Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 7:2 - ಕನ್ನಡ ಸಮಕಾಲಿಕ ಅನುವಾದ

2 ತೋಲನ ಪುತ್ರರು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುಯೇಲ್. ಇವರು ತಮ್ಮ ಕುಟುಂಬಗಳಿಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ದಾವೀದನ ದಿವಸಗಳಲ್ಲಿ ಅವರ ಲೆಕ್ಕ 22,600 ಮಂದಿ ಆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ತೋಲನ ಮಕ್ಕಳಾದ, ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರು ತೋಲನ ವಂಶದ ಕುಟುಂಬಗಳಲ್ಲಿ ಪ್ರಧಾನ ಪುರುಷರೂ, ರಣವೀರರೂ ಆಗಿದ್ದರು. ತೋಲ ವಂಶದವರ ಸಂಖ್ಯೆಯು ದಾವೀದನ ಕಾಲದಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ತೋಲನಿಗೆ ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್, ಸಮುವೇಲ್ ಎಂಬ ಆರು ಜನ ಮಕ್ಕಳಿದ್ದರು. ಇವರು ತೋಲ ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ಧ ವೀರರೂ ಆಗಿದ್ದರು. ಅರಸ ದಾವೀದನ ಕಾಲದಲ್ಲಿ ಅವರ ವಂಶಜರ ಸಂಖ್ಯೆ - 22,600:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ತೋಲನ ಮಕ್ಕಳಾದ ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್, ಸಮುವೇಲ್ ಇವರು ತೋಲವಂಶದ ಕುಟುಂಬಗಳಲ್ಲಿ ಪ್ರಧಾನಪುರುಷರೂ ರಣವೀರರೂ ಆಗಿದ್ದರು. ತೋಲವಂಶದವರ ಸಂಖ್ಯೆಯು ದಾವೀದನ ಕಾಲದಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ತೋಲನ ಗಂಡುಮಕ್ಕಳು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರೆಲ್ಲಾ ಕುಲಪ್ರಧಾನರಾಗಿದ್ದರು. ಇವರೂ ಇವರ ಸಂತತಿಯವರೂ ರಣವೀರರಾಗಿದ್ದರು. ಅವರ ಸಂತತಿಯು ವೃದ್ಧಿಯಾದ ಕಾರಣ ಅರಸನಾದ ದಾವೀದನ ಸಮಯದಲ್ಲಿ ಅವರಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಕಾಲಾಳುಗಳು ಯುದ್ಧಕ್ಕೆ ತಯಾರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 7:2
5 ತಿಳಿವುಗಳ ಹೋಲಿಕೆ  

ಇಸ್ರಾಯೇಲರು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು. ಹೇಗೆಂದರೆ, ಕುಟುಂಬಗಳ ಮುಖ್ಯಸ್ಥರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಅಧಿಪತಿಗಳೂ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರತಿಯಂತೆ ಬರುತ್ತಿದ್ದ ವರ್ಗಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿವರ್ಗದಲ್ಲಿ 24,000 ಮಂದಿಯಿದ್ದರು.


ಇಸ್ಸಾಕಾರನ ಪುತ್ರರು: ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಮಂದಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು