Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:2 - ಕನ್ನಡ ಸಮಕಾಲಿಕ ಅನುವಾದ

2 ತಮ್ಮ ಸ್ವಾಸ್ತ್ಯಗಳಲ್ಲಿ, ತಮ್ಮ ಪಟ್ಟಣಗಳಲ್ಲಿ ಮೊದಲು ವಾಸವಾಗಿದ್ದವರಲ್ಲಿ ಕೆಲವರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ ಮತ್ತು ದೇವಾಲಯದ ಸೇವಕರೂ ಆಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆಗ ಅವರ ಪಟ್ಟಣಗಳನ್ನೂ, ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು ಲೇವಿಯರು ಮತ್ತು ದೇವಾಲಯದ ಸೇವಕರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಪಟ್ಟಣಗಳಲ್ಲಿದ್ದ ತಮ್ಮ ಸೊತ್ತುಗಳಿಗೆ ಹಿಂದಿರುಗಿ ಬಂದವರಲ್ಲಿ ಇಸ್ರಯೇಲಿನ ಜನಸಾಮಾನ್ಯರೂ ಯಾಜಕರೂ ಲೇವಿಯರೂ ದೇವಾಲಯದ ಕೆಲಸದವರೂ ಸೇರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆಗ ಅವರ ಪಟ್ಟಣಗಳನ್ನೂ ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು, ಲೇವಿಯರು, ದೇವಸ್ಥಾನದಾಸರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಲ್ಲಿಂದ ಹಿಂತಿರುಗಿಬಂದು ತಮ್ಮ ಸ್ವನಾಡಿನಲ್ಲಿ ನೆಲೆಸಿದವರಲ್ಲಿ ಮೊದಲನೆಯವರು ಯಾರೆಂದರೆ: ಕೆಲವು ಇಸ್ರೇಲರು, ಯಾಜಕರು, ಲೇವಿಯರು ಮತ್ತು ದೇವಾಲಯದ ಸೇವಕರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:2
11 ತಿಳಿವುಗಳ ಹೋಲಿಕೆ  

ಹೀಗೆಯೇ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ಸಾಮಾನ್ಯ ಜನರೂ, ದೇವಾಲಯದ ಸೇವಕರೂ, ಸಮಸ್ತ ಇಸ್ರಾಯೇಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಏಳನೆಯ ತಿಂಗಳು ಬಂದಾಗ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.


ದಾವೀದನೂ, ಪ್ರಧಾನರೂ, ಲೇವಿಯರನ್ನು ಸೇವಿಸುವುದಕ್ಕೆ ನೇಮಿಸಿದ ದೇವಾಲಯದ ಸೇವಕರಲ್ಲಿ ಇನ್ನೂರ ಇಪ್ಪತ್ತು ಮಂದಿ ಸೇವಕರನ್ನೂ, ನಮ್ಮ ಬಳಿಗೆ ಕರೆದುಕೊಂಡು ಬಂದರು. ಅವರೆಲ್ಲರ ಹೆಸರುಗಳು ದಾಖಲೆಯಾಗಿದ್ದವು.


ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.


ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.


ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್ ಇವರ ವಂಶಜರು.


ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.


ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ


ತಮ್ಮ ಸಹೋದರರಾದ ತಮ್ಮ ಶ್ರೇಷ್ಠರ ಸಂಗಡ ಕೂಡಿಕೊಂಡು ದೇವರ ಸೇವಕ ಮೋಶೆಯ ಕೈಯಿಂದ ಕೊಟ್ಟ ದೇವರ ನಿಯಮದಂತೆ ನಡೆಯುತ್ತೇವೆಂದೂ, ನಮ್ಮ ಕರ್ತ ಆಗಿರುವ ಯೆಹೋವ ದೇವರ ಆಜ್ಞೆಗಳನ್ನೂ, ಅವರ ನ್ಯಾಯಗಳನ್ನೂ, ಅವರ ಕಟ್ಟಳೆಗಳನ್ನೂ, ಎಲ್ಲವನ್ನೂ ಕೈಗೊಂಡು ಮಾಡುತ್ತೇವೆಂದೂ ಆಣೆ ಇಟ್ಟು ಹೀಗೆ ಪ್ರಮಾಣ ಮಾಡಿದರು;


ಈಗ ಜನರ ನಾಯಕರು ಯೆರೂಸಲೇಮಿನಲ್ಲಿ ನೆಲೆಸಿದರು. ಉಳಿದ ಜನರೊಳಗೆ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿ ಇದ್ದುಕೊಂಡು, ಹತ್ತರಲ್ಲೊಬ್ಬರು ಪವಿತ್ರ ನಗರವಾದ ಯೆರೂಸಲೇಮಿನಲ್ಲಿ ಬಂದು ವಾಸಿಸಲು ಚೀಟುಹಾಕಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು