Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 8:34 - ಕನ್ನಡ ಸಮಕಾಲಿಕ ಅನುವಾದ

34 ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಯೋನಾತಾನನು ಮೆರೀಬ್ಬಾಳನನ್ನು ಪಡೆದನು; ಮೆರೀಬ್ಬಾಳನು ಮೀಕನನ್ನು ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಯೋನಾತಾನ್ ಮೆರೀಬ್ಬಾಳನ ತಂದೆ. ಇವನು ಮೀಕನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಯೋನಾತಾನನು ಮೆರೀಬ್ಬಾಳನನ್ನು ಪಡೆದನು; ಮೆರೀಬ್ಬಾಳನು ಮೀಕನನ್ನು ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಯೋನಾತಾನನ ಮಗ ಮೆರೀಬ್ಬಾಳ್. ಮೆರೀಬ್ಬಾಳನು ಮೀಕನ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 8:34
8 ತಿಳಿವುಗಳ ಹೋಲಿಕೆ  

ಮೆಫೀಬೋಶೆತನಿಗೆ ಮೀಕನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾಗಿದ್ದ ಸಮಸ್ತರೂ ಮೆಫೀಬೋಶೆತನಿಗೆ ದಾಸರಾಗಿದ್ದರು.


ಸೌಲನ ಮಗ ಯೋನಾತಾನನಿಗೆ ಕಾಲು ಕುಂಟಾದ ಒಬ್ಬ ಮಗನಿದ್ದನು. ಸೌಲನೂ, ಯೋನಾತಾನನೂ ಮರಣ ಹೊಂದಿದರೆಂಬ ವರ್ತಮಾನ ಇಜ್ರೆಯೇಲ್ ಎಂಬ ಪಟ್ಟಣದಿಂದ ಬಂದಾಗ, ಅವನು ಐದು ವರ್ಷದವನಾಗಿದ್ದನು. ಆಗ ಅವನ ದಾದಿಯು ಅವನನ್ನು ಎತ್ತಿಕೊಂಡು ಓಡಿ ಹೋದಳು. ಅವಳು ತ್ವರೆಯಾಗಿ ಓಡಿದಾಗ, ಅವನು ಬಿದ್ದು ಕುಂಟನಾದನು. ಅವನ ಹೆಸರು ಮೆಫೀಬೋಶೆತನು.


ಆದ್ದರಿಂದ ನೀನೂ, ನಿನ್ನ ಪುತ್ರರೂ, ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ, ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ, ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮೊಮ್ಮಗ ಮೆಫೀಬೋಶೆತನು ನಿತ್ಯವೂ ನನ್ನ ಮೇಜಿನಲ್ಲಿ ಊಟಮಾಡುವನು,” ಎಂದನು. ಈ ಚೀಬನಿಗೆ ಹದಿನೈದು ಮಂದಿ ಪುತ್ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.


ಸೌಲನ ಮಗನಾಗಿರುವ ಯೋನಾತಾನನ ಮಗ ಮೆಫೀಬೋಶೆತನು ದಾವೀದನ ಬಳಿಗೆ ಬಂದಾಗ, ಮೋರೆ ಕೆಳಗಾಗಿ ಬಿದ್ದು ವಂದಿಸಿದನು. ದಾವೀದನು, “ಮೆಫೀಬೋಶೆತನೇ,” ಎಂದನು. ಅವನು, “ಇಗೋ, ನಿನ್ನ ದಾಸನು,” ಎಂದನು.


ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.


ಮೀಕನ ಪುತ್ರರು: ಪಿತೋನನು, ಮೇಲಕನು, ತರೇಯನು ಮತ್ತು ಆಹಾಜನು.


ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು