28 ಇದಲ್ಲದೆ ಅವರಲ್ಲಿ ಕೆಲವರು ಪೂಜಾ ಸಾಮಗ್ರಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವುಗಳನ್ನು ಕೊಡುವಾಗಲೂ ತಿರುಗಿ ತೆಗೆದುಕೊಳ್ಳುವಾಗಲೂ ಲೆಕ್ಕವಿರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ, ಲೇವಿಯರಿಗೋಸ್ಕರವೂ ಮೋಶೆಯ ನಿಯಮದಲ್ಲಿ ನೇಮಕವಾದ ಪ್ರಕಾರ, ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ, ಬೊಕ್ಕಸಗಳನ್ನೂ, ಕಾಣಿಕೆಗಳನ್ನೂ, ಪ್ರಥಮ ಫಲಗಳನ್ನೂ, ಹತ್ತನೆಯ ಪಾಲುಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. ಏಕೆಂದರೆ ಸೇವೆಮಾಡುತ್ತಿದ್ದ ಯಾಜಕರನ್ನೂ, ಲೇವಿಯರನ್ನೂ ಕುರಿತು ಯೆಹೂದದವರು ಬಹು ಸಂತೋಷಪಟ್ಟರು.
ಅವರಲ್ಲಿ ಕೆಲವರು ಸಲಕರಣೆಗಳನ್ನೂ, ಪರಿಶುದ್ಧ ಸ್ಥಾನದಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ, ನಯವಾದ ಹಿಟ್ಟನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಸಾಂಬ್ರಾಣಿಯನ್ನೂ, ಸುಗಂಧಗಳನ್ನೂ ಕಾಯಲು ನೇಮಕರಾಗಿದ್ದರು.
“ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವ ಸೇವೆಯ ಎಲ್ಲಾ ಸಲಕರಣೆಗಳನ್ನು ಅವರು ತೆಗೆದುಕೊಂಡು ನೀಲಿ ವಸ್ತ್ರದಿಂದ ಕಟ್ಟಿ, ಕಡಲುಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ, ಅಡ್ಡ ದಂಡಕ್ಕೆ ಕಟ್ಟಬೇಕು.