Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:23 - ಕನ್ನಡ ಸಮಕಾಲಿಕ ಅನುವಾದ

23 ಹೀಗೆಯೇ ಅವರಿಗೂ, ಅವರ ಮಕ್ಕಳಿಗೂ ಯೆಹೋವ ದೇವರ ಮನೆಯ ಬಾಗಿಲು ಕಾವಲಿತ್ತು. ಅದು ದೇವದರ್ಶನ ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರರಿಂದ ಕಾಯಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅವರೂ ಅವರ ಮಕ್ಕಳೂ ಯೆಹೋವನ ಆಲಯದ, ಗುಡಾರದ ಬಾಗಿಲುಗಳನ್ನು ಕಾಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅವರ ವಂಶಜರು ದೇವಾಲಯದ ದ್ವಾರಪಾಲಕರಾಗಿ ಸೇವೆ ಮುಂದುವರೆಸಿಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅವರೂ ಅವರ ಮಕ್ಕಳೂ ಯೆಹೋವನ ಮಂದಿರದ ಅಂದರೆ ಗುಡಾರದ ಬಾಗಲುಗಳನ್ನು ಕಾಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಅವರೂ ಅವರ ಸಂತತಿಯವರೂ ದೇವದರ್ಶನಗುಡಾರದ ದ್ವಾರಪಾಲರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:23
9 ತಿಳಿವುಗಳ ಹೋಲಿಕೆ  

ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆಗೋಸ್ಕರವೂ ಅದರಲ್ಲಿ ಮಾಡುವಂತಹ ಎಲ್ಲವುಗಳಿಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿಕೊಳ್ಳುವವರನ್ನಾಗಿ ಮಾಡುವೆನು.


ಇದಲ್ಲದೆ ದಾವೀದನೂ, ಅವನ ಮಗನಾದ ಸೊಲೊಮೋನನೂ ಕೊಟ್ಟ ಆಜ್ಞೆಯ ಪ್ರಕಾರ ಹಾಡುಗಾರರೂ, ದ್ವಾರಪಾಲಕರೂ ತಮ್ಮ ದೇವರ ಕಾವಲನ್ನೂ, ಶುದ್ಧೀಕರಣದ ಕಾವಲನ್ನೂ ಕಾಯುತ್ತಿದ್ದರು.


ಯೆಹೋವ ದೇವರ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಿಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿದನು.


ಯೆಹೋವ ದೇವರ ಮನೆಯ ಸೇವೆಯಲ್ಲಿ ದೇವದರ್ಶನ ಗುಡಾರದ ಕಾವಲನ್ನೂ, ಪರಿಶುದ್ಧ ಸ್ಥಾನದ ಕಾವಲನ್ನೂ, ತಮ್ಮ ಸಹೋದರರಾದ ಆರೋನನ ಪುತ್ರರ ಆಜ್ಞೆಯನ್ನೂ ಕೈಗೊಳ್ಳುವುದು ಅವರಿಗೆ ನೇಮಕವಾಗಿತ್ತು.


ಬಾಗಿಲುಗಳಲ್ಲಿ ದ್ವಾರಪಾಲಕರಾಗಿರಲು ಆಯ್ಕೆಯಾದ ಇವರೆಲ್ಲರು 212 ಮಂದಿಯಾಗಿದ್ದರು. ಇವರು ಹೆಸರುಗಳು ಅವರವರ ಗ್ರಾಮಗಳಲ್ಲಿ ಅವರ ವಂಶಾವಳಿಯ ಪ್ರಕಾರ ಲಿಖಿತವಾಗಿದ್ದವು. ಇವರು ನಂಬಿಗಸ್ತರಾದ್ದರಿಂದ ದಾವೀದನೂ, ದರ್ಶಿಯಾದ ಸಮುಯೇಲನೂ ಇವರನ್ನು ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸಿದರು.


ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು.


ಅವನು ನನಗೆ ಹೇಳಿದ್ದೇನೆಂದರೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ದೇವಾಲಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು.


ಇದರಲ್ಲಿ ದ್ವಾರಪಾಲಕರ ವರ್ಗಗಳು ಯೆಹೋವ ದೇವರ ಆಲಯದಲ್ಲಿ ಸೇವೆ ಮಾಡುವುದಕ್ಕೆ ವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲಾಗಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು