Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:14 - ಕನ್ನಡ ಸಮಕಾಲಿಕ ಅನುವಾದ

14 ಲೇವಿಯರಲ್ಲಿ ಯಾರೆಂದರೆ: ಮೆರಾರೀಯ ಪುತ್ರರಲ್ಲಿ ಒಬ್ಬನಾದ ಹಷ್ಷೂಬನ ಮಗ ಅಜ್ರೀಕಾಮನ ಮಗ ಹಷಬ್ಯನ ಮಗ ಶೆಮಾಯನೂ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಲೇವಿಯರಲ್ಲಿ ಹಷಬ್ಯನ ಮಗನೂ, ಅಜ್ರೀಕಾಮನ ಮೊಮ್ಮಗನೂ, ಹಷಬ್ಯನ ಮರಿಮಗನೂ, ಮೆರಾರೀ ಗೋತ್ರದವನೂ ಆದ ಶೆಮಾಯ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14-16 ಜೆರುಸಲೇಮಿನಲ್ಲಿ ನೆಲೆಸಿದ ಲೇವಿಯರು: ಹಷಬ್ಯನ ಮಗ ಶೆಮಾಯ; ಇವನ ಪೂರ್ವಜರಲ್ಲಿ ಅಜ್ರೀಕಾಮ, ಹಷಬ್ಯ ಹಾಗು ಮೆರಾರೀ ಗೋತ್ರದ ಬಕ್ಬಕ್ಕರ್, ಹೆರೆಷ್, ಗಾಲಾಲ್ ಎಂಬವರಿದ್ದರು. ಶೆಮಾಯನ ಮಗ ಓಬದ್ಯ: ಇವನ ಪೂರ್ವಜರಲ್ಲಿ ಗಾಲಾಲ, ಯದೂತೂನ ಎಂಬವರಿದ್ದರು. ಮೀಕನ ಮಗ ಮತ್ತನ್ಯ: ಇವನ ಪೂರ್ವಜರಲ್ಲಿ ಜಿಕ್ರೀ, ಆಸಾಫ ಎಂಬವರಿದ್ದರು. ಆಸನ ಮಗನೂ ಎಲ್ಕಾನನ ಮೊಮ್ಮಗನೂ ಆದ ಬೆರೆಕ್ಯ; ನಟೋಫಾತ್ಯರ ಗ್ರಾಮಗಳಲ್ಲಿ ಇವನು ನೆಲೆಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಲೇವಿಯರಲ್ಲಿ ಹಷ್ಷೂಬನ ಮಗನೂ ಅಜ್ರೀಕಾಮನ ಮೊಮ್ಮಗನೂ ಹಷಬ್ಯನ ಮರಿಮಗನೂ ಮೆರಾರೀಗೋತ್ರದವನೂ ಆದ ಶೆಮಾಯ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಜೆರುಸಲೇಮಿನಲ್ಲಿ ವಾಸಿಸಿದ ಲೇವಿ ಕುಲದ ಜನರು ಯಾರೆಂದರೆ: ಹಷ್ಷೂಬನ ಮಗನಾದ ಶೆಮಾಯ. ಹಷ್ಷೂಬನು ಅಜ್ರೀಕಾಮನ ಮಗ. ಅಜ್ರೀಕಾಮನು ಹಷಬ್ಯನ ಮಗ. ಹಷಬ್ಯನು ಮೆರಾರೀಯ ಸಂತತಿಯವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:14
13 ತಿಳಿವುಗಳ ಹೋಲಿಕೆ  

ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.


ಮೆರಾರೀಯ ಪುತ್ರರಿಗೂ ಅವರ ಕುಟುಂಬಗಳ ಪ್ರಕಾರ ಚೀಟುಹಾಕಿ, ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬುಲೂನನ ಗೋತ್ರದಿಂದಲೂ ಹನ್ನೆರಡು ಪಟ್ಟಣಗಳು ದೊರಕಿದ್ದವು.


ಮೆರಾರೀಯ ವಂಶಜರು: ಮಹ್ಲೀ, ಅವನ ಮಗ ಲಿಬ್ನೀ, ಅವನ ಮಗ ಶಿಮ್ಮಿ; ಅವನ ಮಗ ಉಜ್ಜ,


ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರವಾಗಿ:


ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರು ಇವರೇ. ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೊಹಾತನಿಂದ ಕೊಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.


ಅವರ ಸಹೋದರರೂ ತಮ್ಮ ಕುಟುಂಬಗಳಲ್ಲಿ ಯಜಮಾನರು 1,760 ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿಗಳಾಗಿದ್ದರು.


ಬಕ್ಬಕ್ಕರನೂ, ಹೆರೆಷನೂ, ಗಲಾಲನೂ, ಆಸಾಫನ ಮಗ, ಜಿಕ್ರಿಯ ಮಗ, ಮೀಕನ ಮಗ ಮತ್ತನ್ಯನೂ;


ಹದಿನೆಂಟನೆಯದು ಹನಾನೀಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.


ದ್ವಾರಪಾಲಕರ ವರ್ಗಗಳು: ಕೋರಹಿಯರೊಳಗೆ: ಆಸಾಫನ ಪುತ್ರರಲ್ಲಿ ಒಬ್ಬನಾಗಿರುವ ಕೋರೆಯ ಮಗನಾದ ಮೆಷೆಲೆಮ್ಯನು.


ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.


ಎಲ್ಯಾಷೀಬನ ಮಗನಾದ ಯೋಹಾನಾನನ ಕಾಲದವರೆಗೆ ಲೇವಿ ಎಂಬವನ ಪುತ್ರರಾದ ಪಿತೃಗಳ ಮುಖ್ಯಸ್ಥರು ಇತಿಹಾಸ ಗ್ರಂಥದಲ್ಲಿ ಬರೆದಿರುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು