Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 7:40 - ಕನ್ನಡ ಸಮಕಾಲಿಕ ಅನುವಾದ

40 ಇವರೆಲ್ಲರು ಆಶೇರನ ಮಕ್ಕಳಾಗಿದ್ದು, ತಮ್ಮ ತಂದೆಯ ಕುಟುಂಬದಲ್ಲಿ ಯಜಮಾನರಾಗಿಯೂ, ಯುದ್ಧ ಪರಾಕ್ರಮಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ, ಪ್ರಭುಗಳಲ್ಲಿ ಶ್ರೇಷ್ಠರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ದಾಖಲಿಸಿದ ಲೆಕ್ಕದ ಪ್ರಕಾರ ಯುದ್ಧಕ್ಕೆ ಸಿದ್ಧವಿರುವ 26,000 ಮಂದಿ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಇವರೆಲ್ಲರು ಆಶೇರ್ಯರಲ್ಲಿ ಗೋತ್ರಪ್ರಧಾನರೂ, ಯುದ್ಧಪ್ರವೀಣರಾದ ರಣವೀರರೂ ಮತ್ತು ಶ್ರೇಷ್ಠ ನಾಯಕರೂ ಆಗಿದ್ದರು. ಇವರ ವಂಶಾವಳಿಯ ಪಟ್ಟಿಯ ಪ್ರಕಾರ ಯುದ್ಧ ಪ್ರವೀಣರಾದ ಭಟರ ಸಂಖ್ಯೆ ಇಪ್ಪತ್ತಾರು ಸಾವಿರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಇವರೆಲ್ಲರೂ ಆಶೇರನ ವಂಶಜರು. ಇವರು ಕುಟುಂಬಗಳ ಮುಖ್ಯಸ್ಥರೂ ಯುದ್ಧವೀರರೂ ಶ್ರೇಷ್ಠನಾಯಕರೂ ಆಗಿದ್ದರು. ಆಶೇರನ ವಂಶಜರಲ್ಲಿ - 26,000 ಪುರುಷರು ಸೈನ್ಯದಲ್ಲಿ ಇರಲು ಅರ್ಹತೆ ಪಡೆದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಇವರೆಲ್ಲರೂ ಆಶೇರ್ಯರಲ್ಲಿ ಗೋತ್ರ ಪ್ರಧಾನರೂ ಪರೀಕ್ಷಿತರಾದ ರಣವೀರರೂ ಪ್ರಭುಶ್ರೇಷ್ಠರೂ ಆಗಿದ್ದರು. ಇವರ ವಂಶಾವಳಿಯ ಪಟ್ಟಿಯ ಪ್ರಕಾರ ಯುದ್ಧಕ್ಕೆ ಹೋಗತಕ್ಕ ಭಟರ ಸಂಖ್ಯೆಯು ಇಪ್ಪತ್ತಾರು ಸಾವಿರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಇವರೆಲ್ಲರೂ ಆಶೇರನ ಸಂತತಿಯವರು. ಇವರೆಲ್ಲರೂ ಕುಲಪ್ರಧಾನರಾಗಿದ್ದರು. ಅವರು ಸೈನಿಕರೂ ನಾಯಕರುಗಳೂ ಆಗಿದ್ದರು. ಅವರ ಕುಲದ ಇತಿಹಾಸದ ಪ್ರಕಾರ, ಒಟ್ಟು ಇಪ್ಪತ್ತಾರು ಸಾವಿರ ಮಂದಿ ಯುದ್ಧಕ್ಕೆ ಸಿದ್ಧರಾಗಿದ್ದ ಸೈನಿಕರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 7:40
5 ತಿಳಿವುಗಳ ಹೋಲಿಕೆ  

ಆ ಕಾಲದಲ್ಲಿ ಆಯಾ ಪಟ್ಟಣಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.


ಉಲ್ಲನ ಪುತ್ರರು: ಆರಹ, ಹನ್ನೀಯೇಲ್, ರಿಚ್ಯ.


ಬೆನ್ಯಾಮೀನನ ಮಕ್ಕಳು: ಚೊಚ್ಚಲಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲನನ್ನೂ, ಮೂರನೆಯವನಾದ ಅಹ್ರಹನನ್ನೂ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು