ್ಲದವರಿಗೆ ಬುದ್ದಿಹೀನತೆಯಾಗಿದೆ.


ಈಗ ನಂಬುವವರಾದ ನಿಮಗೆ ಈ ಕಲ್ಲು ಅಮೂಲ್ಯವಾದುದು. ನಂಬದವರಿಗಾದರೋ, “ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,”


ನಾಶಕ್ಕೂ, ಕೋಪಾಗ್ನಿಗೂ ಪಾತ್ರೆಯಾಗಿರುವುದರ ಮೇಲೆ ದೇವರು ತಮ್ಮ ಕೋಪವನ್ನು ತೋರಿಸಿ ತಮ್ಮ ಸಾಮರ್ಥ್ಯವನ್ನು ತಿಳಿಯಪಡಿಸಬೇಕೆಂದಿದ್ದರೂ ಬಹು ಸಹನೆಯಿಂದ ತಾಳಿಕೊಂಡಿರಲು ಬಯಸಿದರೆ, ಯಾರು ಏನು ಮಾಡಬಹುದು?


ಏಕೆಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆಪಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡೆಸುವವರೂ ನಮ್ಮ ಒಬ್ಬರೇ ಕರ್ತ ಆಗಿರುವ ದೇವರನ್ನು ಮತ್ತು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಲ್ಲಗಳೆಯುವ ಕೆಲವು ಜನರೂ ರಹಸ್ಯವಾಗಿ ಸಭೆಯೊಳಗೆ ಹೊಕ್ಕಿದ್ದಾರೆ. ಇವರು ದಂಡನೆಗೋಸ್ಕರ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ.


ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತುಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸಬೇಕೆಂದಿರುವರು. ಅಂಥವರಿಗೆ ಬಹುಕಾಲದ ಹಿಂದೆಯೇ ದೇವರ ತೀರ್ಪು ಸಿದ್ಧಪಡಿಸಲಾಗಿದೆ. ಅವರಿಗಾಗುವ ವಿನಾಶವು ತೂಕಡಿಸುವುದಿಲ್ಲ.


ಏಕೆಂದರೆ ದೇವರು ನಮ್ಮನ್ನು ಕೋಪಾಗ್ನಿಗೆ ನೇಮಿಸದೆ ನಾವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿ ರಕ್ಷಣೆಯನ್ನು ಹೊಂದಬೇಕೆಂದೇ ನೇಮಿಸಿದರು.


ಅನಂತರ ಸಿಮೆಯೋನನು ಅವರನ್ನು ಆಶೀರ್ವದಿಸಿ, ಶಿಶುವಿನ ತಾಯಿ ಮರಿಯಳಿಗೆ, “ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಈ ಮಗು ನೇಮಕವಾಗಿದೆ, ಜನರು ಎದುರು ಮಾತನಾಡುವುದಕ್ಕೆ ಈ ಮಗು ಗುರುತಾಗಿರುವದು.


ಕೆಲವರಿಗೆ ನಾವು ಮರಣದ ವಾಸನೆಯಾಗಿದ್ದೇವೆ. ಇತರರಿಗೆ ಜೀವವನ್ನು ಹುಟ್ಟಿಸುವ ವಾಸನೆಯಾಗಿರುತ್ತೇವೆ. ಇಂಥ ಸೇವೆಗೆ ಸಮರ್ಥರು ಯಾರು?


ಆದರೆ ನಿಶ್ಚಯವಾಗಿ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ.


ನಂತರ ಹೀಗೆ ಹೇಳಲಾಗುವುದು: ಮಣ್ಣು ಹಾಕಿರಿ, ಹಾಕಿರಿ, ಮಾರ್ಗವನ್ನು ಸರಿಮಾಡಿರಿ, ನನ್ನ ಜನರ ದಾರಿಯೊಳಗಿಂದ ಆತಂಕವನ್ನು ಎತ್ತಿ ಹಾಕಿರಿ,


“ಹೀಗಾಗಬೇಕೆಂದು ಬಹಳ ದಿನಗಳ ಹಿಂದೆಯೇ ನಿರ್ಣಯಿಸಿದ್ದನ್ನು ನೀನು ಕೇಳಲಿಲ್ಲವೋ? ಪುರಾತನ ದಿನಗಳಲ್ಲಿ ನಾನು ಯೋಚಿಸಿದ್ದನ್ನು, ಈಗ ನಾನು ಅದನ್ನು ನೆರವೇರಿಸಿದ್ದೇನೆ. ಆದ್ದರಿಂದಲೇ ನೀನು ಕೋಟೆಗಳುಳ್ಳ ಪಟ್ಟಣಗಳನ್ನು ಹಾಳಾದ ದಿಬ್ಬಗಳಾಗಿ ಮಾಡಿಬಿಟ್ಟಿರುವೆ


ಆದರೆ ಪ್ರಿಯರೇ, ನಾನು ಸುನ್ನತಿಯಾಗಬೇಕೆಂದು ಇನ್ನೂ ಬೋಧಿಸುವವನಾಗಿದ್ದರೆ, ಈಗಲೂ ನನಗೆ ಹಿಂಸೆಯಾಗುತ್ತಿರುವುದು ಏಕೆ? ಹಾಗಾದರೆ ಶಿಲುಬೆಯ ಸಂದೇಶ ಸಾರುವುದರಿಂದ ಯಾವ ಆತಂಕವೂ ಉಂಟಾಗುತ್ತಿರಲಿಲ್ಲವಲ್ಲಾ?


ಪವಿತ್ರ ವೇದವು ಹೇಳುವುದೇನೆಂದರೆ: “ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ. ಅದು ಆರಿಸಿಕೊಂಡದ್ದು, ಅಮೂಲ್ಯವಾದದ್ದು. ದೇವರ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”


ನನಗೆ ನೇಮಿಸಿದ್ದನ್ನು ದೇವರು ಈಡೇರಿಸುತ್ತಾರೆ. ಇಂಥ ಅನೇಕ ಯೋಜನೆಗಳು ದೇವರಲ್ಲಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು