Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 8:6 - ಕನ್ನಡ ಸಮಕಾಲಿಕ ಅನುವಾದ

6 ಏಹೂದನ ಪುತ್ರರು: ನಾಮಾನನು, ಅಹೀಯನು, ಗೇರನು. ಇವರೇ ಗಿಬೆಯ ನಿವಾಸಿಗಳ ಕುಟುಂಬಗಳಲ್ಲಿ ಯಜಮಾನರಾಗಿದ್ದರು. ಆದರೆ ಅವರನ್ನು ಮಾನಹತಿಗೆ ತೆಗೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಏಹೂದನ ಸಂತಾನದವರು ಗೆಬ ಊರಿನ ಎಲ್ಲಾ ಕುಟುಂಬಗಳಲ್ಲಿ ಪ್ರಮುಖರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6-7 ಏಹೂದನ ಸಂತಾನದವರು - ನಾಮಾನ್, ಅಹೀಯ, ಗೇರ ಎಂಬವರು. ಅವರು ಗೇಬದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು. ಆದರೆ ಅವರು ಹೊರಗೆ ಹೋಗುವಂತೆ ಒತ್ತಾಯಿಸಲ್ಪಟ್ಟಾಗ ಮಾನಹತಿಯಲ್ಲಿ ವಾಸಿಸಲು ಹೋದರು. ಹೀಗೆ ಹೊರಡುವಾಗ ಉಚ್ಚ ಮತ್ತು ಅಹೀಹೂದನ ತಂದೆ ಗೇರ ಮುಂದಾಳಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಏಹೂದನ ಸಂತಾನದವರು. (ಗೆಬ ಊರಿನ ಎಲ್ಲಾ ಕುಟುಂಬಗಳಲ್ಲಿ ಪ್ರಮುಖರಾದ ಏಹೂದನ ಸಂತಾನದವರೂ ನಾಮಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6-7 ಇವರು ಏಹೂದನ ಸಂತತಿಯವರು. ಇವರು ಗೆಬ ಗೋತ್ರಗಳ ನಾಯಕರುಗಳಾಗಿದ್ದರು. ಇವರನ್ನು ಇವರ ಮನೆಗಳಿಂದ ಬಲವಂತದಿಂದ ಹೊರಡಿಸಿ ಮಾನಹತಿಗೆ ಕಳುಹಿಸಲಾಯಿತು. ಏಹೂದನ ಸಂತತಿಯವರು ಯಾರೆಂದರೆ: ನಾಮಾನ್, ಅಹೀಯ ಮತ್ತು ಗೇರ. ಗೇರನು ಉಚ್ಚನ ಮತ್ತು ಅಹೀಹುದನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 8:6
11 ತಿಳಿವುಗಳ ಹೋಲಿಕೆ  

ಸಲ್ಮನ ವಂಶಜರು: ಬೇತ್ಲೆಹೇಮ್, ನೆಟೋಫಾ, ಅಟರೋತ್ ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಉತ್ಪತ್ತಿಯಾದರು.


ಯೆದೀಯಯೇಲನ ಪುತ್ರನು ಬಿಲ್ಹಾನ್. ಬಿಲ್ಹಾನನ ಪುತ್ರರು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್ ಮತ್ತು ಅಹೀಷೆಹರ;


ಬೆನ್ಯಾಮೀನನ ಗೋತ್ರದಿಂದ ಕೊಟ್ಟವುಗಳು, ಗಿಬ್ಯೋನ್, ಗೆಬಾ, ಆಲೆಮೆತೂ, ಅನಾತೋತೂ, ಅದರ ಗೋಮಾಳುಗಳು. ಇವರ ಕುಟುಂಬಗಳಿಗೆ ದೊರಕಿದ ಎಲ್ಲಾ ಪಟ್ಟಣಗಳು ಹದಿಮೂರು.


ಕಿರ್ಯತ್ ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹಾರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ,


ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನ ಪುತ್ರರು: ಚೊಚ್ಚಲ ಮಗ ರಾಮ ಮತ್ತು ಬೂನ, ಓರೆನ, ಓಚೆಮ, ಅಹೀಯ.


ಏಹೂದನು ಮರಣಹೊಂದಿದನಂತರ ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು.


ಬೆನ್ಯಾಮೀನನ ಪುತ್ರರು: ಬೆಳ, ಬೆಕೆರ್, ಅಷ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್ ಎಂಬುವರು.


ನಾಮಾನ್, ಅಹೀಯ, ಗೇರನನ್ನು ತೆಗೆದುಕೊಂಡು ಹೋದ ತರುವಾಯ, ಉಜ್ಜನನ್ನೂ, ಅಹೀಹೂದನನ್ನೂ ಪಡೆದನು.


ಇದಲ್ಲದೆ ಬೆನ್ಯಾಮೀನನ ಗೋತ್ರದಲ್ಲಿ ಗಿಬ್ಯೋನನ್ನೂ ಗೆಬಾನನ್ನೂ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು